ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ 28 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. ಇದೇ ಸಂದರ್ಭದಲ್ಲಿ ನಾಲ್ವರು ಗುಣಮುಖರಾಗಿದ್ದಾರೆ. 21 ಮಂದಿಗೆ ಸಂಪರ್ಕದ ಮೂಲಕ ರೋಗ ಬಾಧಿಸಿದೆ. ಇವರಲ್ಲಿ ಮೂವರ ಸಂಪರ್ಕ ಮೂಲ ಪತ್ತೆಯಾಗಿಲ್ಲ. ತಲಾ ಇಬ್ಬರು ವಿದೇಶದಿಂದ ಹಾಗು ಇತರ ರಾಜ್ಯಗಳಿಂದ ಬಂದವರು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
ಸಂಪರ್ಕ ಮೂಲ ಪತ್ತೆಯಾಗದವರು. ಚೆಂಗಳ ಪಂಚಾಯತ್‍ನ 34, ಕಾಂಞಂಗಾಡ್ ನಗರಸಭೆಯ 64, ಅಜಾನೂರು ಪಂಚಾಯತ್‍ನ 55 ವರ್ಷದ ಪುರುಷರ ಸಂಪರ್ಕ ಮೂಲ ಪತ್ತೆಯಾಗಿಲ್ಲ.
ಸಂಪರ್ಕ : ತ್ರಿಕರಿಪುರ ಪಂಚಾಯತ್‍ನ 20,55,20,50 ವರ್ಷದ ಪುರುಷರು, 9 ವರ್ಷದ ಬಾಲಕ, ಚೆಂಗಳ ಪಂಚಾಯತ್‍ನ 19,55,22,25,75,70 ವರ್ಷದ ಪುರುಷರು, 44,20,38,19 ವರ್ಷದ ಮಹಿಳೆಯರು, ಪಿಲಿಕೋಡ್ ಪಂಚಾಯತ್‍ನ 20 ವರ್ಷದ ಯುವಕ, ನೀಲೇಶ್ವರ ನಗರಸಭೆಯ 15 ವರ್ಷದ ಬಾಲಕಿ, ಕುಂಬ್ಡಾಜೆ ಪಂಚಾಯತ್‍ನ 55 ವರ್ಷದ ಪುರುಷ, 2 ತಿಂಗಳ ಹೆಣ್ಣು ಮಗು, ವರ್ಕಾಡಿ ಪಂಚಾಯತ್‍ನ 55, ಪುಲ್ಲೂರು-ಪೆರಿಯ ಪಂಚಾಯತ್‍ನ 27 ವರ್ಷದ ಪುರುಷರು ಪ್ರಾಥಮಿಕ ಸಂಪರ್ಕದಿಂದ ಸೋಂಕು ಖಚಿತಗೊಂಡವರು.
ವಿದೇಶದಿಂದ ಬಂದವರು : ಶಾರ್ಜಾದಿಂದ ಬಂದಿದ್ದ ಕಾಂಞಂಗಾಡ್ ನಗರಸಭೆಯ 56, ಒಮಾನ್‍ನಿಂದ ಆಗಮಿಸಿದ್ದ 48 ವರ್ಷದ ಪುರುಷರು ಸೋಂಕು ಬಾಧಿತರು.
ಇತರ ರಾಜ್ಯಗಳಿಂದ ಬಂದವರು. ರಾಜಸ್ತಾನದಿಂದ ಆಗಮಿಸಿದ್ದ ತ್ರಿಕರಿಪುರ ಪಂಚಾಯತ್‍ನ 31, ಹರಿಯಾಣದಿಂದ ಬಂದಿದ್ದ ಕಾಂಞಂಗಾಡ್ ನಗರಸಭೆಯ 27 ವರ್ಷದ ಪುರುಷರು ರೋಗ ಬಾಧಿತರು.
ಕೇರಳದಲ್ಲಿ 506 ಮಂದಿಗೆ ಸೋಂಕು :
ಕೇರಳ ರಾಜ್ಯದಲ್ಲಿ ಗುರುವಾರ 506 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. ಅದೇ ವೇಳೆ 794 ಮಂದಿ ಗುಣಮುಖರಾಗಿದ್ದಾರೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.ಜೊತೆಗೆ ಗುರುವಾರದ ಕೋವಿಡ್ ವರದಿ ಅಪೂರ್ಣವೆಂದೂ ಮಧ್ಯಾಹ್ನದ ವರೆಗಿನ ಮಾಹಿತಿಯಷ್ಟೇ ಲಭ್ಯವಾಗಿದೆ ಎಂದು ತಿಳಿಸಿದರು. ರಾಜ್ಯದಲ್ಲಿ 375 ಮಂದಿಗೆ ಸಂಪರ್ಕದ ಮೂಲಕ ರೋಗ ಬಾಧಿಸಿದೆ. ವಿದೇಶದಿಂದ ಬಂದ 31 ಮತ್ತು ಇತರ ರಾಜ್ಯಗಳಿಂದ ಬಂದ 40 ಮಂದಿಗೆ ರೋಗ ಬಾಧಿಸಿದೆ. 37ಮಂದಿ ಆರೋಗ್ಯ ಕಾರ್ಯಕರ್ತರಿಗೆ ರೋಗ ಬಾಧಿಸಿದೆ.
ಗುರುವಾರ ಇಬ್ಬರು ಸಾವಿಗೀಡಾಗಿದ್ದಾರೆ. 77 ವರ್ಷದ ಕಲ್ಲಿಕೋಟೆ ಪಳ್ಳಿಕಂಡಿ ನಿವಾಸಿ ಹಾಗು 65 ವರ್ಷದ ಎರ್ನಾಕುಳಂ ನಿವಾಸಿ ಮಹಿಳೆ ಸಾವಿಗೀಡಾದರು.
ರೋಗ ಬಾಧಿತರು : ತಿರುವನಂತಪುರ-70, ಕಾಸರಗೋಡು-28, ಪತ್ತನಂತಿಟ್ಟ-59, ಕೊಲ್ಲಂ-22, ಎರ್ನಾಕುಳಂ-34, ಕಲ್ಲಿಕೋಟೆ-42, ಮಲಪ್ಪುರಂ-32, ಕೋಟ್ಟಯಂ-29, ಇಡುಕ್ಕಿ-6, ಕಣ್ಣೂರು-39, ಆಲಪ್ಪುಳ-55, ಪಾಲ್ಘಾಟ್-4, ತೃಶ್ಶೂರು-83, ವಯನಾಡು-3 ಎಂಬಂತೆ ರೋಗ ಬಾಧಿಸಿದೆ.
ನೆಗೆಟಿವ್ : ತಿರುವನಂತಪುರ-220, ಕಾಸರಗೋಡು-4, ಪತ್ತನಂತಿಟ್ಟ-81, ಕೊಲ್ಲಂ-83, ಎರ್ನಾಕುಳಂ-69, ಕಲ್ಲಿಕೋಟೆ-57, ಮಲಪ್ಪುರಂ-12, ಕೋಟ್ಟಯಂ-49, ಇಡುಕ್ಕಿ-31, ಕಣ್ಣೂರು-47, ಆಲಪ್ಪುಳ-20, ಪಾಲ್ಘಾಟ್-36, ತೃಶ್ಶೂರು-68, ವಯನಾಡು-17 ಎಂಬಂತೆ ಗುಣಮುಖರಾಗಿದ್ದಾರೆ.