ಕಾಸರಗೋಡು: ತಿರುವನಂತಪುರ ಜಿಲ್ಲೆಯ ಕಿಲಿಮಾಣೂರ್ ಪೆÇಲೀಸ್ ಠಾಣೆಯಲ್ಲಿ ಗುರುವಾರ ಇನ್ನೂ ಮೂವರು ಪೋಲೀಸರಿಗೆ ಕೋವಿಡ್ ದೃಢಪಡಿಸಲಾಗಿದ್ದು ಇದರೊಂದಿಗೆ ಠಾಣೆಯ ಸರ್ಕಲ್ ಇನ್ಸ್‍ಪೆಕ್ಟರ್ ಮತ್ತು ಸಿಐ ಹಾಗೂ ಎಸ್‍ಐ ಸೇರಿದಂತೆ ಪೂರ್ತಿ ಪೆÇಲೀಸ್ ಪಡೆ ಕ್ವಾರಂಟೈನ್ ಗೆ ಒಳಗಾಗಬೇಕಾಯಿತು. ಈ ಠಾಣೆಗೆ ಕಳವು ಕೃತ್ಯದ ಹಿನ್ನೆಲೆಯಲ್ಲಿ ಓರ್ವನನ್ನು ಬಂಧಿಸಿಡಲಾಗಿತ್ತು. ಆತನಿಗೆ ಕೋವಿಡ್ ದೃಢೀಕರಿಸಲಾಗಿದ್ದು ಆತನಿಂದ ಸೋಂಕು ಹಬ್ಬಿರಬೇಕೆಂದು ಸಂಶಯಿಸಲಾಗಿದೆ.
ಇತರ ಪೋಲೀಸ್ ಠಾಣೆಗಳಿಂದ ಕಿಲಿಮಾನೂರ್ ಠಾಣೆಗೆ ಪೋಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಏತನ್ಮಧ್ಯೆ ಈವರೆಗೆ ರಾಜ್ಯದ 85 ಪೆÇಲೀಸರು ಕೋವಿಡ್ ಬಾಧಿತರಾಗಿದ್ದಾರೆ ಎಂದು ಡಿಜಿಪಿ ಲೋಕನಾಥ್ ಬೆಹ್ರಾ ಹೇಳಿದ್ದಾರೆ. ರಾಜ್ಯಾದ್ಯಂತ ಇನ್ನಷ್ಟು ಪೋಲೀಸರು ಸೋಂಕಿಗೆ ತುತ್ತಾಗದಂತೆ ತಡೆಯಲು ಮತ್ತು ಪೆÇಲೀಸರು ಮತ್ತು ಅವರ ಕುಟುಂಬಗಳನ್ನು ರಕ್ಷಿಸುವ ಯೋಜನೆಯನ್ನು ತರಲಾಗುವುದೆಂದೂ ಡಿಜಿಪಿ ಹೇಳಿರುವರು.