ಎರ್ನಾಕುಳಂ: ಮಲಯಾಳಂ ಚಲನಚಿತ್ರ ನಟ ಅನಿಲ್ ಮುರಳಿ(55) ಗುರುವಾರ ನಿಧನರಾದರು. ಪಿತ್ತಜನಕಾಂಗದ ಅಸೌಖ್ಯ ಕಾರಣ ಜು.22 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮಧ್ಯಾಹ್ನ 12.45 ಕ್ಕೆ ನಿಧನರಾದರು. ಅವರು ಮಲಯಾಳಂ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.
ಟಿವಿ ಧಾರಾವಾಹಿಗಳ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಅವರು ಮೊದಲು 1993 ರಲ್ಲಿ ಕನ್ಯಾಕುಮಾರಿಯಲ್ ಒರು ಕವಿತಾ ಚಿತ್ರದಲ್ಲಿ ನಟಿಸಿದರು. ಬಳಿಕ ಹಲವಾರು ಚಿತ್ರಗಳಲ್ಲಿ ಸಹನಟ ಮತ್ತು ಖಳನಾಯಕನಾಗಿ ನಟಿಸಿದರು.
ಅವರು ಮುಖ್ಯವಾಗಿ ಖಳನಾಯಕ ಮತ್ತು ಪೆÇಲೀಸ್ ಪಾತ್ರಗಳಲ್ಲಿ ನಟಿಸಿ ಗಮನ ಸೆಳೆದು ಅಭಿಮಾನಿ ಬಳಗದ ಸೃಷ್ಟಿಗೆ ಕಾರಣರಾದರು. ಅವರು ಅಭಿನಯಿಸಿದ ಪ್ರಮುಖ ಚಿತ್ರಗಳಲ್ಲಿ ಬಾಬಾ ಕಲ್ಯಾಣಿ, ನಸ್ರಾಣಿ, ನ್ಯೂ ಫೇಸ್, ಸಿಟಿ ಆಫ್ ಗಾಡ್, ಮಾಣಿಕ್ಯಕಲ್ಲು, ವೆಳ್ಳರಿ ಪ್ರಾವಿಂಡೆ ಚಂಗಾತಿ, ಕಲೆಕ್ಟರ್, ಅಸುರವಿತ್ತು, ಕರ್ಮಯೋಧ ಮತ್ತು ಆಮೆನ್ ಗಮನಾರ್ಹ ಜನಮನ್ನಣೆ ಪಡೆದ ಚಿತ್ರಗಳಾಗಿವೆ. ಅವರ ಇತ್ತೀಚಿನ ಚಿತ್ರಗಳು ಜೋಸೆಫ್, ಉಯರೆ ಮತ್ತು ವಿಧಿವಿಜ್ಞಾನ ಕೂಡಾ ಭಾರೀ ಸದ್ದುಮಾಡಿತ್ತು.