ಬದಿಯಡ್ಕ: ಚಿನ್ನ ಕಳ್ಳ ಸಾಗಣಿಕೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳೊಂದಿಗೆ ಸ್ವತಃ ಮುಖ್ಯಮಂತ್ರಿಗಳೇ ನಿಕಟತೆ ಹೊಂದಿರುವುದು ತೀವ್ರ ಕಳವಳಕಾರಿಯಾಗಿದ್ದು ಮುಖ್ಯಮಂತ್ರಿ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಕುಂಬ್ಡಾಜೆ ಪಂಚಾಯತಿ ಏತಡ್ಕದಲ್ಲಿ ಭಾರತೀಯ ಜನತಾ ಯುವಮೋರ್ಚಾ ನಡೆಸಿದ ಪೆÇೀಸ್ಟ್ ಕಾರ್ಡ್ ಚಳುವಳಿಯನ್ನು ಯುವ ಮೋರ್ಚಾ ಕುಂಬ್ಡಾಜೆ ಪಂಚಾಯತಿ ಸಮಿತಿ ಅಧ್ಯಕ್ಷ ಪ್ರಮೋದ್ ಭಂಡಾರಿ ಉದ್ಘಾಟಿಸಿದರು.
ನೇತಾರರಾದ ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಕೃಷ್ಣ ಶರ್ಮ, ಒಬಿಸಿ ಮೋರ್ಚಾ ಮಂಡಲ ಸಮಿತಿ ಸದಸ್ಯ ಯೋಗೀಶ್ ನೇರಪ್ಪಾಡಿ, ಬೂತ್ ಸಮಿತಿ ಅಧ್ಯಕ್ಷ ಸುರೇಶ್ ಕುಮಾರ್ ಎಸ್ ಕೆ, ಪ್ರಧಾನ ಕಾರ್ಯದರ್ಶಿ ಗುರುಪ್ರಶಾಂತ್, ಯುವಮೋರ್ಚಾ ಪಂಚಾಯತಿ ಸಮಿತಿ ಸದಸ್ಯ ಉದಯ ವೈ.ಬಿ. ಮೊದಲಾದವರು ಉಪಸ್ಥಿತರಿದ್ದರು.