ತಿರುವನಂತಪುರ: ರಾಜ್ಯದಲ್ಲಿ ಗುರುವಾರ 160 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. ಇದೇ ಸಂದರ್ಭದಲ್ಲಿ 202 ಮಂದಿ ಗುಣಮುಖರಾಗಿದ್ದಾರೆ.
ಪತ್ತನಂತಿಟ್ಟ-27, ಮಲಪ್ಪುರಂ-24, ಪಾಲ್ಘಾಟ್-18, ಆಲಪ್ಪುಳ-16, ತಿರುವನಂತಪುರ-9, ಕೊಲ್ಲಂ-9, ಕೋಟ್ಟಯಂ-9, ಎರ್ನಾಕುಳಂ-9, ತೃಶ್ಶೂರು-9, ಕಣ್ಣೂರು-9, ಇಡುಕ್ಕಿ-8, ಕಲ್ಲಿಕೋಟೆ-7, ಕಾಸರಗೋಡು-5, ವಯನಾಡು-1 ಎಂಬಂತೆ ರೋಗ ಬಾಧಿಸಿದೆ.
ರೋಗ ಬಾಧಿತರಲ್ಲಿ 106 ಮಂದಿ ವಿದೇಶದಿಂದಲೂ, 40 ಮಂದಿ ಇತರ ರಾಜ್ಯಗಳಿಂದಲೂ ಬಂದವರು. 14 ಮಂದಿಗೆ ಸಂಪರ್ಕದಿಂದ ರೋಗ ಬಾಧಿಸಿದೆ.
ಜಿಲ್ಲಾವಾರು ವಿವರ:
ಮಲಪ್ಪುರ-57(ಪಾಲ್ಘಾಟ್-1), ಪಾಲ್ಘಾಟ್-53, ಕಾಸರಗೋಡು-23, ತಿರುವನಂತಪುರ-15, ಕಣ್ಣೂರು-14(ಕಾಸರಗೋಡು-8), ಇಡುಕ್ಕಿ-13, ಎರ್ನಾಕುಳಂ-11(ಆಲಪ್ಪುಳ-1), ತೃಶ್ಶೂರು-8, ಆಲಪ್ಪುಳ-7, ಕೋಟ್ಟಯಂ-1 ಎಂಬಂತೆ ರೋಗ ಮುಕ್ತರಾಗಿದ್ದಾರೆ.
ರಾಜ್ಯದಲ್ಲಿ ಪ್ರಸ್ತುತ 2088 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 2638 ಮಂದಿ ಗುಣಮುಖರಾಗಿದ್ದಾರೆ. ವಿವಿಧ ಜಿಲ್ಲೆಗಳಲ್ಲಾಗಿ 1,78,099 ಮಂದಿ ನಿಗಾವಣೆಯಲ್ಲಿದ್ದಾರೆ. ಇವರಲ್ಲಿ 1,75,111 ಮನೆಗಳಲ್ಲಿ ಹಾಗು ಇನ್‍ಸ್ಟಿಟ್ಯೂಶನಲ್ ಕ್ವಾರೆಂಟೈನ್ ನಲ್ಲಿದ್ದಾರೆ. 2988 ಮಂದಿ ಆಸ್ಪತ್ರೆಯಲ್ಲಿ ನಿಗಾವಣೆಯಲ್ಲಿದ್ದಾರೆ. ಗುರುವಾರ ಶಂಕಿತ 403 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾಸರಗೋಡು ಸ್ಥಿತಿಗತಿ:
ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ 5 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 31 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ. ಸೋಂಕು ಖಚಿತಗೊಂಡವರಲ್ಲಿ 4 ಮಂದಿ ವಿದೇಶಗಳಿಂದ, ಒಬ್ಬರು ಬೆಂಗಳೂರಿನಿಂದ ಬಂದವರು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
ದುಬಾಯಿಯಿಂದ ಬಂದಿದ್ದ ಚೆಮ್ನಾಡ್ ಪಂಚಾಯತ್‍ನ 35 ವರ್ಷದ ನಿವಾಸಿ, ಕಾಸರಗೋಡು ನಗರಸಭೆ ವ್ಯಾಪ್ತಿಯ 20 ವರ್ಷದ ನಿವಾಸಿ, ಉದುಮ ಪಂಚಾಯತ್‍ನ 42 ವರ್ಷದ ನಿವಾಸಿ, ಕುವೈತ್ ನಿಂದ ಆಗಮಿಸಿದ್ದ ಬೇಡಡ್ಕ ಪಂಚಾಯತ್‍ನ 30 ವರ್ಷದ ನಿವಾಸಿ, ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಈಗಾಗಲೇ ದಾಖಲಾಗಿರುವ, ಬೆಂಗಳೂರಿನಿಂದ ಬಂದಿದ್ದ ಚೆಂಗಳ ಪಂಚಾಯತ್‍ನ 38 ವರ್ಷದ ನಿವಾಸಿಗೆ ಕೋವಿಡ್ ಪಾಸಿಟಿವ್ ಆಗಿದೆ.
ಉಕ್ಕಿನಡ್ಕ ಕಾಸರಗೋಡು ಮೆಡಿಕಲ್ ಕಾಲೇಜಿನಲ್ಲಿ, ಉದಯಗಿರಿ ಕೋವಿಡ್ ಚಿಕಿತ್ಸಾ ಕೇಂದ್ರದಲ್ಲಿ, ಪಡನ್ನಕ್ಕಾಡ್ ಕೋವಿಡ್ ಚಿಕಿತ್ಸಾ ಕೇಂದ್ರದಲ್ಲಿ, ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ದಾಖಲಾಗಿದ್ದ 31 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ.
ಕಾಸರಗೋಡು ಮೆಡಿಕಲ್ ಕಾಲೇಜಿನಲ್ಲಿ ದಾಖಲಾಗಿದ್ದ, ಕುವೈತ್ ನಿಂದ ಬಂದಿದ್ದ ಮಡಿಕೈ ಪಂಚಾಯತ್‍ನ 48 ವರ್ಷದ ನಿವಾಸಿ, ಚೆಂಗಳ ಪಂಚಾಯತ್‍ನ 43 ವರ್ಷದ ನಿವಾಸಿ, ಉದುಮ ಪಂಚಾಯತ್‍ನ 36 ವರ್ಷದ ನಿವಾಸಿ, ಮಂಗಲ್ಪಾಡಿ ಪಂಚಾಯತ್‍ನ 38 ವರ್ಷದ ನಿವಾಸಿ, ಅಬುದಾಬಿಯಿಂದ ಆಗಮಿಸಿದ್ದ ಪುಲ್ಲೂರು-ಪೆರಿಯ ಪಂಚಾಯತ್ ನಿವಾಸಿ 31 ವರ್ಷದ ನಿವಾಸಿ, ಮಹಾರಾಷ್ಟ್ರದಿಂದ ಬಂದಿದ್ದ ಮಂಗಲ್ಪಾಡಿ ಪಂಚಾಯತ್‍ನ 58 ವರ್ಷದ ನಿವಾಸಿ, ಮಂಜೇಶ್ವರ ಪಂಚಾಯತ್‍ನ 68 ವರ್ಷದ ನಿವಾಸಿ, ಪಡನ್ನಕ್ಕಾಡ್ ಕೋವಿಡ್ ಚಿಕಿತ್ಸಾ ಕೇಂದ್ರದಲ್ಲಿ ದಾಖಲಾಗಿದ್ದ, ಮಹಾರಾಷ್ಟ್ರದಿಂದ ಆಗಮಿಸಿದ್ದ ಮಂಗಲ್ಪಾಡಿ ಪಂಚಾಯತ್ ನಿವಾಸಿ 16 ಮತ್ತು 45 ವರ್ಷದ ಮಹಿಳೆಯರು, ತ್ರಿಕರಿಪುರ ಪಂಚಾಯತ್‍ನ 51 ವರ್ಷದ ಮಹಿಳೆ, ಕುವೈತ್‍ನಿಂದ ಬಂದಿದ್ದ ನೀಲೇಶ್ವರ ನಗರಸಭೆ ವ್ಯಾಪ್ತಿಯ 49 ಮತ್ತು 45 ವರ್ಷದ ನಿವಾಸಿಗಳು, ಚೆರುವತ್ತೂರು ಪಂಚಾಯತ್‍ನ 33 ವರ್ಷದ ನಿವಾಸಿ, ಈಸ್ಟ್ ಏಳೇರಿ ಪಂಚಾಯತ್‍ನ 23 ವರ್ಷದ ನಿವಾಸಿ, ದುಬಾಯಿಯಿಂದ ಬಂದಿದ್ದ ಚೆರುವತ್ತೂರು ಪಂಚಾಯತ್‍ನ 30 ವರ್ಷದ ನಿವಾಸಿ, ಉದಯಗಿರಿ ಸಿ.ಎಫ್.ಎಲ್.ಟಿ.ಸಿ. ಕೋವಿಡ್ ಚಿಕಿತ್ಸಾ ಸೆಂಟರ್ ನಲ್ಲಿ ದಾಖಲಾಗಿದ್ದ, ಮಹಾರಾಷ್ಟ್ರದಿಂದ ಬಂದಿದ್ದ, ಪೈವಳಿಕೆ ಪಂಚಾಯತ್‍ನ 41 ವರ್ಷದ ನಿವಾಸಿ, ಕಾಸರಗೋಡು ನಗರಸಭೆ ವ್ಯಾಪ್ತಿಯ 51 ವರ್ಷದ ನಿವಾಸಿ, ಮೊಗ್ರಾಲ್ ಪುತ್ತೂರು ಪಂಚಾಯತ್‍ನ 59 ವರ್ಷದ ನಿವಾಸಿ, ಚೆರುವತ್ತೂರು ಪಂಚಾಯತ್‍ನ 39 ವರ್ಷದ ನಿವಾಸಿ, ಪಡನ್ನ ಪಂಚಾಯತ್‍ನ 60 ವರ್ಷದ ನಿವಾಸಿ, ಚೆನ್ನೈಯಿಂದ ಆಗಮಿಸಿದ್ದ ಪಳ್ಳಿಕ್ಕರೆ ಪಂಚಾಯತ್‍ನ 20 ವರ್ಷದ ನಿವಾಸಿ ಗುಣಮುಖರಾದವರು.
ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ದಾಖಲಾಗಿದ್ದ, ಮಹಾರಾಷ್ಟ್ರದಿಂದ ಬಂದಿದ್ದ, ಮೀಂಜ ಪಂಚಾಯತ್‍ನ 50 ವರ್ಷದ ನಿವಾಸಿ, ಕುಂಬಳೆ ಪಂಚಾಯತ್‍ನ 54 ವರ್ಷದ ನಿವಾಸಿ, 24 ವರ್ಷದ ಮಹಿಳೆ, 3 ವರ್ಷದ ಬಾಲಕಿ, ಪಳ್ಳಿಕ್ಕರೆ ಪಂಚಾಯತ್ ನ 65 ವರ್ಷದ ನಿವಾಸಿ, ಕುವೈತ್‍ನಿಂದ ಆಗಮಿಸಿದ್ದ ವಲಿಯಪರಂಬ ಪಂಚಾಯತ್‍ನ 42 ವರ್ಷದ ನಿವಾಸಿ, ಮಂಜೇಶ್ವರ ಪಂಚಾಯತ್‍ನ 21 ವರ್ಷದ ನಿವಾಸಿ ಮಹಿಳೆ, ದೋಹಾದಿಂದ ಬಂದಿದ್ದ ಮಧೂರು ಪಂಚಾಯತ್ ನಿವಾಸಿ 42
ವರ್ಷದ ನಿವಾಸಿ ಗುಣಮುಖರಾಗಿದ್ದಾರೆ.
ಜಿಲ್ಲೆಯಲ್ಲಿ 7097 ಮಂದಿ ನಿಗಾದಲ್ಲಿದ್ದಾರೆ. ಮನೆಗಳಲ್ಲಿ 6742 ಮಂದಿ, ಸಾಂಸ್ಥಿಕ ನಿಗಾದಲ್ಲಿ 355 ಮಂದಿ ಇದ್ದಾರೆ. ನೂತನವಾಗಿ 441 ಮಂದಿ ನಿಗಾದಲ್ಲಿ ದಾಖಲಾಗಿದ್ದಾರೆ. 254 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 582 ಮಂದಿಯ ಫಲಿತಾಂಶ ಲಭಿಸಿಲ್ಲ. 545 ಮಂದಿ ಗುರುವಾರ ತಮ್ಮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ.
ಲಾಕ್‍ಡೌನ್ ಉಲ್ಲಂಘನೆ : 9 ಕೇಸುಗಳ ದಾಖಲು : ಲಾಕ್‍ಡೌನ್ ಆದೇಶ ಉಲ್ಲಂಘಿಸಿದ ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ಜಿಲ್ಲೆಯಲ್ಲಿ 9 ಕೇಸುಗಳು ದಾಖಲಾಗಿವೆ. 21 ಮಂದಿಯನ್ನು ಬಂಧಿಸಲಾಗಿದ್ದು, 7 ವಾಹನಗಳನ್ನು ವಶಪಡಿಸಲಾಗಿದೆ. ಕಾಸರಗೋಡು ನಗರ ಠಾಣೆಯಲ್ಲಿ 2, ವಿದ್ಯಾನಗರದಲ್ಲಿ 1, ಆದೂರು 1, ಮೇಲ್ಪರಂಬ 2, ಬೇಕಲ 1, ಹೊಸದುರ್ಗ 1, ನೀಲೇಶ್ವರ 3, ವೆಳ್ಳರಿಕುಂಡ್ 3, ಚಿತ್ತಾರಿಕಲ್ 1 ಕೇಸುಗಳು ದಾಖಲಾಗಿವೆ. ಈ ಮೂಲಕ ಈ ಪ್ರಕರಣಗಳಿಗೆ ಸಂಬಂ„ಸಿ ಕಾಸರಗೋಡು ಜಿಲ್ಲೆಯಲ್ಲಿ ದಾಖಲಾದ ಕೇಸುಗಳ ಸಂಖ್ಯೆ 2899 ಆಗಿದೆ. 3739 ಮಂದಿಯನ್ನು ಬಂ„ಸಲಾಗಿದ್ದು, 1198 ವಾಹನಗಳನ್ನು ವಶಪಡಿಸಲಾಗಿದೆ. ಇದು ವರೆಗೆ 2,46,799 ಮಂದಿಯ ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಲಾಗಿದ್ದು, 4722 ಸ್ಯಾಂಪಲ್‍ಗಳ ಪರೀಕ್ಷಾ ವರದಿ ಬರಲು ಬಾಕಿಯಿದೆ.
ಮಾಸ್ಕ್ ಧರಿಸದ 208 ಮಂದಿ ವಿರುದ್ಧ ಕೇಸು : ಮಾಸ್ಕ್ ಧರಿಸದೇ ಇದ್ದ ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ಜಿಲ್ಲೆಯಲ್ಲಿ 208 ಕೇಸು ದಾಖಲಿಸಲಾಗಿದೆ. ಈ ಪ್ರಕರಣಗಳಿಗೆ ಸಂಬಂಧಿಸಿ ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 10077 ಕೇಸುಗಳು ದಾಖಲಾಗಿವೆ.