HEALTH TIPS

ಕಾಸರಗೋಡು : 10 ಮಂದಿಗೆ ಸೋಂಕು ದೃಢ

   
           ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಬುಧವಾರ 10 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. ಜಿಲ್ಲೆಯಲ್ಲಿ 16 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ. ಸೋಂಕು ಖಚಿತಗೊಂಡವರಲ್ಲಿ 6 ಮಂದಿ ವಿದೇಶಗಳಿಂದ, ಮೂವರು ಇತರ ರಾಜ್ಯಗಳಿಂದ ಬಂದವರು, ಒಬ್ಬರಿಗೆ ಸಂಪರ್ಕ ಮೂಲಕ ಸೋಂಕು ತಗುಲಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
           ವಿದೇಶಗಳಿಂದ ಬಂದವರು : ಖತಾರ್‍ನಿಂದ ಬಂದ ಕುಂಬಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ 33 ವರ್ಷದ ನಿವಾಸಿ, ಒಮಾನ್ ನಿಂದ ಆಗಮಿಸಿದ್ದ ಮಂಜೇಶ್ವರ ಪಂಚಾಯತ್‍ನ 27 ವರ್ಷದ ನಿವಾಸಿ, ಕುವೈತ್‍ನಿಂದ ಬಂದಿದ್ದ ಪಳ್ಳಿಕ್ಕರೆ ಪಂಚಾಯತ್‍ನ 51 ವರ್ಷದ ನಿವಾಸಿ ಮಹಿಳೆ, ನೀಲೇಶ್ವರ ನಗರಸಭೆ ವ್ಯಾಪ್ತಿಯ 27 ವರ್ಷದ ನಿವಾಸಿ, ಪಡನ್ನ ಪಂಚಾಯತ್‍ನ 35 ವರ್ಷದ ನಿವಾಸಿ, ಶಾರ್ಜಾ ದಿಂದ ಆಗಮಿಸಿದ್ದ ಚೆಂಗಳ ಪಂಚಾಯತ್‍ನ 58 ವರ್ಷದ ನಿವಾಸಿಗೆ ಸೋಂಕು ಖಚಿತಗೊಂಡಿದೆ.
ಇತರ ರಾಜ್ಯಗಳಿಂದ ಬಂದವರು : ಮಂಗಳೂರಿನಿಂದ ಆಗಮಿಸಿದ್ದ ವರ್ಕಾಡಿ ಪಂಚಾಯತ್‍ನ 39 ವರ್ಷದ ನಿವಾಸಿ, ಉತ್ತರ ಪ್ರದೇಶದಿಂದ ಬಂದಿದ್ದ ಮಂಗಲ್ಪಾಡಿ ಪಂಚಾಯತ್‍ನ 30 ವರ್ಷದ ನಿವಾಸಿ, ಮಹಾರಾಷ್ಟ್ರದಿಂದ ಆಗಮಿಸಿದ್ದ ಎಣ್ಮಕಜೆ ಪಂಚಾಯತ್‍ನ 45 ವರ್ಷದ ನಿವಾಸಿಗೆ ಕೋವಿಡ್ ಪಾಸಿಟಿವ್ ಆಗಿದೆ.
             ಸಂಪರ್ಕ ಮೂಲಕ ಸೋಂಕು : ಚೆಮ್ನಾಡ್ ಗ್ರಾಮ ಪಂಚಾಯತ್ ನಿವಾಸಿ 67 ವರ್ಷದ ನಿವಾಸಿಗೆ ಕೋವಿಡ್ ಪಾಸಿಟಿವ್ ಆಗಿದೆ.
             ಕೋವಿಡ್ ನೆಗೆಟಿವ್ ಆದವರು : ಉಕ್ಕಿನಡ್ಕ ಕಾಸರಗೋಡು
     ಮೆಡಿಕಲ್ ಕಾಲೇಜಿನಲ್ಲಿ ಮತ್ತು ಪಡನ್ನಕ್ಕಾಡ್ ಕೋವಿಡ್ ಚಿಕಿತ್ಸಾ ಕೇಂದ್ರದಲ್ಲಿ ದಾಖಲಾಗಿದ್ದ 16 ಮಂದಿ ಕೋವಿಡ್‍ನಿಂದ ಗುಣಮುಖರಾಗಿದ್ದಾರೆ.
ಕಾಸರಗೋಡು ಮೆಡಿಕಲ್ ಕಾಲೇಜಿನಲ್ಲಿ ದಾಖಲಾಗಿದ್ದ, ಮಹಾರಾಷ್ಟ್ರದಿಂದ ಬಂದಿದ್ದ, ಕಾಸರಗೋಡು ನಗರಸಭೆ ವ್ಯಾಪ್ತಿಯ 56 ವರ್ಷದ ನಿವಾಸಿ, ಉದುಮ ಪಂಚಾಯತ್‍ನ 64 ವರ್ಷದ ನಿವಾಸಿ, ಪೈವಳಿಕೆ ಪಂಚಾಯತ್‍ನ 40 ವರ್ಷದ ನಿವಾಸಿ, ಮಂಗಲ್ಪಾಡಿ ಪಂಚಾಯತ್‍ನ 33, 37 ವರ್ಷದ ನಿವಾಸಿಗಳು, ಕಾರಡ್ಕ ಪಂಚಾಯತ್‍ನ 31 ವರ್ಷದ ನಿವಾಸಿ, ಕುಂಬಳೆ ಪಂಚಾಯತ್‍ನ 47 ವರ್ಷದ ನಿವಾಸಿ, ಯು.ಎ.ಇ.ಯಿಂದ ಬಂದಿದ್ದ ಬೇಡಡ್ಕ ಪಂಚಾಯತ್‍ನ 27 ವರ್ಷದ ನಿವಾಸಿ ಗುಣಮುಖರಾದವರು.
ಪಡನ್ನ ಚಿಕಿತ್ಸಾ ಕೇಂದ್ರದಲ್ಲಿ ದಾಖಲಾಗಿದ್ದ, ಮಹಾರಾಷ್ಟ್ರದಿಂದ ಬಂದಿದ್ದ, ಚೆಂಗಳ ಪಂಚಾಯತ್‍ನ 42 ವರ್ಷದ ನಿವಾಸಿ, ಪಡನ್ನ ಪಂಚಾಯತ್‍ನ 39 ವರ್ಷದ ನಿವಾಸಿ, ಪುಲ್ಲೂರು-ಪೆರಿಯ ಪಂಚಾಯತ್ ನಿವಾಸಿ 63 ವರ್ಷದ ವ್ಯಕ್ತಿ, ಚೆರುವತ್ತೂರು ಪಂಚಾಯತ್‍ನ 33 ವರ್ಷದ ನಿವಾಸಿ, ವಲಿಯಪರಂಬ ಪಂಚಾಯತ್‍ನ 28 ವರ್ಷದ ನಿವಾಸಿ, ಪುತ್ತಿಗೆ ಪಂಚಾಯತ್‍ನ 47 ವರ್ಷದ ನಿವಾಸಿ, ಕುವೈತ್ ನಿಂದ ಬಂದಿದ್ದ ಕಾಂಞಂಗಾಡ್ ನಗರಸಭೆ ವ್ಯಾಪ್ತಿಯ 38 ವರ್ಷದ ನಿವಾಸಿ, ಪಡನ್ನ ಪಂಚಾಯತ್ ನ 36 ವರ್ಷದ ನಿವಾಸಿ ಗುಣಹೊಂದಿದವರು.
        ಜಿಲ್ಲೆಯಲ್ಲಿ ಒಟ್ಟು 7201 ಮಂದಿ ನಿಗಾದಲ್ಲಿದ್ದಾರೆ. ಮನೆಗಳಲ್ಲಿ 6783 ಮಂದಿ, ಸಾಂಸ್ಥಿಕ ನಿಗಾದಲ್ಲಿ 418 ಮಂದಿ ಇದ್ದಾರೆ. ನೂತವಾಗಿ 541 ಮಂದಿ ನಿಗಾದಲ್ಲಿ ದಾಖಲಾಗಿದ್ದಾರೆ. 376 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 578 ಮಂದಿಯ ಫಲಿತಾಂಶ ಲಭಿಸಿಲ್ಲ. 269 ಮಂದಿ ಬುಧವಾರ ತಮ್ಮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ.
       ಮಾಸ್ಕ್ ಧರಿಸದ 225 ಮಂದಿ ವಿರುದ್ಧ ಕೇಸು : ಮಾಸ್ಕ್ ಧರಿಸದೇ ಇದ್ದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 225 ಕೇಸುಗಳನ್ನು ದಾಖಲಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ 9869 ಕೇಸುಗಳು ದಾಖಲಿಸಲಾಗಿದೆ. 
       ಲಾಕ್ ಡೌನ್ ಉಲ್ಲಂಘನೆ : 9 ಕೇಸುಗಳು ದಾಖಲು : ಲಾಕ್ ಡೌನ್ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 9 ಕೇಸುಗಳನ್ನು ದಾಖಲಿಸಲಾಗಿದೆ. 12 ಮಂದಿಯನ್ನು ಬಂಧಿಸಲಾಗಿದ್ದು, 4 ವಾಹನಗಳನ್ನು ವಶಪಡಿಸಲಾಗಿದೆ. ಕುಂಬಳೆ ಪೆÇಲೀಸ್ ಠಾಣೆಯಲ್ಲಿ 2, ಕಾಸರಗೋಡು 1, ಮೇಲ್ಪರಂಬ 2, ಹೊಸದುರ್ಗ 1, ನೀಲೇಶ್ವರ 1, ಚಂದೇರ 1, ಚಿತ್ತಾರಿಕಲ್ 1 ಕೇಸುಗಳು ದಾಖಲಾಗಿವೆ. ಈ ವರೆಗೆ ಜಿಲ್ಲೆಯಲ್ಲಿ ಈ ಪ್ರಕರಣಗಳಿಗೆ ಸಂಬಂ„ಸಿ ಒಟ್ಟು 2884 ಕೇಸುಗಳು ದಾಖಲಾಗಿವೆ. 3718 ಮಂದಿಯನ್ನು ಬಂಧಿಸಲಾಗಿದೆ. 1191 ವಾಹನಗಳನ್ನು ವಶಪಡಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries