ತಿರುವನಂತಪುರ: ಸೋಮವಾರ ಆರಂಭಗೊಂಡ ಶೀಕ್ಷಣ ಇಲಾಖೆಯ ಕೈಟ್ ವಿಕ್ಟರ್ ಚಾನೆಲ್ ನಲ್ಲಿ ತರಗತಿ ನಡೆಸುವ ಶಿಕ್ಷಕಿಯರನ್ನು ಅವಹೇಳನಗೈದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿದವರ ವಿರುದ್ದ ಕೇರಳ ಮಹಿಳಾ ಆಯೋಗ ದೂರು ನೀಡಿದೆ.
ಮಕ್ಕಳಿಗೆ ಪಾಠ ಕಲಿಸಿದ ಶಿಕ್ಷಕರನ್ನು ಅವಮಾನಿಸಿದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ರಾಜ್ಯ ಮಹಿಳಾ ಆಯೋಗದ ಸದಸ್ಯೆ ಡಾ. ಶಾಹಿದಾ ಕಮಲ್ ನಿರ್ದೇಶನದಂತೆ ಆಯೋಗ ಸ್ವಯಂ ದೂರು ದಾಖಲಿಸಿದೆ.
ತಿರುವನಂತಪುರ ಸೈಬರ್ ಕ್ರೈಮ್ ಪೆÇಲೀಸರು ಪ್ರಕರಣವನ್ನು ದಾಖಲಿಸಿದ್ದಾರೆ. ಈ ಮಧ್ಯೆ ಮಂಗಳವಾರ ರಾತ್ರಿ ಆತಂಕಕಾರಿ ಅಂಶವೊಂದು ಬೆಳಕಿಗೆ ಬಂದಿದೆ. ಶಿಕ್ಷಕಿಯರ ಬಗ್ಗೆ ಅವಹೇಳನಕರ ಪೋಸ್ಟ್ ಹಾಕಿರುವುದು ವಿದ್ಯಾರ್ಥಿಗಳೇ ಆಗಿರುವುದು ಆತಂಕ ಮೂಡಿಸಿದೆ.
ಈ ಹಿನ್ನೆಲೆಯಲ್ಲಿ ವಾಟ್ಸ್ ಆಪ್ ಗಳಲ್ಲಿ ಅವಹೇಳನ ಪೋಸ್ಟ್ ಹಂಚಿದ ನಾಲ್ವರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದ ಪೋಲೀಸರು ವಿಚಾರಣೆ ನಡೆಸಿ ಬಿಟ್ಟಿದ್ದಾರೆ. ಆದರೆ ಅವರ ಮೊಬೈಲ್ ಪೋನ್ ಗಳನ್ನು ಸೀಸ್ ಮಾಡಲಾಗಿದೆ ಎಂದು ಪೋಲೀಸರು ತಿಳಿಸಿರುವರು. ಈ ಸಂಬಂಧ ಇನ್ನಷ್ಟು ವಿದ್ಯಾರ್ಥಿಗಳ ವಿಚಾರಣೆಯ ಸಾಧ್ಯತೆ ಇದೆ.