ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಸೋಂಕು ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. 10 ಮಂದಿ ವೈದ್ಯರೂ ಸೇರಿದಂತೆ ಜಿಲ್ಲೆಯಲ್ಲಿ ಒಂದೇ ದಿನ 44 ಮಂದಿಯಲ್ಲಿ ಮಂಗಳವಾರ ಕೊರೋನಾ ವೈರಸ್ ತಗುಲಿರುವುದು ದೃಢಪಟ್ಟಿದೆ.
ಇದರೊಂದಿಗೆ ಜಿಲ್ಲೆಯಲ್ಲಿ ಇದೂವರಿನ ಒಟ್ಟು ಸೋಂಕಿತರ ಸಂಖ್ಯೆ 749ಕ್ಕೆ ಏರಿಕೆಯಾಗಿದ್ದು, 17 ಮಂದಿ ಸೋಂಕಿನಿಂದ ಗುಣಮುಖರಾಗಿ, ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಹೊಸದಾಗಿ ಸೋಂಕು ತಗುಲಿದವರ ಪೈಕಿ ಸೌದಿಯಿಂದ ಇಬ್ಬರು, ಅಂತರ್ ಜಿಲ್ಲೆ ಪ್ರಯಾಣ ಇತೀಹಾಸ ಇರುವ ಮೂವರು, ಬೇರೆ ರಾಜ್ಯದಿಂಜ ಬಂದ ಒಬ್ಬರು, ಶೀತ, ಜ್ವರ ಲಕ್ಷಣದ ಒಂಬತ್ತು, ತೀವ್ರ ಉಸಿರಾಟ ಸಮಸ್ಯೆಯ 3, ಮೂಲವೇ ಪತ್ತೆಯಾಗದ 5, ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ 21 ಮಂದಿಗೆ ಕೊರೋನಾ ಬಂದಿದೆ. ವೈದ್ಯರಲ್ಲಿ ಸೋಂಕು ಹರಡುತ್ತಿರುವುದು ಹೆಚ್ಚಾಗುತ್ತಿದ್ದು, ಆದರೂ, ಸೋಂಕಿತರಿಗೆ ಚಿಕಿತ್ಸೆ ನೀಡುವುದರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಭಯಪಡುವ ಅಗತ್ಯವಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಉಪ ಆಯುಕ್ತ ಸಿಂಧು ಬಿ ರೂಪೇಶ್ ಅವರು ಹೇಳಿದ್ದಾರೆ.
ದಕ್ಷಿಣ ಕನ್ನಡ ಸಂಪರ್ಕಿಸುವ ಕೇರಳದ ಎಲ್ಲಾ ರಸ್ತೆಗಳೂ ದಿಢೀರ್ ಬಂದ್
ಕೊರೊನಾ ವೈರಾಣು ಸೋಂಕು ಹರಡುವುದನ್ನು ತಡೆಗಟ್ಟಲು ಹಲವು ನಿಬರ್ಂಧಗಳನ್ನು ವಿಧಿಸಿ ಇದೀಗ ಕೆಲವನ್ನು ಸಡಿಲಿಸಿದ್ದರೂ ಕರ್ನಾಟಕ ಹಾಗೂ ಕೇರಳ ಸಂಪರ್ಕಿಸುವ ಎಲ್ಲಾ ರಸ್ತೆಗಳನ್ನೂ ಕೇರಳ ಸರಕಾರ ಇದೀಗ ಬಂದ್ ಮಾಡಿದೆ. ಎರಡು ರಾಜ್ಯಗಳ ನಡುವೆ ಸಂಪರ್ಕ ಸೇತುವೆಯ ರಸ್ತೆಗಳನ್ನು ಮಣ್ಣಿನಿಂದ ಮುಚ್ಚಿ ಸಂಚಾರಕ್ಕೆ ಅವಕಾಶ ತಡೆಯಲಾಗಿದೆ. ಮಂಗಳೂರು ಹಾಗೂ ಕಾಸರಗೋಡಿಗೆ ಸಂಪರ್ಕ ಕಲ್ಪಿಸುವ ಈ ಒಳ ರಸ್ತೆಗಳನ್ನು ಕಾಸರಗೋಡು ಜಿಲ್ಲಾಧಿಕಾರಿ ನೇತೃತ್ವದಲ್ಲೇ ಬಂದ್ ಮಾಡಲಾಗಿದೆ.