ಕಾಸರಗೋಡು: ಜಲಸಂರಕ್ಷಣೆ ಖಚಿತ ಪಡಿಸುವ "ಕ್ಯಾಚ್ ದಿ ರೈನ್ " ಅಭಿಯಾನ ಕಾಸರಗೋಡು ಜಿಲ್ಲೆಯಲ್ಲಿ ಆರಂಭಗೊಂಡಿದೆ.ತೆಂಗಿನ ಮರದ ಬುಡದಲ್ಲಿ ನೀರಿಂಗಿಸುವ ಗುಂಡಿ ತೋಡಿ ಜೈವಿಕ ಗೊಬ್ಬರ ಸೇರಿಸಿ ಜಲಸಂರಕ್ಷಣೆ ನಡೆಸುವ ಕಾರ್ಯಕ್ರಮ ಇದಾಗಿದೆ.
ಅಭಿಯಾನದ ಜಿಲ್ಲಾ ಮಟ್ಟದ ಉದ್ಘಾಟನೆ ಸೋಮವಾರ ಜಿಲ್ಲಾಧಿಕಾರಿ ಕ್ಯಾಂಪ್ ಕಚೇರಿ ಆವರಣದಲ್ಲಿ ನಡೆಯಿತು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಭಿಯಾನಕ್ಕೆ ಚಾಲನೆ ನೀಡಿದರು. ಕೆ.ಡಿ.ಪಿ. ವಿಶೇಷ ಅಧಿಕಾರಿ ಇ.ಪಿ.ರಾಜ್ ಮೋಹನ್, ಚೆಂಗಳ ಗ್ರಾಮಪಂಚಾಯತ್ ಅಧ್ಯಕ್ಷೆ ಷಾಹಿನಾ ಸಲೀಂ, ಹರಿತ ಕೇರಳಂ ಜಿಲ್ಲಾ ಮಿಷನ್ ಸಂಚಾಲಕ ಎಂ.ಪಿ.ಸುಬ್ರಹ್ಮಣ್ಯನ್, ಜಿಲ್ಲಾ ಮಣ್ಣು ಸಂರಕ್ಷಣೆ ಅಧಿಕಾರಿ ವಿ.ಎಂ.ಅಶೋಕ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.