ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ವೆಳ್ಳಿಕೋತ್ ಇನ್ಸ್ ಸ್ಟಿಟ್ಯೂಟ್ ನಲ್ಲಿ ಟ್ರಾವೆಲ್ ಆಂಡ್ಟ್ಯೂರಿಸಂ, ಮೈ ಸನ್ ಆಂಡ್ ಕಾಂಕ್ರೀಟ್, ಟೀವಿ. ಟೆಕ್ನೀಶಿಯನ್, ಹೂವಿನ ಕೃಷಿ, ಸೆಲ್ ಫೆÇೀನ್ ಮೆಕ್ಯಾನಿಸಂ, ಬಟ್ಟೆ ಚೀಲನಿರ್ಮಾಣ, ಟೈಲರಿಂಗ್ ಇತ್ಯಾದಿ ತರಬೇತಿ ಆರಂಭಿಸಲು ನಿರ್ಧರಿಸಲಾಗಿದೆ. ವಿದೇಶಗಳಿಂದ ಆಗಮಿಸಿ ನಿರುದ್ಯೋಗ ಅನುಭವಿಸುತ್ತಿರುವ ಮಂದಿಗೆ ಸಹಾಯ ಒದಗಿಸುವ ನಿಟ್ಟಿನಲ್ಲಿ ಈ ತರಬೇತಿಗಳನ್ನು ಆರಂಭಿಸಲಾಗುವುದು ಎಂದು ಆರ್ ಸೆಟಿ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಡಿ. ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು.
ವೆಳ್ಳಿಕೋತ್ ಇನ್ಸ್ ಸ್ಟಿಟ್ಯೂಟ್ ನಿರ್ದೇಶಕಿ ಷೆಲ್ಕಿ ವರದಿ ವಾಚಿಸಿದರು. ಜಿಲ್ಲಾ ಲೀಡ್ ಬ್ಯಾಂಕ್ ಪ್ರಬಂಧಕ ಎನ್.ಕಣ್ಣನ್, ನಬಾರ್ಡ್ ಎ.ಜಿ.ಎಂ. ಜ್ಯೋತಿ ಜಗನ್ನಾಥ್, ಜಿಲ್ಲಾ ವಾರ್ತಾ ಅಧಿಕಾರಿ ಮಧುಸೂದನನ್, ಜಿಲ್ಲಾ ಪರಿಶಿಷ್ಟ ಜಾತಿ ಅಭಿವೃಧ್ಧಿ ಅಧಿಕಾರಿ ಮೀನಾರಾಣಿ, ಕುಟುಂಬಶ್ರೀ ಜಿಲ್ಲಾ ಸಂಚಾಲಕ ಟಿ.ಟಿ.ಸುರೇಂದ್ರನ್, ಜಿಲ್ಲಾ ಮಹಿಳಾ-ಶಿಶು ಅಭಿವೃದ್ಧಿ ಅಧಿಕಾರಿ ದೇನಾ ಭರತನ್, ಜಿಲ್ಲಾ ಮಹಿಳಾ ಸಂರಕ್ಷಣೆ ಅಧಿಕಾರಿ ಎಂ.ವಿ.ಸುನಿತಾ, ಎ.ಡಿ.ಸಿ. ಜನರಲ್ ಪ್ರತಿನಿಧಿ ಶೀಲಾ ಮೊದಲಾದವರು ಉಪಸ್ಥಿತರಿದ್ದರು.