HEALTH TIPS

ಶುಕ್ರವಾರ ಕಾಸರಗೋಡು ಜಿಲ್ಲೆಯಲ್ಲಿ ಶುಕ್ರವಾರ 52 ಮಂದಿಗೆ ಕೋವಿಡ್ ಪಾಸಿಟಿವ್


              ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಶುಕ್ರವಾರ 52 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 47 ಮಂದಿಗೆ ಸಂಪರ್ಕ ಮೂಲಕ ಸೋಂಕು ತಗುಲಿದ್ದು, ಇವರಲ್ಲಿ 8 ಮಂದಿಯ ಸಂಪರ್ಕ ಮೂಲ ಪತ್ತೆಯಾಗಿಲ್ಲ. ಇಬ್ಬರು ವಿದೇಶದಿಂದ, ಇಬ್ಬರು ಇತರ ರಾಜ್ಯಗಳಿಂದ ಬಂದವರು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. 
                             ಸಂಪರ್ಕ ಮೂಲ ಪತ್ತೆಯಾಗದವರು:
        ಕುಂಬ್ಡಾಜೆ ಪಂಚಾಯತ್ ನ 52 ವರ್ಷದ ಪುರುಷ, ಮಂಗಲ್ಪಾಡಿ ಪಂಚಾಯತ್ ನ 73 ವರ್ಷದ ಮಹಿಳೆ, 22,66,45 ವರ್ಷದ ಪುರುಷರು, ಪುಲ್ಲೂರು-ಪೆರಿಯ ಪಂಚಾಯತ್ ನ 30, ಕಾಸರಗೋಡು ನಗರಸಭೆಯ 22, ಪಳ್ಳಿಕ್ಕರೆ ಪಂಚಾಯತ್ ನ 62 ವರ್ಷದ ಪುರುಷರು ಸೋಂಕು ಬಾಧಿತರು. 
         ಪ್ರಾಥಮಿಕ ಸಂಪರ್ಕ: 
   ಕುತ್ತಿಕೋಲು ಪಂಚಾಯತ್ ನ 25, ಚೆಂಗಳ ಪಂಚಾಯತ್ ನ 33 ವರ್ಷದ ಪುರುಷರು, 12 ವರ್ಷದ ಬಾಲಕ, ಕಾಸರಗೋಡು ನಗರಸಭೆಯ 63, 18,28,49,21 ವರಷದ ಪುರುಷರು, 44,19,34,21 ವರ್ಷದ ಮಹಿಳೆಯರು, ಬೆಳ್ಳೂರು ಪಂಚಾಯತ್ ನ 30 ವರ್ಷದ ಮಹಿಳೆ, ನೀಲೇಶ್ವರ ನಗರಸಭೆಯ 31, ಕಳ್ಳಾರ್ ಪಂಚಾಯತ್ ನ 24, ಮಡಿಕೈ ಪಂಚಾಯತ್ ನ 25 ವರ್ಷದ ಪುರುಷರು, ಕುಂಬಳೆ ಪಂಚಾಯತ್ ನ 9,15 ವರ್ಷದ ಮಕ್ಕಳು, 19,52,43,52,30 ವರ್ಷದ ಪುರುಷರು, 29 ವರ್ಷದ ಮಹಿಳೆ, ಮಂಗಲ್ಪಾಡಿ ಪಂಚಾಯತ್ ನ 52,29 ವರ್ಷದ ಪುರುಷರು, ಪುತ್ತಿಗೆ ಪಂಚಾಯತ್ ನ 26,20,45,34 ವರ್ಷದ ಮಹಿಳೆಯರು, 1,9 ವರ್ಷದ ಮಕ್ಕಳು, ವರ್ಕಾಡಿ ಪಂಚಾಯತ್ ನ 45 ವರ್ಷದ ಪುರುಷ, 35 ವರ್ಷದ ಮಹಿಳೆ, ಪೈವಳಿಕೆ ಪಂಚಾಯತ್ ನ 20 ವರ್ಷದ ಪುರುಷ, ಪಳ್ಳಿಕ್ಕರೆ ಪಂಚಾಯತ್ ನ 11 ವರ್ಷದ ಮಗು, 26 ವರ್ಷದ ಪುರುಷ, ಕುಂಬಡಾಜೆ ಪಂಚಾಯತ್ ನ 48 ವರ್ಷದ ಮಹಿಳೆ ಪ್ರಾಥಮಿಕ ಸೋಂಕು ಬಾಧಿತರು. 
            ವಿದೇಶದಿಂದ ಬಂದವರು: 
     ಸೌದಿಯಿಂದ ಆಗಮಿಸಿದ್ದ ಕಳ್ಳಾರ್ ಪಂಚಾಯತ್ ನ 28, ಬಹರೈನ್ ನಿಂದ ಬಂದಿದ್ದ ಪುಲ್ಲೂರು-ಪೆರಿಯ ಪಂಚಾಯತ್ ನ 45 ವರ್ಷದ ಪುರುಷ ಸೋಂಕಿಗೆ ಒಳಗಾದವರು. 
        ಇತರ ರಾಜ್ಯಗಳಿಂದ ಆಗಮಿಸಿದವರು:
   ಕರ್ನಾಟಕದಿಂದ ಬಂದಿದ್ದ ಮಂಗಲ್ಪಾಡಿ ಪಂಚಾಯತ್ ನ 60 ವರ್ಷದ ಪುರುಷ, 22 ವರ್ಷದ ಮಹಿಳೆ, ದಿಲ್ಲಿಯಿಂದ ಆಗಮಿಸಿದ್ದ 43 ವರ್ಷದ ಪುರುಷ ರೋಗ ಬಾಧಿತರು. 
      ಕಾಸರಗೋಡು ಜಿಲ್ಲೆಯಲ್ಲಿ 129 ಮಂದಿಗೆ ಕೋವಿಡ್ ನೆಗೆಟಿವ್
ಕಾಸರಗೋಡು, ಜು. 31 : ಪರವನಡ್ಕ ಸಿ.ಎಫ್.ಎಲ್.ಟಿ.ಸಿ.ಯಲ್ಲಿ ದಾಖಲಾಗಿದ್ದ 72, ವಿದ್ಯಾನಗರ ಸಿ.ಎಫ್.ಟಲ್.ಟಿ.ಸಿ.ಯಲ್ಲಿ ದಾಖಲಾಗಿದ್ದ 2, ಸಿ.ಯು.ಕೆ. ಓಲ್ಡ್ ಕ್ಯಾಂಪಸ್ ಸಿ.ಎಫ್.ಎಲ್.ಟಿ.ಸಿ.ಯಲ್ಲಿ ದಾಖಲಾಗಿದ್ದ 10, ಉದಯಗಿರಿ ಸಿ.ಎಫ್.ಎಲ್.ಟಿ.ಸಿ.ಯಲ್ಲಿ ದಾಖಲಾಗಿದ್ದ 7, ಮಂಜೇಶ್ವರ ಗೋವಿಂದ ಪೈ ಸ್ಮಾರಕ ಕಾಲೇಜಿನ ಸಿ.ಎಫ್.ಎಲ್.ಟಿ.ಸಿ.ಯಲ್ಲಿ ದಾಖಲಾಗಿದ್ದ 36, ಉಕ್ಕಿನಡ್ಕ ಕಾಸರಗೋಡು ಮೆಡಿಕಲ್ ಕಾಲೇಜಿನಲ್ಲಿ ದಾಖಲಾಗಿದ್ದ 1, ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ 1 ಮಂದಿ ಶುಕ್ರವಾರ ಗುಣಮುಖರಾಗಿದ್ದಾರೆ. 
      ಹಲವು ಶಂಕೆಗಳ ಅಂಕಿಅಂಶ:
   ಗುರುವಾರದ ರಾಜ್ಯದ ಒಟ್ಟು ಅಂಕಿಅಂಶಗಳು ಮಧ್ಯಾಹ್ನದ ತನಕದ್ದು ಮಾತ್ರವಾಗಿದ್ದು ಲೆಕ್ಕಾಚಾರ ನಿರ್ವಹಣೆಯ ಸಾಪ್ಟವೇರ್ ಕೈಕೊಟ್ಟಿದ್ದರಿಂದ ಕುಸಿತವಾಗಿದೆ ಎಂದು ಸ್ವತಃ ಮುಖ್ಯಮಂತ್ರಿ ನಿನ್ನೆ ತಿಳಿಸಿದ್ದರು. ಆದರೆ ಇಂದಿನ ಅಂಕಿಅಂಶಗಳಲ್ಲಿ ರಾಜ್ಯಮಟ್ಟದಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಮಾಡಲಾಗಿದ್ದು ಎರಡು ಪ್ರಧಾನ ನಗರಗಳಲ್ಲಿ ಮಾತ್ರ ಅತೀ ಹೆಚ್ಚಿರುವಂತೆ ನೋಡಿಕೊಂಡಂತಿದೆ. 
    ಕಾಸರಗೋಡು ಜಿಲ್ಲೆಯಲ್ಲಿ ಇಂದು ಪ್ರಕಟಿಸಲಾದ ವರದಿಯನ್ನು ಗಮನಿಸಿದಾಗ ಲೆಕ್ಕಾಚಾರಗಳ ಹಿಂದಿನ ಕರಾಮತ್ತುಗಳು ನಡೆದಿರಬಹುದೇ ಎಂದು ಶಂಕಿಸಲಾಗುತ್ತಿದೆ. ಮಂಜೇಶ್ವರ ಹಾಗೂ ಕಾಸರಗೋಡು ತಾಲೂಕು ವ್ಯಾಪ್ತಿಯಲ್ಲಿ ಕಂಟೋನ್ಮೆಂಟ್, ನಿರ್ಬಂಧಿತ ವಲಯಗಳೆಂದು ಬಿಂಬಿಸಲ್ಪಟ್ಟ ಪ್ರದೇಶ ಗಮನಿಸಿದರೆ ಆ ಸಂಖ್ಯೆ ಇನ್ನಷ್ಟು ಏರಬೇಕಾಗಿತ್ತು. ಆದರೆ ಇಳಿಕೆಯ ಪ್ರಮಾಣ ತೋರಿಸುತ್ತಿರುವುದು ಯಾಕೆಂದು ಜನಸಾಮಾನ್ಯರ ಪ್ರಶ್ನೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries