ತಿರುವನಂತಪುರ: ಗರ್ಭಿಣಿ ಆನೆ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭರವಸೆ ನೀಡಿದ್ದಾರೆ. ಆರೋಪಿಗಳ ಪತ್ತೆಗೆ ವಿಶೇಷ ತಂಡವನ್ನೂ ರಚಿಸಲಾಗಿದೆ.
ಮಲಪ್ಪುರ ಜಿಲ್ಲೆಯ ಸೈಲೆಂಟ್ ವ್ಯಾಲಿಯಲ್ಲಿ ಆಹಾರ ಅರಸಿ ಗ್ರಾಮಕ್ಕೆ ಬಂದಿದ್ದ ಸೋಟಕ ತುಂಬಿಸಿ ತಿನ್ನಲು ಕೊಡುವ ಮೂಲಕ ಆನೆಯ ದಾರುಣ ಸಾವಿಗೆ ಕಾರಣವಾಗಿದ್ದರು.
ಬೆಳೆ ನಾಶ ಮಾಡಲು ಕಾಡು ಹಂದಿಗಳ ನಿಗ್ರಹಕ್ಕಾಗಿ ಸೋಟಕಗಳನ್ನಿರಿಸಲಾಗುತ್ತಿದೆ. ಆದರೆ ವನ್ಯ ಜೀವಿ ರಕ್ಷಣಾ ಕಾಯ್ದೆಯನ್ವಯ ಯಾವುದೇ ಪ್ರಾಣಿಗಳನ್ನು ಸೆರೆಹಿಡಿಯುವುದು, ವಿಷ ಪ್ರಾಷನ ಮಾಡುವುದು ಅಪರಾಧವಾಗಿದ್ದು, 25 ಸಾವಿರ ರೂ. ದಂಡ ಅಥವಾ ಏಳು ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಬಹುದಾಗಿದೆ.
ಘಟನೆಯ ವಿವರ : ಹಸಿದ ಮತ್ತು ಗರ್ಭಿಣಿ ಆನೆಯೊಂದು ಊರಿನೊಳಗೆ ಆಹಾರ ಅರಸಿ ಬಂದಾಗ ಸ್ಥಳೀಯರು ಪೈನಾಪಲ್ ನಲ್ಲಿ ದೆuಟಿಜeಜಿiಟಿeಜಡ್ಡ ಪಟಾಕಿ ತುಂಬಿಸಿ ಅದಕ್ಕೆ ತಿನ್ನಲು ಕೊಟ್ಟಿದ್ದಾರೆ. ಪಟಾಕಿಯನ್ನು ತಿಂದ ತತ್‍ಕ್ಷಣ ಸೋಟವಾಗಿ ಆನೆಯ ಬಾಯಿ, ನಾಲಿಗೆಗೆ ಗಂಭೀರ ಗಾಯಗಳಾಗಿವೆ. ವಿಪರೀತ ಹಸಿವೆ ಮತ್ತು ಗಾಯದಿಂದ ಮೃತಪಟ್ಟಿದೆ. ಕೇರಳದ ಮಳಪ್ಪುರಂನ ಅರಣ್ಯಾ„ಕಾರಿಯೊಬ್ಬರು ಕಣ್ಣಾರೆ ಕಂಡ ಈ ಭಯಾನಕ ಕುಕೃತ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಓದುಗರಿಗೆ ಹರಿಬಿಟ್ಟ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ. ಓದಿದವರ ಕಣ್ಣಾಲೆಗಳು ತುಂಬಿ ಬಂದಿವೆ.
ಇನ್ನು 18, 20 ತಿಂಗಳೊಳಗೆ ಜನ್ಮತಳೆಯುವ ತನ್ನ ಮರಿ ಹಸಿವೆಯಿಂದ ಸಾಯದಿರಲಿ ಅಂತ ಗಾಬರಿಯಿಂದ ಊರಿಗೆ ಬಂದಿರಬೇಕೆಂದು ಅರಣ್ಯಾಧಿಕಾರಿ ಮೋಹನ್ ಕೃಷ್ಣನ್ ಅವರು ಫೇಸ್ ಬುಕ್‍ನಲ್ಲಿ ಬರೆದಿದ್ದರು.
ಪಟಾಕಿಯ ಸ್ಪೋಟ ಎಷ್ಟು ಭಯಾನಕವಾಗಿತ್ತೆಂದರೆ ಆನೆಯ ನಾಲಿಗೆ ಮತ್ತು ಬಾಯಿ ಸಂಪೂರ್ಣ ಹರಿದು ಹೋಗಿವೆ. ತೀವ್ರತರದ ಹಸಿವಾಗಿದ್ದರೂ ಏನೂ ತಿನ್ನದ ಸ್ಥಿತಿ. ನೋವು ಮತ್ತು ಹಸಿವೆಯಿಂದ ಗರ್ಭಿಣಿ ನೀರನ್ನು ಅರಸಿ ವೆಳ್ಳಿಯಾರ್ ನದಿಗೆ ಬಂದಿತ್ತು.
ಸುರೇಂದ್ರನ್ ಮತ್ತು ನೀಲಕಂಠನ್ ಎಂಬ ಪಳಗಿದ ಆನೆಗಳು ಗರ್ಭಿಣಿ ಆನೆಯನ್ನು ರಕ್ಷಿಸಲು ನದಿಗಿಳಿದಿತ್ತು. ಹಲವು ತಾಸುಗಳಷ್ಟು ನಡೆದ ರಕ್ಷಣಾಕಾರ್ಯದ ಪ್ರಯತ್ನಗಳು ಫಲನೀಡಲಿಲ್ಲ. ಮೇ 27 ಸಂಜೆ 4 ಗಂಟೆಗೆ ನೀರಿನಲ್ಲಿ ನಿಂತ ಸ್ಥಳದಲ್ಲಿಯೇ ಅಸುನೀಗಿತು.