ತಿರುವನಂತಪುರ: ಬಿಎಸ್ ಎನ್ ಎಲ್ ಉದ್ಯೋಗಿ, ಪ್ರಗತಿಪರ ಕಾರ್ಯಕರ್ತೆ ಮತ್ತು ಮಾಡೆಲ್ ರೆಹನಾ ಫಾತಿಮಾ ಅವರನ್ನು ಕೊಚ್ಚಿಯ ತಾನು ಉದ್ಯೋಗದಲ್ಲಿದ್ದು ಕಳೆದ ಕೆಲವು ತಿಂಗಳ ಹಿಂದೆ ವಜಾ ಮಾಡಲ್ಪಟ್ಟರೂ ವಸತಿ ತೊರೆಯದಿರುವುದನ್ನು ಗಮನಿಸಿ, ವಸತಿಯನ್ನು ಶೀಘ್ರ ತೊರೆಯುವಂತೆ ಬಿ ಎಸ್ ಎನ್ ಎಲ್ ಸೂಚಿಸಿದೆ. ವಸತಿಯಲ್ಲಿ ಈ ಹಿಂದೆ ನಡೆದ ಪೆÇಲೀಸ್ ದಾಳಿಯಿಂದ ಬಿಎಸ್ ಎನ್ ಎಲ್ ಕಂಪನಿಯ ಇಮೇಜ್ಗೆ ಕಳಂಕ ಬಂದಿದೆ ಎಂದು ಆರೋಪಿಸಿ ಬಿಎಸ್ ಎನ್ ಎಲ್ ರಹನಾ ಫಾತಿಮಾ ಅವರಿಗೆ ನೋಟಿಸ್ ನೀಡಿದೆ. ರಹ್ನಾ ಫಾತಿಮಾ ಅವರನ್ನು ಬಂಧಿಸಲು ಬಿಎಸ್ ಎನ್ ಎಲ್ ಸೂಚಿಸಿದೆ.
ಈ ಹಿಂದೆ ಬಿಎಸ್ ಎನ್ ಎಲ್ ರಹ್ನಾ ಫಾತಿಮಾ ಅವರನ್ನು ಶಿಸ್ತು ಕ್ರಮದ ಭಾಗವಾಗಿ ವೃತ್ತಿಯಿಂದ ಹೊರ ಹಾಕಿತ್ತು. ಆದರೆ ಆ ಬಳಿಕವೂ ವಸತಿ ಖಾಲಿ ಮಾಡದಿರುವುದರಿಂದ ನೋಟಿಸ್ ನೀಡಲಾಗಿತ್ತು. ಆದರೂ ಜಪ್ಪೆನ್ನದ ರೆಹನಾ ಳಿಗೆ ಕೊಚ್ಚಿ ನಗರದಲ್ಲಿರುವ ಕ್ವಾರ್ಟರ್ಸ್ ಅನ್ನು 30 ದಿನಗಳವರೆಗೆ ಖಾಲಿ ಮಾಡಬೇಕೆಂದು ಇದೀಗ ಸೂಚಿಸಲಾಗಿದೆ. ಬಲವಂತವಾಗಿ ನಿವೃತ್ತಿಯಾದ ನಂತರವೂ ಕ್ವಾರ್ಟಸ್ರ್ನಲ್ಲಿ ಉಳಿಯಲು ಅರ್ಹತೆ ಇಲ್ಲ ಎಂದು ಬಿಎಸ್ ಎನ್ ಎಲ್ ಸಹಾಯಕ ಹಿರಿಯ ಪ್ರಬಂಧಕರ ಪತ್ರದಲ್ಲಿ ಹೇಳಲಾಗಿದೆ.
ಬಿಎಸ್ ಎನ್ ಎಲ್ ದೂರಿನನ್ವಯ ಜೂ. 25 ರಂದು ಪೋಲೀಸರು ರಹ್ನಾ ಫಾತಿಮಾ ಅವರ ಕ್ವಾರ್ಟರ್ಸ್ ಮೇಲೆ ದಾಳಿ ನಡೆಸಿದ್ದರು. ಪೆÇಕ್ಸೊ ಇಲಾಖೆಯ ತನಿಖೆಯ ಷರತ್ತುಗಳ ಅಡಿಯಲ್ಲಿ ಈ ದಾಳಿ ನಡೆಸಲಾಗಿದೆ. ರಹ್ನಾ ಫಾತಿಮಾ ತನ್ನ ಬೆತ್ತಲೆ ದೇಹದಲ್ಲಿ ಮಕ್ಕಳಿಂದ ಚಿತ್ರ ಬಿಡಿಸುವ ವಿಡಿಯೋವನ್ನು ತನ್ನ ಯೂಟ್ಯೂಬ್ ಚಾನೆಲ್‍ನಲ್ಲಿ ಅಪ್‍ಲೋಡ್ ಮಾಡಿದ್ದಳು. ದೇಹ ಮತ್ತು ರಾಜಕೀಯ ಹೆಸರಿನಲ್ಲಿ ವಿವಾದಾತ್ಮಕ ವಿಡಿಯೋ ಅಪ್‍ಲೋಡ್ ಮಾಡಿದ ಹಿನ್ನೆಲೆಯಲ್ಲಿ ಪೆÇಲೀಸರು ಈ ಮೊಕದ್ದಮೆ ಹೂಡಿದ್ದಾರೆ. ಕ್ವಾರ್ಟಸ್ರ್ನಲ್ಲಿ ನಡೆದ ದಾಳಿಗಳಲ್ಲಿ ಪೆÇಲೀಸರು ಬ್ರಷ್, ಪ್ಯಾಲೆಟ್, ಲ್ಯಾಪ್ಟಾಪ್ ಮತ್ತು ಇತರ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಹಿಂದೆ, ಬಿಎಸ್ ಎನ್ ಎಲ್ ರೆಹನಾ ಫಾತಿಮಾ ಅವರನ್ನು 18 ತಿಂಗಳ ಕಾಲ ಅಮಾನತುಗೊಳಿಸಿತ್ತು. ಇದರ ನಂತರವೇ ರಹ್ನಾಳನ್ನು ತನ್ನ ಉದ್ಯೋಗದಿಂದ ವಜಾಗೊಳಿಸಲಾಯಿತು. ಸಂಸ್ಥೆಯ ಖ್ಯಾತಿ ಮತ್ತು ಗಳಿಕೆಯ ಮೇಲೆ ರೆಹಮಾನಳ ಅವ್ಯವಸ್ಥಿತ ನಡೆಗಳು ಪರಿಣಾಮ ಬೀರುತ್ತಿದೆ ಎಂದು ಬಿಎಸ್ ಎನ್ ಎಲ್ ತಿಳಿಸಿದೆ.