ಕಾಸರಗೋಡು: ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ನೇತೃತ್ವದಲ್ಲಿ ನಡೆಯುವ ದೂರು ಪರಿಹಾರ ಅದಾಲತ್ ವಿವಿಧ ತಾಲೂಕು ಮಟ್ಟದಲ್ಲಿ ಇನ್ನು ಮುಂದೆ ಆನ್ ಲೈನ್ ಮೂಲಕ ನಡೆಯಲಿದೆ. ಈ ಅದಾಲತ್ ಗಿರುವ ವಿವಿಧ ತಾಲೂಕು ಮಟ್ಟದ ಅರ್ಜಿಗಳನ್ನು ಜೂ.12ರಂದು ರಾತ್ರಿ 12 ಗಂಟೆ ವರೆಗೆ ಸಲ್ಲಿಸಬಹುದು. ಅದಾಲತ್ ನಲ್ಲಿ ಸಿ.ಎಂ.ಡಿ.ಆರ್.ಎಫ್. ಚಿಕಿತ್ಸಾ ಆರ್ಥಿಕ ಸಹಾಯ, ಪಡಿತರ ಚೀಟಿ ಸಂಬಧ ದೂರುಗಳು, ಎಲ್.ಆರ್.ಎಂ. ಕೇಸುಗಳು, ಸ್ಟಾ ಟ್ಯು ಟರಿ ರೂಪದಲ್ಲಿ ಲಭಿಸಬೇಕಾದ ಪರಿಹಾರ ಇತ್ಯಾದಿಗಳನ್ನು ಹೊರತುಪಡಿಸಿ ದೂರು ಸಲ್ಲಿಸಬಹುದು. ಅದಾಲತ್ ಗಿರುವ ಅರ್ಜಿಗಳನ್ನು ಅಕ್ಷಯ ಕೇಂದ್ರಗಳ ಮೂಲಕತಿತಿತಿ.eಜisಣಡಿiಛಿಣ.ಞeಡಿಚಿಟಚಿ.gov.iಟಿಎಂಬ ವೆಬ್ ಸೈಟ್ ಮೂಲಕವೂ ಆನ್ ಲೈನ್ ಆಗಿ ಸಲ್ಲಿಸಬಹುದು.
ಜೂ.15ರಂದು ಮಂಜೇಶ್ವರ ತಾಲೂಕಿನಲ್ಲಿ, 17ರಂದು ಕಾಸರಗೋಡು ತಾಲೂಕಿನಲ್ಲಿ, 19ರಂದು ಹೊಸದುರ್ಗ ತಾಲೂಕಿನಲ್ಲಿ, 22ರಂದು ವೆಳ್ಳರಿಕುಂಡ್ ತಾಲೂಕಿನಲ್ಲಿ ಆನ್ ಲೈನ್ ಅದಾಲತ್ ಗಳು ನಡೆಯಲಿವೆ. ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆಯ ವರೆಗೆ ಜಿಲ್ಲಾಧಿಕಾರಿ ವೀಡಿಯೋ ಕಾನ್ ಫೆರೆನ್ಸ್ ಮೂಲಕ ಅದಾಲತ್ ನಲ್ಲಿ ಭಾಗವಹಿಸುವರು. ದೂರುಗಳಿಗೆ ಸಂಬಂಧಿಸಿ ಜಿಲ್ಲಾ ಮಟ್ಟದ ಇಲಾಖೆಗಳಮುಖ್ಯಸ್ಥರು ಅದಾಲತ್ ದಿನದ ಮುಂಚಿತವಾಗಿ ನೀಡುವ ಉತ್ತರ ತೃಪ್ತಿಕರವಲ್ಲದೇ ಇದ್ದಲ್ಲಿ ಅಕ್ಷಯ ಕೇಂದ್ರದ ವೀಡಿಯೋ ಕಾನ್ ಫೆರೆನ್ಸ್ ಸೌಲಭ್ಯ ಮೂಲಕ ಅರ್ಜಿದಾರ ಜಿಲ್ಲಾಧಿಕಾರಿ ಅವರನ್ನು ಸಂಪರ್ಕಿಸಬಹುದು.