ಬದಿಯಡ್ಕ: ಪೆರಡಾಲ, ಬೇಳ ಸಹಿತ ಬದಿಯಡ್ಕ-ನೀರ್ಚಾಲು ಪರಿಸರದ ಹಿರಿಯ ತಲೆಮಾರಿನ ವೈದ್ಯರಾಗಿದ್ದ ಜನಾನುರಾಗಿ ಉಬ್ಬಾನ ಡಾಕ್ಟರ್ ಎಂದೇ ಪ್ರಸಿದ್ದರಾಗಿದ್ದ ಗೋಪಾಲಕೃಷ್ಣ ಭಟ್(83) ಇಂದು ಮಂಗಳೂರಿನ ಪುತ್ರನ ಮನೆಯಲ್ಲಿ ನಿಧನರಾದರು.
ಹಿಂದಿನ ಮದ್ರಾಸ್ ವಿಶ್ವ ವಿದ್ಯಾನಿಲಯದಿಂದ ಆಯುರ್ವೇದ ಶಿರೋಮಣಿ ಪದವಿ ಪಡೆದು ನೀರ್ಚಾಲಿನಲ್ಲಿ ಹಲವು ದಶಕಗಳ ಕಾಲ ವೈದ್ಯರಾಗಿ ಸೇವೆ ಸಲ್ಲಿಸಿದ್ದರು. ಜನಸಾಮಾನ್ಯರಲ್ಲಿ ತಮ್ಮ ವಿಶಿಷ್ಟ ಶೈಲಿಯ ಮಾತುಗಾರಿಕೆ, ರೋಗಿಗಳೊಂದಿಗೆ ವಿಶಿಷ್ಟ ಸಂವಹನ, ರೋಗ ನಿರ್ಣಯ-ಚಿಕಿತ್ಸೆಗಳ ಮೂಲಕ ಜನಪ್ರಿಯತೆಗಳಿಸಿ ಅಸಾಮಾನ್ಯ ಪ್ರತಿಭಾಶಾಲಿ ವೈದ್ಯರಾಗಿ ಹೆಸರುಪಡೆದಿದ್ದರು. ವೈದ್ಯೋ ನಾರಾಯಣೋ ಹರಿಃ ಎಂಬ ಆರ್ಷ ಪರಂಪರೆಯಂತೆ ಹಣದ ಮುಖ ನೋಡದೆ ವೈದ್ಯ ಧರ್ಮವನ್ನು ಎತ್ತಿಹಿಡಿದವರಾಗಿದ್ದರು.
ಮೃತರು ಪತ್ನಿ, ಇಬ್ಬರು ಪುತ್ರರು, ಪುತ್ರಿ ಸಹಿತ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.