ಕಾಸರಗೋಡು: ಕೋವಿಡ್ ಪ್ರತಿರೋಧ ನಡೆಸುವಲ್ಲಿ ಆಯುರ್ವೇದದ ಬೆಂಬಲವೂ ಲಭಿಸುತ್ತಿದೆ. ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಈ ನಿಟ್ಟಿನಲ್ಲಿ ಅಮೃತಂ ಯೋಜನೆಯನ್ನು ಚುರುಕುಗೊಳಿಸಲಾಗಿದೆ. ರಾಜ್ಯ ಕೋವಿಡ್ ರೆನ್ಪಾನ್ಸ್ ಸೆಲ್ ಕೋವಿಡ್ ಪ್ರತಿರೋಧ ಅಂಗವಾಗಿ ನ್ಯಾಷನಲ್ ಆಯುಷ್ ಮಿಷನ್ ಮತ್ತು ಭಾರತೀಯ ಚಿಕಿತ್ಸಾ ಇಲಾಖೆಯೊಂದಿಗೆ ಸಹಕರಿಸಿ ಅಮೃತಂ ಯೋಜನೆಯನ್ನು ಜಾರಿಗೊಳಿಸುತ್ತಿದೆ.
ಆಯುರ್ವೇದ ಡಿಸ್ಪೆನ್ಸರಿ, ಆಸ್ಪತ್ರೆಗಳನ್ನು ಕೇಂದ್ರೀಕರಿಸಿ ಚಟುವಟಿಕೆ ನಡೆಸುವ "ಆಯುರ್ ರಕ್ಷಾ ಕ್ಲೀನಕ್" ಗಳ ಮೂಲಕ ಕಾಸರಗೋಡು ಜಿಲ್ಲೆಯಲ್ಲಿ ವಿದೇಶಗಳಿಂದ, ಇತರ ರಾಜ್ಯಗಳಿಂದ ಆಗಮಿಸಿ ಈಗ ಕ್ವಾರೆಂಟೈನ್ ನಲ್ಲಿ ರುವ ಮಂದಿಗೆ ಆಯುರ್ವೇದ ಪ್ರತಿರೋಧ ಔಷಧಗಳನ್ನು ವಿತರಿಸುವುದು ಈ ಯೋಜನೆಯ ಉದ್ದೇಶ. 14 ದಿನಗಳ ಅವಧಿಗೆ ಮೂರು ವಿಧಧ ಔಷಧ, ರೋಗಾಣು ನಾಶಕ್ಕೆ ಅಪರಾಜಿತ ಧೂಪದ ಚೂರ್ಣ ಈ ಮೂಲಕ ನೀಡಲಾಗುತ್ತದೆ. ಜೊತೆಗೆ ಜೀವನಶೈಲಿಯನ್ನು ಸುಧಾರಿತಗೊಳಿಸುವ ಸಲಹೆಗಳನ್ನೂ ನೀಡಲಾಗುತ್ತಿದೆ. ನಿಗಾದಲ್ಲಿರುವವರ ಆತೋಗ್ಯ ಸ್ಥಿತಿ ಮತ್ತು ಪ್ರತಿರೋಧ ಸಾಮಥ್ರ್ಯ ದ ಬಗ್ಗೆ ಟಾಸ್ಕ್ ಫೆÇೀರ್ಸ್ ಗಳ ಮೂಲಕ ಪರಿಶೀಲಿಸಲಾಗುವುದು. ಜಿಲ್ಲೆಯ 5 ಆಯುರ್ವೇದ ಆಸ್ಪತ್ರೆಗಳು, 46 ಡಿಸ್ಪೆನ್ಸರಿಗಳು ಸೇರಿರುವ ಆಯುರ್ ರಕ್ಷಾ ಕ್ಲೀನಿಕ್ ಗಳು ಈಗಾಗಲೇ ಜಿಲ್ಲೆಯ ಸುಮಾರು 1100 ಮಂದಿಗೆ ಅಮೃತಂ ಯೋಜನೆ ಮೂಲಕ ಔಷಧ ವಿತರಣೆ ನಡೆಸಲಾಗಿದೆ.
ಜೊತೆಗೆ ಟೆಲಿ ಕೌನ್ಸಿಲಿಂಗ್, ಪುನರ್ಜನಿ ಯೋಜನೆ, ಸ್ವಾಸ್ಥ್ಯ ಯೋಜನೆ, ಸುಖಾಯುಷ್ಯಂ ಯೋಜನೆ ಇತ್ಯಾದಿಗಳ ಸೇವೆಯೂ ಲಭ್ಯವಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ(ಆಯುರ್ವೇದ) ಡಾ.ಸ್ಟೆಲ್ಲ ಡೇವಿಡ್ ತಿಳಿಸಿದರು.