ಮುಂದುವರಿದ ಭಾಗ-04
ಜನನೇಂದ್ರಿಯದಲ್ಲಿ ಬರುವ ಫಂಗಸ್ ಬಾಧೆಯೂ ಇತ್ತೀಚೆಗೆ ಬೇರೆ-ಬೇರೆ ರೂಪದಲ್ಲಿ ಕಾಣಿಸಿಕೊಳ್ಳುತ್ತಿದೆ. ಗಂಡಸರಲ್ಲಿ ಹಿಂದೆ ತೊಂಡೆಸಂಧಿಯು, ವೃಷಣ ಚೀಲದಲ್ಲಿ ಕಾಣಿಸುತ್ತಿತ್ತು. ಆದರೆ ಈಗ ಶಿಶ್ನದಲ್ಲಿ, ತೊಡೆ ಸಂಧಿಯಲ್ಲಿ ಮತ್ತು ಮಹಿಳೆಯರಲ್ಲಿ ತೊಡೆಯಲ್ಲಿ, ಯೋನಿಯ ಮೇಲ್ಬಾಗ ಮತ್ತು ಬದಿಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಗಂಡಸರಲ್ಲಿ ಕೂದಲಿನಿಂದ ಆವೃತ್ತವಾದ ಶಿಶ್ನದ ಬುಡದಲ್ಲಿ ಮತ್ತು ಇತರೆಡೆಗಳಲ್ಲೂ ಕಾಣಿಸಿಕೊಳ್ಳಬಹುದಾಗಿದೆ.
ಮುಖದಲ್ಲೂ ಈ ರೋಗ ಬರಬಹುದಾಗಿದೆ. ಹೆಚ್ಚಿನವರಿಗೆ ದೇಹದ ಬೇರೆ ಭಾಗದಿಂದ ಈ ರೋಗ ಮುಖಕ್ಕೆ ಹರಡುತ್ತದೆ. ಕಿವಿಗಳಲ್ಲೂ ಇದು ಕಾಣಿಸುತ್ತಿದೆ. ಜೊತೆಗೆ ದೇಹದ ಹೆಚ್ಚಿನ ಭಾಗದಲ್ಲೂ ರಿಂಗ್ ವರ್ಮ್ ಈ ರೋಗ ಬಾಧಿಸಿದವರೂ ಇದ್ದಾರೆ. ಅಂತವರ ದೇಹದ ಸಿಪ್ಪೆ ಹೋಗುತ್ತದೆ. ಈ ಎಲ್ಲಾ ತೊಂದರೆಗಳೂ ಬರುವುದು ಕ್ವಾಡ್ರಿಡರ್ಮ್ ಇತ್ಯಾದಿ ಕ್ರೀಂ ಗಳ ಬಳಕೆಯಿಂದ. ಇಂತಹ ಕ್ರೀಮುಗಳಿಂದ ಇತರ ಚರ್ಮ ವ್ಯಾದಿಗಳೂ ಕಾಣಿಸಿಕೊಳ್ಳುತ್ತಿವೆ. ಚರ್ಮ ತೆಳುವಾಗುವುದು, ಹೊಳಪಿನಿಂದ ಕೂಡುವುದು, ಸ್ಟ್ರೇಚ್ ಮಾರ್ಕ್‍ಗಳು, ಚರ್ಮ ಬೆಳ್ಳಗಾಗುವುದು, ಕೆಂಪುನರಗಳೂ ಕೆಲವೊಮ್ಮೆ ಕಾಣಿಸಿಕೊಳ್ಳುವುದು ಇತ್ಯಾದಿಗಳು ಕಂಡುಬರುತ್ತವೆ. ಸ್ಕ್ರೇಚ್ ಮಾರ್ಕ್ ಗಳು ಕೆಲವೊಮ್ಮೆ ಕೆಂಪಾಗಿ ಊದಿಕೊಂಡು ಕೀವಿನಿಂದ ಕೂಡಿದ ಹುಣ್ಣುಗಳಾದವರನ್ನೂ ಕಾಣುತ್ತೇವೆ.
ಇಲ್ಲಿ ವಿವರಿಸಿದ ಎಲ್ಲಾ ಕಾರಣಗಳಿಂದ ರೋಗ ಬಾಧಿತ ಕುಟುಂಬ ಆರ್ಥಿಕ ಹೊರೆ ಅನುಭವಿಸಬೇಕಾಗುತ್ತದೆ. ಮನೆಯ ಎಲ್ಲಾ ಸದಸ್ಯರಿಗೂ ಈ ರೋಗ ಆವರಿಸಿದಾಗ ರೋಗ ವಾಸಿಗೆ ಪ್ರತಿಯೊಬ್ಬ ಸದಸ್ಯನೂ ವೈದ್ಯರನ್ನು ಕಂಡು ಚಿಕಿತ್ಸೆ ಪಡೆಯಬೇಕಾಗುತ್ತದೆ. ಇದು ಭಾರೀ ಆರ್ಥಿಕ ಹೊರೆಗೆ ಕಾರಣವಾಗುತ್ತದೆ. ಇದರಿಂದ ಆರ್ಥಿಕ ಹೊರೆ ತಪ್ಪಿಸಲು ವೈದ್ಯರ ನಿರ್ದೇಶಾನುಸಾರ ಔಷಧಿ ಸೇವಿಸಲು ಹಿಂದೆ ಸರಿಯುತ್ತಾರೆ. ಕೆಲವರು ಮಾತ್ರ ವೈದ್ಯರ ನಿರ್ದೇಶಾನುಸಾರ ಚಿಕಿತ್ಸೆ ಪಡೆಯುತ್ತಾರೆ. ಮತ್ತೆ ಕೆಲವರು ಸ್ವಯಂ ಔಷಧಿ ಮಾಡುತ್ತಾರೆ. ಇದರಿಂದ ರೋಗ ಮುಕ್ತರಾಗುವ ಬದಲು ಈಗಾಗಲೇ ತಿಳಿಸಿದ ಸಮಸ್ಯೆಗಳಿಂದ ತೊಳಲಾಡಬೇಕಾಗುತ್ತದೆ.
ಡಾ.ಪ್ರಸನ್ನ ನರಹರಿ.ಕಾಸರಗೋಡು.
ನಾಳೆಗೆ ಮುಂದುವರಿಯುವುದು......