ಮುಳ್ಳೇರಿಯ: ಇಂಧನ ಬೆಲೆಯೇರಿಕೆ ಹಿಂತೆಗೆದು ಕೊಳ್ಳಬೇಕೆಂದು ಆಗ್ರಹಿಸಿ, ಕೇಂದ್ರ-ರಾಜ್ಯ ಸರ್ಕಾರದ ಜನದ್ರೋಹಿ ನೀತಿಯ ವಿರುದ್ಧ ಕಾಂಗ್ರೆಸ್ ಅಖಿಲ ಭಾರತ ಮಟ್ಟದಲ್ಲಿ ನಡೆಸುತ್ತಿರುವ ಆಂದೋಲನದಂಗವಾಗಿ ಕಾರಡ್ಕ ಮಂಡಲ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಸೋಮವಾರ ಮುಳ್ಳೇರಿಯದಲ್ಲಿ ಧರಣಿ ನಡೆಯಿತು.
ಧರಣಿಯನ್ನು ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಸಿ.ಪ್ರಭಾಕರನ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮಂಡಲ ಅಧ್ಯಕ್ಷ ಪುರುಷೋತ್ತಮನ್ ಅಧ್ಯಕ್ಷತೆ
ವಹಿಸಿದ್ದರು. ಜಿಲ್ಲಾ-ಬ್ಲಾಕ್ ನೇತಾರರಾದ ಎ.ಜಿ.ನಾಯರ್, ವೇಣುಗೋಪಾಲನ್ ಮಾಸ್ತರ್, ಬಲರಾಮನ್ ನಾಯರ್, ಶ್ರೀಧರನ್ ಅಯರ್‍ಕ್ಕಾಡ್, ಇಬ್ರಾಹಿಂ ಹಾಜಿ, ಗೋವಿಂದ ಭಟ್, ಎ.ಕೆ.ಶಂಕರ, ಎಂ.ಮಾಧವನ್ ನಾಯರ್ ಮೊದಲಾದವರು ಮಾತನಾಡಿದರು.
ಮಂಡಲ ಪದಾಧಿಕಾರಿಗಳಾದ ಗೋಪಕುಮಾರ್ ಸ್ವಾಗತಿಸಿ, ವಿನೋದ್ ನಂಬ್ಯಾರ್ ವಂದಿಸಿದರು.