ಬಂಜರು ಜಾಗದಲ್ಲಿ ಕೃಷಿ: 7480 ಅರ್ಜಿಗಳು ಆಫ್ ಲೈನ್ ಮೂಲಕ ಸಲ್ಲಿಕೆ
0
ಜುಲೈ 30, 2020
ಕಾಸರಗೋಡು: ಸುಭಿಕ್ಷ ಕೇರಳಂ ಯೋಜನೆಯ ಅಂಗವಾಗಿ ಬಂಜರು ಭೂಮಿಯಲ್ಲಿ ಕೃಷಿ ನಡೆಸುವ ಉದ್ದೇಶದಿಂದ 41 ಕೃಷಿಭವಗಳಲ್ಲಿ 7480 ಅರ್ಜಿಗಳು ಆಫ್ ಲೈನ್ ಮೂಲಕ ಲಭಿಸಿವೆ. ಇವುಗಳಲ್ಲಿ 3770 ಅರ್ಜಿಗಳು ಆನಿವಾಸಿಗಳಿಂದ, 2361 ಅರ್ಜಿಗಳು ಯುವಜನತೆಯಿಂದ ಲಭಿಸಿದೆ. ಕಳೆದ 5 ವರ್ಷಗಳಿಂದ ಕೃಷಿ ನಡೆಸದೇ ವಿವಿಧೆಡೆ ಉಳಿದುಕೊಂಡಿರುವ 3044.57 ಎಕ್ರೆ ಜಾಗ ಕಾಸರಗೋಡು ಜಿಲ್ಲೆಯಲ್ಲಿ ಸುಭಿಕ್ಷ ಕೇರಳಂ ಯೋಜನೆಗಾಗಿ ನೂತನವಾಗಿ ಪತ್ತೆಮಾಡಲಾಗಿದೆ. ಈ ಸಂಬಂಧ ಸಮಗ್ರ ಮಾಹಿತಿಗಳು ಸುಭಿಕ್ಷ ಕೇರಳಂ ಆಪ್ ನಲ್ಲಿ ಅಪ್ ಲೋಡ್ ನಡೆಸಲಾಗಿದೆ.