ಕಾಸರಗೋಡು/ಮಂಗಳೂರು: ಗಡಿನಾಡು ಕಾಸರಗೋಡು ಹೆಮ್ಮೆ ಪಡುವಂತೆ ಕಾಸರಗೋಡು ಜಿಲ್ಲಾ ಪೋಲೀಸ್ ವರಿಷ್ಠೆಯಾಗಿ ಅಧಿಕಾರ ಸ್ವೀಕರಿಸಿರುವ ಕನ್ನಡತಿ ಡಿ.ಶಿಲ್ಪಾ ಅವರೊಂದಿಗೆ ಮಂಗಳೂರು ಆಕಾಶವಾಣಿ ನಿಲಕ ನಡೆಸಿದ ವಿಶೇಷ ಸಂದರ್ಶನ ಈದಿನ(ಬುಧವಾರ) ಬೆಳಿಗ್ಗೆ 9.30ಕ್ಕೆ ಪ್ರಸಾರವಾಗಲಿದೆ ಎಂದು ಮಂಗಳೂರು ಬಾನುಲಿ ನಿಲಯ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಿದೆ.
ಕೋವಿಡ್ ಮಹಾಮಾರಿಯ ಜಟಿಲ ಸ್ಥಿತಿಯಲ್ಲಿ ಕಾಸರಗೋಡು ಜಿಲ್ಲಾ ಮೊದಲ ಪೋಲೀಸ್ ವರಿಷ್ಠೆಯಾಗಿ ಅಧಿಕಾರ ಸ್ವೀಕರಿಸಿರುವ ಡಿ.ಶಿಲ್ಪಾ ಮೂಲತಃ ಕನ್ನಡತಿಯಾಗಿರುವುದು ಗಡಿನಾಡಿಗೆ ಹೆಮ್ಮೆಯ ವಿಷಯವಾಗಿದ್ದು, ಈ ಹಿನ್ನೆಲೆಯಲ್ಲಿ ಮಂಗಳೂರು ಬಾನುಲಿ ನಡೆಸಿರುವ ವಿಶೇಷ ಸಂದರ್ಶನ ಸ್ತುತ್ಯರ್ಹವಾದುದೆಂಬ ಅಭಿಪ್ರಾಯ ಕೇಳಿಬಂದಿದೆ.
ಡಿ.ಶಿಲ್ಪಾ ಅವರು ಅತ್ಯಂತ ದಕ್ಷ, ಪ್ರಾಮಾಣಿಕ ಹಾಗೂ ಚುರುಕು ಸ್ವಭಾವದ, ಜನಪರ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
2016 ಐ.ಪಿ.ಎಸ್. ಬ್ಯಾಚ್‍ನಲ್ಲಿ ಶಿಲ್ಪಾ ಅವರನ್ನು ಪೆÇ್ರಬೇಷನ್ ಅಂಗವಾಗಿ ಕಾಸರಗೋೀಡು ಎಎಸ್‍ಪಿಯಾಗಿ ನೇಮಿಸಲಾಗಿತ್ತು. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಶಿಲ್ಪಾ ಅವರನ್ನು ಕಣ್ಣೂರು ಜಿಲ್ಲಾ ಎಎಸ್‍ಪಿಯಾಗಿ ನೇಮಿಸಲಾಗಿತ್ತು. ಆ ಬಳಿಕ ಕೊರೊನಾ ಲಾಕ್ ಡೌನ್ ಘೋಷಣೆಯ ಬೆನ್ನಲ್ಲೇ ಅವರನ್ನು ಕಾಸರಗೋಡಿಗೆ ಐ.ಜಿ. ವಿಜಯ ಸಖಾರೆ ಅವರೊಂದಿಗೆ ನೇಮಿಸಲಾಯಿತು. ಕಳೆದ ಶುಕ್ರವಾರ ರಾತ್ರಿ ಶಿಲ್ಪಾ ಅವರನ್ನು ಕಾಸರಗೋಡು ಎಸ್.ಪಿ.ಯಾಗಿ ನೇಮಿಸಲಾಗಿದೆ.
ಮೂಲತಃ ಬೆಂಗಳೂರು ಎಚ್ ಎಸ್ ಆರ್ ಲೇ ಔಟ್ ನಿವಾಸಿಯಾಗಿರುವ ಡಿ.ಶಿಲ್ಪಾ ಅವರು ಇಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಪದವೀಧರೆ, ಬಿಸಿನೆಸ್ ಆಂಡ್ ಎಡ್ಮಿನಿಸ್ಟ್ರೇóನ್ ನಲ್ಲಿ ಉನ್ಬನತ ಪದವಿಯನ್ನೂ ಪಡೆದವರಾಗಿದ್ದಾರೆ. ಬಳಿಕ ಹೈದರಾಬಾದ್ ಮ,ತ್ತು ತೃಶೂರ್ ಗಳಲ್ಲಿ ಪೋಲೀಸ್ ತರಬೇತಿ ಪಡೆದವರಾಗಿದ್ದಾರೆ. ತರಬೇತಿಯ ಬಳಿಕ ಮೊದಲ ಬಾರಿಗೆ ಕಾಸರಗೋಡಿನಲ್ಲೇ ಉದ್ಯೋಗ ಪಡೆದುಕೊಂಡ ಇವರು ತಮ್ಮ ದಕ್ಷ, ಪ್ರಾಮಾಣಿಕ ಸೇವೆಗಳ ಮೂಲಕ ಗಮನ ಸೆಳೆದವರಾಗಿದ್ದಾರೆ.