ಉಪ್ಪಳ: ಪೈವಳಿಕೆ ಸಮೀಪದ ಜೋಡುಕಲ್ಲು ನಿವಾಸಿ, ಯಕ್ಷಗಾನ ಪ್ರಸಾದನ ಕಲಾವಿದ ವಿಷ್ಣು ಪುರುಷ(65)ಇಂದು ಬೆಳಿಗ್ಗೆ ಅಲ್ಪಕಾಲದ ಅಸೌಖ್ಯದಿಂದ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದವರು ಮೃತಪಟ್ಟರು.
ಬಾಲ್ಯದಿಂದಲೇ ಯಕ್ಷಗಾನ ಆಸಕ್ತರಾಗಿ ವಿವಿಧ ಯಕ್ಷಗಾನ ಮೇಳಗಳಲ್ಲಿ ಸೇವೆ ಸಲ್ಲಿಸಿದ್ದರು. ಬಳಿಕ ಪೈವಳಿಕೆಯ ದಿ.ದೇವಕಾನ ಕೃಷ್ಣ ಭಟ್ ಅವರ ಸಾರಥ್ಯದ ಶ್ರೀಗಣೇಶ ಕಲಾವೃಂದದಲ್ಲಿ ಸೇರ್ಪಡೆಗೊಂಡು ಸುಮಾರು 25 ವರ್ಷಗಳಿಗಿಂತಲೂ ಹೆಚ್ಚು ಕಾಲ ಪ್ರಸಾದನ ಕಲಾವಿದರಾಗಿ ದುಡಿಯುತ್ತಿದ್ದರು. ಕಿರೀಟ, ಮಣಿ ಸಾಮಗ್ರಿಗಳ ತಯಾರಿಯಲ್ಲಿ, ನೇಪಥ್ಯ ಕಲಾವಿದರಾಗಿ ತಮ್ಮದೇ ಕೊಡುಗೆಗಳ ಮೂಲಕ ಗುರುತಿಸಿಕೊಂಡಿದ್ದರು. ಇವರ ಸೇವಾ ತತ್ಪರತೆಯನ್ನು ಮನ್ನಿಸಿ ಹಲವಾರು ಸಂಘಸಂಸ್ಥೆಗಳು ಗೌರವಾಭಿನಂದನೆಗಳಿಂದ ಪುರಸ್ಕøರಿಸಿದ್ದವು.
ಮೃತರು ಪತ್ನಿ, ಮೂವರು ಪುತ್ರರ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ. ಶ್ರೀಗಣೇಶ ಕಲಾವೃಂದ ಪೈವಳಿಕೆ, ಬೆನಕ ಯಕ್ಷಕಲಾ ವೇದಿಕೆ ಪೈವಳಿಕೆ, ಕಲಾವಿದರ ಸಂಘಟನೆಯಾದ ಸವಾಕ್ ಕಾಸರಗೋಡು ಜಿಲ್ಲಾ ಸಮಿತಿ ಸಂತಾಪ ಸೂಚಿಸಿದೆ.