ಕುಂಬಳೆ: ಡೆಂಗೆ ಜ್ವರ ಹೆಚ್ಚಳಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕುಂಬಳೆ ಆರೋಗ್ಯ ಬ್ಲಾಕ್ ವ್ಯಾಪ್ತಿಯಲ್ಲಿ ಪ್ರತಿರೋಧ ಚಟುವಟಿಕೆಗಳನ್ನು ಚುರುಕುಗೊಳಿಸಲಾಗಿದೆ. ಈ ಬ್ಲಾಕ್ ನಲ್ಲಿ 840 ಸ್ಕ್ವಾ ಡ್ ಗಳು ಪ್ರತಿರೋಧ ನಿಟ್ಟಿನಲ್ಲಿ ರಂಗಕ್ಕಿಳಿದಿವೆ. ಕುಂಬಳೆ, ಬದಿಯಡ್ಕ, ಪುತ್ತಿಗೆ, ಮಧೂರು, ಎಣ್ಮಕಜೆ, ಕುಂಬ್ಡಾಜೆ, ಬೆಳ್ಳೂರು ಗ್ರಾಮಪಂಚಾಯತಿಗಳ 119 ವಾರ್ಡ್ ಗಳಲ್ಲಿ ಈ ಸ್ಕ್ವಾ ಡ್ ಗಳು ಚಟುವಟಿಕೆ ನಡೆಸಲಿವೆ. ಜನಪ್ರತಿನಿಧಿಗಳು, ಆರೋಗ್ಯ ಕಾರ್ಯಕರ್ತರು, ಆಶಾ, ಅಂಗನವಾಡಿ, ಕುಟುಂಬಶ್ರೀ ಕಾರ್ಯಕರ್ತರು, ಯೂತ್ ಕ್ಲಬ್, ಇತರ ಸ್ವಯಂ ಸೇವಾ ಸಂಘಟನೆಗಳು ಸಹಿತ ಸುಮಾರು 8400 ಮಂದಿ ಸದಸ್ಯರು ಸ್ಕ್ಯಾಡ್ ಗಳಲ್ಲಿ ಇದ್ದಾರೆ. ವಾರ್ಡ್ ಮಟ್ಟದ ಶುಚಿತ್ವ ಸಮಿತಿಗಳ ಉಸ್ತುವಾರಿಯಲ್ಲಿ ಸ್ಕ್ಯಾಡ್ ಗಳ ರಚನೆ ನಡೆದಿದೆ. ಸೊಳ್ಳೆ ಸಂತನೋತ್ಪತ್ತಿ ಕೇಂದ್ರ ಗಳ ನಾಶ, ಜನಜಾಗೃತಿ ಸಹಿತ ಚಟುವಟಿಕೆಗಳನ್ನು ಇವರು ನಡೆಸುವರು.
ಕುಂಬಳೆ ಆರೋಗ್ಯ ಬ್ಲಾಕ್ ನಲ್ಲಿ ಈ ವರೆಗೆ 23 ಡೆಂಗೆಜ್ವರ ಪ್ರಕರಣಗಳು ಖಚಿತಗೊಂಡಿವೆ. 235 ಮಂದಿಯಲ್ಲಿ ರೋಗಲಕ್ಷಣ ಪತ್ತೆಯಾಗಿದೆ.
35 ಸಾವಿರ ಮನೆಗಳಿಗೆ ಸಂದರ್ಶನ:
ಪ್ರತಿರೋಧ ಚಟುವಟಿಕೆಗಳ ಅಂಗವಾಗಿ ಈ ವ್ಯಾಪ್ತಿಯ 35 ಸಾವಿರ ಮನೆಗಳಿಗೆ ಸಂದರ್ಶನ ನಡೆಸಲಾಗುವುದು. ಮನೆಗಳ ಆವರಣದಲ್ಲಿ ಇರಬಹುದಾದ ಸೊಳ್ಳೆ ಸಂತಾನೋತ್ಪತ್ತಿ ಕೇಂದ್ರಗಳನ್ನು ನಾಸಪಡಿಸಲಾಗುವುದು, ಪ್ರತಿ ಭಾನುವಾರ ಡ್ರೈ ಡೇ (ಶುಚೀಕರಣ ಚಟುವಟಿಕೆ)ಆಚರಿಸಲು ಸಲಹೆನೀಡಲಾಗುವುದು. ಈ ಪ್ರಚಾರದ ಜೊತೆಗೆ ಈ ಬಗ್ಗೆ ನಿಗಾ ಇರಿಸುವಿಕೆಯೂ ನಡೆಯಲಿದೆ.
ಕ್ರಿಯಾ ಯೋಜನೆ ರಚನೆ:
ಬ್ಲಾಕ್ ನ 7 ಗ್ರಾಮಪಂಚಾಯತ್ ಗಳಲ್ಲೂ ಪಂಚಾಯತ್ ಮಟ್ಟದ ಇಂಟರ್ ಸೆಕ್ಟರ್ ನಲ್ಲಿ ಸಂಚಲನಾ ಕೋರ್ಡಿನೇಶನ್ ಸಮಿತಿ ಸಭೆ ಸೇರಿ ಕ್ರಿಯಾ ಯೋಜನೆ ರಚಿಸಲಾಗಿದೆ. ಈ ಪ್ರಕಾರ 119 ವಾರ್ಡ್ ಮಟ್ಟದಲ್ಲೂ ಶುಚಿತ್ವ ಸಮಿತಿಗಳ ಸಭೆ ಸೇರಿ ವಾರ್ಡ್ ಮಟ್ಟದ ಕ್ರಿಯಾ ಯೋಜನೆ ತಯಾರಿ ನಡೆಸಲಾಗುತ್ತಿದೆ.
1200 ಜಾಗೃತಿ ತರಗತಿ:
ಕೋವಿಡ್ ನಿಯಂತ್ರಣ ಸಂಬಂಧ ರಚಿಸಿರುವ ಕಟ್ಟುನಿಟ್ಟುಗಳನ್ನು ಪಾಲಿಸಿಕೊಂಡು ಡೆಂಗೆ ಪ್ರತಿರೋಧ ನಡೆಸುವ ನಿಟ್ಟಿನಲ್ಲಿ ಸುಮಾರಿ 1200 ಜಾಗೃತಿ ತರಗತಿಗಳನ್ನು ನಡೆಸಲಾಗುವುದು. ಅಡಕೆ, ರಬ್ಬರ್ ತೋಟಗಳ ಮಾಲೀಕರ ಸಭೆ ವಾರ್ಡ್ ಮಟ್ಟದಲ್ಲಿ ನಡೆಸಲಾಗುವುದು. ಸೊಳ್ಳೆ ಸಂತಾನೋತ್ಪತ್ತಿ ಕೇಂದ್ರಗಳ ನಾಶ ನಿಟ್ಟಿನಲ್ಲಿ ಹಾಳೆಗಳ ತೆರವು, ಗೆರಟೆ ಮಗುಚಿ ಇರಿಸುವ ಇತ್ಯಾದಿ ಚಟುವಟಿಕೆಗಳು ನಡೆಯುತ್ತಿವೆ. ಸಾರ್ವಜನಿಕ ಸ್ಥಳಗಳಲ್ಲಿ, ಕೇಂದ್ರಗಳಲ್ಲಿ ತಪಾಸಣೆ ಬಿಗಿಗೊಳಿಸಲಾಗಿದೆ ಎಂದು ಆರೋಗ್ಯ ಮೇಲ್ವಿಚಾರಕ ಬಿ.ಅಶ್ರಫ್ ತಿಳಿಸಿರುವರು. ಡೆಂಗೆ ಜ್ವರ ಹೆಚ್ಚಳಗೊಂಡಿರುವ ವಾರ್ಡ್ ಗಳಲ್ಲಿ ಫಾಗಿಂಗ್, ಸ್ಪ್ರೇ ಯಿಂಗ್ ಸಹಿತ ಚಟುವಟಿಕೆಗಳು ನಡೆದುಬರುತ್ತಿವೆ.
ಗಪ್ಪಿ ಮೀನು ಸಾಕಣೆ:
ಡೆಂಗೆ ಜ್ವರಕ್ಕೆ ಕಾರಣವಾಗುವ ಸೊಳ್ಳೆಗಳ ನಶೀಕರಣಕ್ಕೆ ಗಪ್ಪಿ ಮೀನುಗಳ ಸಾಕಣೆ ಪ್ರಯೋಜನಕಾರಿ ಎಂಬುದು ಈಗಾಗಲೇ ಸಾಬೀತಾಗಿದೆ. ಈ ನಿಟ್ಟಿನಲ್ಲಿ ನೀರು ಕಟ್ಟಿನಿಲ್ಲುವ ಪ್ರದೇಶಗಳಲ್ಲಿ ಗಪ್ಪಿ ಮೀನು ಸಾಕಣೆ ನಡೆಸಲಾಗುವುದು. ಈಗಾಗಲೇ ಇಂಥಾ ಹತ್ತು ಕಡೆಗಳಲ್ಲಿ ಗಪ್ಪಿ ಈನುಗಳ ಸಾಕಣೆ ಆರಂಭಗೊಂಡಿದೆ. ಇದನ್ನು ಉಳೊಇದ ಕಡೆಗಳಿಗೂ ವಿಸ್ತರಣೆ ಗೊಳಿಸಲಾಗುವುದು ಎಂದು ಆರೋಗ್ಯ ಮೇಲ್ವಿಚಾರಕ ತಿಳಿಸಿದರು.