ಬದಿಯಡ್ಕ: ಕೋವಿಡ್ ಹಿನ್ನೆಲೆಯಲ್ಲಿ ಪ್ರಸ್ತುತ ವರ್ಷ ಆನ್ ಲೈನ್ ತರಗತಿಗಳ ಮೂಲಕ ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಉಳಿಸುವ ಯತ್ನಗಳನ್ನು ಮಾಡಲಾಗುತ್ತಿದ್ದು ಗ್ರಾಮೀಣ ಪ್ರದೇಶಗಳಲ್ಲಿ ಆನ್ ಲೈನ್ ಬಳಕೆಗೆ ಅವಕಾಶಗಳು ಕೆಲವೆಡೆ ದೊರಕದಾಗಿದೆ. ಈ ಹಿನ್ನೆಲೆಯಲ್ಲಿ ಹಲವಾರು ಪ್ರದೇಶಗಳಲ್ಲಿ ರಾಜಕೀಯ ಪಕ್ಷಗಳು, ಸಂಘಟನೆಗಳು ಬಡ ವಿದ್ಯಾರ್ಥಿಗಳ ನೆರವಿಗೆ ಕೈಜೋಡಿಸುತ್ತಿವೆ.
ಬದಿಯಡ್ಕ ಗ್ರಾಮ ಪಂಚಾಯತಿ ಐದನೇ ವಾರ್ಡಿನ ಕಾಂಗ್ರೆಸ್ ಕಾರ್ಯಕರ್ತ ಬಾಲಕೃಷ್ಣ ಅವರ ಮನೆಯಲ್ಲಿ ಆಧುನಿಕ ವ್ಯವಸ್ಥೆಗಳುವಂಚಿತಗೊಂಡು ವಿದ್ಯಾರ್ಥಿಗಳು ಕಲಿಕೆಗೆ ತೊಂದರೆ ಅನುಭವಿಸುತ್ತಿರುವುದನ್ನು ಮನಗಂಡು ಬದಿಯಡ್ಕ ಮಂಡಲ ಕಾಂಗ್ರೆಸ್ಸ್ ಸಮಿತಿ ವತಿಯಿಂದ ಟಿವಿ ಹಸ್ತಾಂತರಿಸಲಾಯಿತು.
ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಪಿ.ಜಿ. ಚಂದ್ರಹಾಸ ರೈ, ಮುಖಂಡರಾದ ತಿರುಪತಿ ಕುಮಾರ್ ಭಟ್, ಶ್ಯಾಮ್ ಪ್ರಸಾದ್ ಮಾನ್ಯ, ಪಿ.ಜಿ. ಜಗನ್ನಾಥ ರೈ, ಯೂತ್ ಕಾಂಗ್ರೆಸ್ ನೇತಾರರಾದ ಶಾಫಿ ಗೋಳಿಯಡ್ಕ, ಶಾಪಿ ಪಯಲಡ್ಕ ಮತ್ತು ಕಾರ್ಯಕರ್ತರು ಟಿ.ವಿ ಹಸ್ತಾಂತರಿಸಿದರು.