ತಿರುವನಂತಪುರ: ಕೋವಿಡ್ ಹಿನ್ನೆಲೆಯಲ್ಲಿ ಶಾಲೆಗಳ ಬದಲಿಗೆ ಆನ್ ಲೈನ್ ತರಗತಿಯಾದ ಕೈಟ್ ವಿಕ್ಟರ್ಸ್ ಚಾನೆಲ್ ನಲ್ಲಿ ತರಗತಿ ನಡೆಸುವ ಶಿಕ್ಷಕಿಯರನ್ನು ಅವಹೇಳನಗೈದು ಜಾಲತಾಣಗಳಲ್ಲಿ ಪ್ರಚುರಪಡಿಸಿದ ಪ್ರಕರಣದ ಬೆನ್ನಲ್ಲೇ ಮಂಗಳವಾರ ರಾತ್ರಿ ವಾಟ್ಸ್ ಆಫ್ ಗುಂಪೊಂದರ ನಾಲ್ವರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.
ಬಂಧಿತರು ಪ್ಲಸ್ ಟು ವಿದ್ಯಾರ್ಥಿಗಳಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಜೂನ್ ಒಂದರಂದು ವಿಕ್ಟರ್ಸ್ ಚಾನೆಲ್ ನಲ್ಲಿ ಒಂದನೇ ತರಗತಿಯಿಂದ ಪ್ಲಸ್ ಟು ವರೆಗಿನ ಆನ್ ಲೈನ್ ತರಗತಿಗಳು ಆರಂಭಗೊಂಡಿತ್ತು. ಸೋಮವಾರದ ಮೊದಲ ದಿನ ವಿವಿಧ ಆನ್ ಲೈನ್ ತರಗತಿಗಳನ್ನು ನಿರ್ವಹಿಸಿದ ಕೆಲವು ಶಿಕ್ಷಕಿಯರನ್ನು ಅವಹೇಳನಗೈದ ದೂರಿನನ್ವಯ ತಿರುವನಂತಪುರದ ಸೈಬರ್ ಕ್ರೈ ವಿಭಾಗ ದೂರು ದಾಖಲಿಸಿತ್ತು.
ಕೈಟ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಡಿಜಿಪಿ ಮನೋಜ್ ಅಬ್ರಹಾಂ ಅವರಿಗೂ ಸಾಮಾಜಿಕ ಮಾಧ್ಯಮಗಳಾದ ಫೇಸ್‍ಬುಕ್, ಯೂಟ್ಯೂಬ್, ಇನ್‍ಸ್ಟಾಗ್ರಾಮ್ ಮತ್ತು ವಾಟ್ಸಾಪ್ ನಲ್ಲಿ ಪ್ರಕಟಗೊಂಡ ಅವಹೇಳನ ಸಂದೇಶದ ವಿರುದ್ದ ದೂರು ನೀಡಲಾಗಿತ್ತು. ಈ ದೂರುಗಳ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗಿದೆ.
ಬಂಧಿತ ಎಲ್ಲಾ ನಾಲ್ಕು ವಿದ್ಯಾರ್ಥಿಗಳು ಹೊಸದಾಗಿ ರಚಿಸಲಾದ ವಾಟ್ಸಾಪ್ ಗುಂಪಿನ ಸದಸ್ಯರಾಗಿದ್ದಾರೆ. ಅವರ ಮೊಬೈಲ್ ಫೆÇೀನ್ ಗಳನ್ನು ಸೈಬರ್ ಕ್ರೈಮ್ ಪೆÇಲೀಸರು ವಶಪಡಿಸಿಕೊಂಡಿದ್ದಾರೆ. ವಾಟ್ಸಾಪ್ ಗ್ರೂಪ್ ನಿರ್ವಾಹಕ ಮಲಪ್ಪುರಂನ ವ್ಯಕ್ತಿಯೋರ್ವನನ್ನೂ ಹುಡುಕುವುಕ್ಕೆ ಪೋಲೀಸರು ತನಿಖೆ ತೀವ್ರಗೊಳಿಸಿದ್ದಾರೆ.