ಕೊಚ್ಚಿ: ಮಿಸ್ಟರ್ ಯೂನಿವರ್ಸ್ ಚಿತ್ರೇಶ್ ನಟೇಶನ್ ಅವರು ಭಾನುವಾರ ವಿವಾಹಿತರಾದರು. ವಧು ಉಜ್ಬೇಕಿಸ್ತಾನ್ ಮೂಲದ ನಜೀವಾ ನಾರ್ಸೀವಾ. ಇವರಿಬ್ಬರು ಬಹಳ ದಿನಗಳಿಂದ ಡೇಟಿಂಗ್ ಮಾಡುತ್ತಿದ್ದರು.
ಎರ್ನಾಕುಳಂನ ಪಾವಕ್ಕುಳಂ ದೇವಸ್ಥಾನದಲ್ಲಿ ಭಾನುವಾರ ವಿವಾಹ ನಡೆಯಿತು. ಕರೋನಾ ಶಿಷ್ಟಾಚಾರದ ಅನುಸಾರ ಸ್ನೇಹಿತರು, ಬಂಧುಗಳು ಮಾತ್ರ ಮಿತಿಗೊಳಪಟ್ಟು ಮದುವೆಯಲ್ಲಿ ಪಾಲ್ಗೊಂಡರು. ಸಂಸದ ಹಿಬಿ ಈಡನ್, ಶಾಸಕ ಟಿ.ಜೆ. ವಿನೋದ್ ಭಾಗವಹಿಸಿದ್ದರು.
2019 ರಲ್ಲಿ ದಕ್ಷಿಣ ಕೊರಿಯಾದಲ್ಲಿ ನಡೆದ 11 ನೇ ವಿಶ್ವ ಬಾಡಿ ಬಿಲ್ಡಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಕೊಚ್ಚಿಯ ವದುತಲಾ ಮೂಲದ ಚಿತ್ರೇಶ್ ಯೂನಿವರ್ಸ್ ಪ್ರಶಸ್ತಿಯನ್ನು ಗೆದ್ದಿದ್ದರು. ಭಾರತೀಯರು ಮಿಸ್ಟರ್ ಯೂನಿವರ್ಸ್ ಎಂಬ ಬಿರುದನ್ನು ಗಳಿಸುತ್ತಿರುವುದು ಇದೇ ಮೊದಲು.
ಚಿತ್ರೆಶ್ 55-110 ಕೆ.ಜಿ ವರೆಗಿನ ಒಂಬತ್ತು ವಿಶ್ವ ಚಾಂಪಿಯನ್‍ಗಳನ್ನು ಸೋಲಿಸಿದ್ದಾರೆ. ಅವರು ದೆಹಲಿಯಲ್ಲಿ ಫಿಟ್ನೆಸ್ ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.