ನವದೆಹಲಿ: 1-2 ತಿಂಗಳುಗಳಲ್ಲಿ ಪ್ರತಿ ದಿನ 10 ಲಕ್ಷ ಕೋವಿಡ್-19 ಸೋಂಕು ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ತಿಳಿಸಿದ್ದಾರೆ.
ಭಾರತದಲ್ಲಿ ಈಗ ದಿನಂಪ್ರತಿ 5 ಲಕ್ಷ ಸೋಂಕು ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಮುಂದಿನ ಒಂದು ಅಥವಾ ಎರಡು ತಿಂಗಳಲ್ಲಿ ಈ ಸಂಖ್ಯೆಯನ್ನು ದುಪ್ಪಟ್ಟು ಮಾಡುವ ಗುರಿ ಹೊಂದಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಕೋವಿಡ್-19 ಗೆ ಸಂಬಂಧಿಸಿದ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನೆ ತಂತ್ರಜ್ಞಾನಗಳ (ಸಿಎ???ಆರ್) ಸಂಗ್ರಹವನ್ನು ಬಿಡುಗಡೆ ಮಾಡಿ ಮಾತನಾಡಿರುವ ಹರ್ಷವರ್ಧನ್, ಕೋವಿಡ್-19 ನಿಂದ ಚೇತರಿಕೆ ಕಾಣುವವರ ಪ್ರಮಾಣ ಶೇ.64 ರಷ್ಟಿದ್ದು ವಿಶ್ವದಲ್ಲೇ ಅತ್ಯುತ್ತಮವಾದುದ್ದಾಗಿದೆ. ಇನ್ನು ಮರಣ ಪ್ರಮಾಣ ಕೇವಲ ಶೇ.2.2 ರಷ್ಟಿದೆ ಎಂದು ತಿಳಿಸಿದ್ದಾರೆ.
ಕೋವಿಡ್-19 ನ್ನು ಎದುರಿಸುವುದಕ್ಕಾಗಿ ವೈದ್ಯಕೀಯ ಸಮುದಾಯದ ಜೊತೆಗೆ ಶ್ರಮಿಸುತ್ತಿರುವ ವೈಜ್ಞಾನಿಕ ಸಮುದಾಯವನ್ನೂ ಸಚಿವರು ಪ್ರಶಂಸಿದ್ದಾರೆ.