HEALTH TIPS

ರಾಜ್ಯದಲ್ಲಿ ಅತೀ ಹೆಚ್ಚಿನ ಕೋವಿಡ್ ವರದಿ-ಇಂದು 1310 ಸೋಂಕಿತರು- ಕಾಸರಗೋಡು : 52 ಮಂದಿಗೆ ಸೋಂಕು ದೃಢ


         ತಿರುವನಂತಪುರ: ನಿರಂತರ ಆತಂಕಗಳ ಮಧ್ಯೆ ರಾಜ್ಯದಲ್ಲಿ 1310 ಜನರಿಗೆ ಇಂದು ಕೋವಿಡ್ -19 ದೃಢಪಟ್ಟಿದೆ. ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯ ಪ್ರಕಾರ ಅಂಕಿಅಂಶಗಳು ಹೊರಬಿದ್ದಿದೆ. 
          ಇಂದು ಅತೀ ಹೆಚ್ಚು ಸೋಂಕಿತರು ತಿರುವನಂತಪುರ  ಜಿಲ್ಲೆಯಲ್ಲಿವೆ. ತಿರುವನಂತಪುರಂ ಜಿಲ್ಲೆಯಲ್ಲಿ 320, ಎರ್ನಾಕುಲಂ ಜಿಲ್ಲೆಯಲ್ಲಿ 132, ಪತ್ತನಂತಿಟ್ಟು  ಜಿಲ್ಲೆಯಲ್ಲಿ 130, ವಯನಾಡ್ ಜಿಲ್ಲೆಯಲ್ಲಿ 124, ಕೊಟ್ಟಾಯಂ ಜಿಲ್ಲೆಯಲ್ಲಿ 89, ಕೋಝಿಕ್ಕೋಡ್ ಜಿಲ್ಲೆಯಲ್ಲಿ 84, ಪಾಲಕ್ಕಾಡ್ ಜಿಲ್ಲೆಯಲ್ಲಿ 83, ಮಲಪ್ಪುರಂ ಜಿಲ್ಲೆಯಲ್ಲಿ 75, ತ್ರಿಶೂರ್ ಜಿಲ್ಲೆಯಲ್ಲಿ 60 ಮತ್ತು ಇಡುಕಿ ಜಿಲ್ಲೆಯಲ್ಲಿ 59. ಕೊಲ್ಲಂ ಜಿಲ್ಲೆಯ 53, ಕಾಸರಗೋಡು ಜಿಲ್ಲೆಯಲ್ಲಿ 52, ಆಲಪ್ಪುಳ ಜಿಲ್ಲೆಯ 35 ಮತ್ತು ಕಣ್ಣೂರು ಜಿಲ್ಲೆಯ 14 ಮಂದಿಗೆ ಇಂದು ಸೋಂಕು ಪತ್ತೆಯಾಗಿದೆ.
            ರೋಗಮುಕ್ತರಾದವರು: 
     ರಾಜ್ಯದಲ್ಲಿ 864 ಜನರು ಇಂದು ಕೋವಿಡ್ ಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದಾರೆ. ಕಾಸರಗೋಡು ಜಿಲ್ಲೆಯ 129, ತಿರುವನಂತಪುರಂ ಜಿಲ್ಲೆಯ 114, ಪಾಲಕ್ಕಾಡ್ ಜಿಲ್ಲೆಯ 111 , ಕೊಲ್ಲಂ ಜಿಲ್ಲೆಯ 94 , ಕೋಝಿಕ್ಕೋಡ್ ಜಿಲ್ಲೆಯ 75 , ಎರ್ನಾಕುಲಂ ಜಿಲ್ಲೆಯ 66 , ಕೊಟ್ಟಾಯಂ ಜಿಲ್ಲೆಯ 65 , ಇಡಕ್ಕಿ ಜಿಲ್ಲೆಯ 45  ಮತ್ತು ಪತ್ತನಂತಿಟ್ಟು  ಜಿಲ್ಲೆಯ 45 , ಕಣ್ಣೂರು ಜಿಲ್ಲೆಯ 41 , ತ್ರಿಶೂರ್ ಜಿಲ್ಲೆಯ 27 , ಆಲಪ್ಪುಳ ಜಿಲ್ಲೆಯ 25 ಜನರು, ವಯನಾಡ್ ಜಿಲ್ಲೆಯ 19 ಜನರು ಮತ್ತು ಮಲಪ್ಪುರಂ ಜಿಲ್ಲೆಯ 9 ಜನರ ಫಲಿತಾಂಶಗಳು ಇಂದು ಋಣಾತ್ಮಕವಾಗಿವೆ. ಈವರೆಗೆ  10,495 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. 13,027 ಜನರು ಈವರೆಗೆ ಕೋವಿಡ್‍ನಿಂದ ಗುಣಮುಖರಾಗಿರುವರು. 
                    ಗಂಭೀರ ಸ್ಥಿತಿಯಿಂದ ತಿರುವನಂತಪುರ ಮತ್ತು ಎರ್ನಾಕುಳಂ:
         ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳಲ್ಲಿ ತಿರುವನಂತಪುರ ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಜಿಲ್ಲೆಯಲ್ಲಿ ಅತಿ ಹೆಚ್ಚು ಸಂಪರ್ಕ ಪ್ರಕರಣಗಳು ಮತ್ತು ಸೋಂಕು ಹರಡಿದ ಮೂಲ ತಿಳಿಯದ ಪ್ರಕರಣಗಳಿವೆ. ಪ್ರಕರಣಗಳ ಸಂಖ್ಯೆ ಹೆಚ್ಚಾದಂತೆ ಕಂಟೋನ್ಮೆಂಟ್ ವಲಯಗಳು ಮತ್ತು ಹಾಟ್‍ಸ್ಪಾಟ್‍ಗಳ ಸಂಖ್ಯೆ ಹೆಚ್ಚಳಗೊಳಿಸಲಾಗಿದೆ.  ಪ್ರಸ್ತುತ ತಿರುವನಂತಪುರ ಜಿಲ್ಲೆಯಲ್ಲಿ ಕರಾವಳಿ ಪ್ರದೇಶದ ಜೊತೆಗೆ ಅದರಾಚೆ ನಗರ ಪ್ರದೇಶಗಳತ್ತ ಮುನ್ನುಗ್ಗುತ್ತಿರುವುದು ತೀತ್ರ ಕಳವಳ ಮೂಡಿಸಿದೆ. ಅಂಚುತೆಂಗ್, ಪುಡುಕುರುಸ್ಸಿ, ಪೆÇಯೂರ್ ಮತ್ತು ಪುಲ್ಲುವಿಲಾ ಕ್ಲಸ್ಟರ್‍ಗಳ ಸುತ್ತಮುತ್ತಲ ಪ್ರದೇಶಗಳಲ್ಲಿ ಏಕಾಏಕಿ ಉಲ್ಬಣಗೊಂಡಿರುವುದು ಕಂಡುಬರುತ್ತಿದೆ. ಮನೆಯಲ್ಲಿ ಯಾವುದೇ ರೋಗಲಕ್ಷಣಗಳನ್ನು ತೋರಿಸದ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ತಿರುವನಂತಪುರಂನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಎರ್ನಾಕುಲಂನಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆ. ತೀವ್ರ ಅಸ್ವಸ್ಥ ರೋಗಿಗಳಿಗೆ ತಜ್ಞರ ಚಿಕಿತ್ಸೆಯನ್ನು ಖಚಿತಪಡಿಸಿಕೊಳ್ಳಲು ಕಲಾಮಸ್ಸೆರಿ ವೈದ್ಯಕೀಯ ಕಾಲೇಜಿನಲ್ಲಿ ಸೌಲಭ್ಯಗಳನ್ನು ವಿಸ್ತರಿಸಲಾಗಿದೆ.
            

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries