ಮುಂದುವರಿದ ಭಾಗ-05
ಚರ್ಮಕ್ಕೆ ಇನ್ ಫೆಕ್ಷನ್ ಕೊಡುವ ಮೂರು ಮುಖ್ಯ ಕ್ರಿಮಿಗಳು ಎಂದರೆ ಬ್ಯಾಕ್ಟೀರಿಯಾ, ವೈರಸ್ ಮತ್ತು ಫಂಗಸ್. ಗಜಕರ್ಣ ರೋಗಕ್ಕೆ ಕಾರಣ ಫಂಗಸ್. ಫಂಗಸ್ ರೋಗವು ಮನುಷ್ಯರಿಂದ ಮನುಷ್ಯರಿಗೆ, ಪ್ರಾಣಿಗಳಿಂದ ಮನುಷ್ಯರಿಗೆ ಮತ್ತು ಮಣ್ಣಿನಿಂದ ಮನುಷ್ಯರಿಗೆ ಹರಡುತ್ತದೆ. ಅಂದರೆ ಈ ಕೆಳಗಿನ ಕಾರಣಗಳಿಂದ ಮುಖ್ಯವಾಗಿ ಗಜಕರ್ಣ ಗಡಗಡವಾಗಿಸುತ್ತದೆ!
1)ಅತಿಯಾಗಿ ಬೆವರುವುದು: ಹೆಚ್ಚಾಗಿ ಕುಳಿತು ಆಫೀಸು ಕೆಲಸ ಮಾಡುವವರಲ್ಲಿ, ಬೊಜ್ಜಿನ ದೇಹ ಪ್ರಕೃತಿ ಇರುವವರಲ್ಲಿ, ಅವಿಶ್ರಾಂತವಾಗಿ ದುಡಿಯುವ ಹೆಂಗಸರಲ್ಲಿ ಈ ರೋಗ ಹೆಚ್ಚು ಕಂಡುಬರುತ್ತದೆ. ಹವಾನಿಯಂತ್ರಿತ ಕಚೇರಿಗಳಲ್ಲಿ ಕೆಲಸ ಮಾಡುವವರಲ್ಲಿ ಬಹುಬೇಗ ಕಾಣಿಸಿಕೊಳ್ಳುತ್ತದೆ.
2)ಸ್ನಾನ ಅಥವಾ ಶೌಚದ ನಂತರಗಳಲ್ಲಿ ಉಳಿದು ಬಿಡುವ ತೇವವನ್ನು ಹತ್ತಿಬಟ್ಟೆಯಿಂದ ಒರೆಸಿ ತೆಗೆಯದೆ ಇರುವುದರಿಂದ ಉಳಿಯುವ ನೀರಿನ ತೇವಾಂಶ ಫಂಗಸ್ ಬೆಳವಣಿಗೆಗೆ ರಹದಾರಿಯೊದಗಿಸುತ್ತದೆ.
3)ಸೊಂಟನೂಲು(ಉಡಿದಾರ), ಕೈಗೆ ನೂಲು, ಕೈಗೆ ಉಂಗುರ ಇತ್ಯಾದಿ ಧರಿಸುವುದರಿಂದ ನೀರಿನ ತೇವಾಂಶ ಈ ನೂಲಲ್ಲಿ ಉಳಿದಿರುತ್ತದೆ. ಹಾಗೆಯೇ ಒದ್ದೆ ಬಟ್ಟೆ ಧರಿಸಿದ ಸಂದರ್ಭ ತುಸು ಒದ್ದೆ ತೇವಾಂಶ ಉಳಿದಿರುವ ಒಳ ಉಡುಪುಗಳನ್ನು ಧರಿಸುವುದರಿಂದ ಈ ರೋಗ ಬರುತ್ತದೆ. ಮಳೆಗಾಲ ಅಥವಾ ಪ್ರವಾಸದ ಸಂದರ್ಭ ಮತ್ತು ಮಡಿ, ಮೈಲಿಗೆಗಳನ್ನು ಅನುಸರಿಸಬೇಕಾದ ಸಂದರ್ಭ ಒದ್ದೆ ಬಟ್ಟೆ ಧರಿಸಿದರೆ ಮತ್ತು ಸರಿಯಾಗಿ ಒಣಗದ ಬಟ್ಟೆ ಧರಿಸಿದರೆ ರಿಂಗ್ ವರ್ಮ್ ಉಂಟಾಗುತ್ತದೆ.
ಬರಹ: ಡಾ.ಪ್ರಸನ್ನಾ ನರಹರಿ.ಕಾಸರಗೋಡು. ಖ್ಯಾತ ಚರ್ಮ-ಲೈಂಗಿಕ ರೋಗ ತಜ್ಞರು.
ನಿರ್ದೇಶಕಿ ಐಎಡಿ ಕಾಸರಗೋಡು.
ನಾಳೆಗೂ ಮುಂದುವರಿಯುವುದು.........................