HEALTH TIPS

ಕೊರೊನಿಲ್ ಕೋವಿಡ್ ಗುಣಪಡಿಸಲಿದೆ ಎಂದು ನಾವೆಂದೂ ಹೇಳಿಲ್ಲ: ಯೂ-ಟರ್ನ್ ಹೊಡೆದ ಪತಂಜಲಿ ಸಂಸ್ಥೆ

   
         ನವದೆಹಲಿ: ಹರಿದ್ವಾರ ಮೂಲದ ಪತಂಜಲಿ ಸಂಸ್ಥೆ ತಾನು ಕೊರೋನಾವೈರಸ್ ಸೋಂಕಿಗೆ ಔಷಧಿ ತಯಾರಿಸಿದ್ದಾಗಿ ಎಲ್ಲಿಯೂ ಹೇಳಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದೆ.  ಆಯುಷ್ ಸಚಿವಾಲಯ ನೀಡಿದ ನೋಟಿಸ್‍ಗೆ ಉತ್ತರವಾಗಿ ಪತಂಜಲಿ ಸಂಸ್ಥೆ ಈ ಹೇಳಿಕೆ ನೀಡಿದೆ.
       "ಪತಂಜಲಿ ಕರೋನಾ ಔಷಧಿ ತಯಾರಿಸುವುದಾಗಿ ಎಂದಿಗೂ ಹೇಳಿಕೊಂಡಿಲ್ಲ. ಬದಲಿಗೆ, ಕರೋನಾ ರೋಗಿಗಳನ್ನು ಈ ಔಷಧಿಯಿಂದ ಗುಣಪಡಿಸಲಾಗಿದೆ.ಆಯುಷ್ ಸಚಿವಾಲಯ ನೀಡಿದ ಪರವಾನಗಿ ಅಡಿಯಲ್ಲಿ ಇದನ್ನು ತಯಾರಿಸಲಾಗಿದೆ" ಎಂದು ಪತಂಜಲಿ ಆಯುರ್ವೇದ ಸಿಇಒ ಆಚಾರ್ಯ ಬಾಲಕೃಷ್ಣ ಅವರು ನೋಟಿಸ್‍ಗೆ ನೀಡಿದ ಉತ್ತರದಲ್ಲಿ ತಿಳಿಸಿದ್ದಾರೆ. "ನಾವು ತುಳಸಿ ಗಿಲೋಯ್ ಅಶ್ವಗಂಧರ ಸಂಯೋಜನೆ ಹೊಂದಿದ ಸುಧಾರಿತ ಔಷಧಿ ತಯಾರಿಸಿದ್ದೇವೆ. ಮತ್ತು ಈ ಔಷಧಿ ಕೋವಿಡ್ ರೋಗಿಗಳ ಮೇಲೆ ಕ್ಲಿನಿಕಲ್ ಪ್ರಯೋಗ ಮಾಡಲಾಗಿ ಅವರು ಗುಣಹೊಂದಿದ್ದಾರೆ.  ನಮ್ಮ ವಿರುದ್ಧ ಪಿತೂರಿ ನಡೆಸಲಾಗಿದೆ ಮತ್ತು ಆಯುಷ್ ಸಚಿವಾಲಯವು ಬಯಸಿದರೆ ನಾವು ಇನ್ನೊಮ್ಮೆ ಈ ಪ್ರಯೋಗ ಕೈಗೊಳ್ಳಲು ಸಿದ್ದವಿದ್ದೇವೆ ಎಂದಿರುವರು."
       ಇತ್ತೀಚೆಗೆ , ಪತಂಜಲಿ ಆಯುರ್ವೇದ, ನಿಮ್ಸ್ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ,ಕೊರೋನಾ ರೋಗಿಗಳನ್ನು ಗುಣಪಡಿಸುವುದಾಗಿ ಹೇಳಲಾಗಿದ್ದ  ಕೊರೊನಿಲ್ ಮತ್ತು ಶ್ವಾಸರಿ ವಾಟಿ ಎಂಬ ಔಷಧವನ್ನು ಪತಂಜಲಿ ಸಂಸ್ಥೆ ಬಿಡುಗಡೆಮಾಡಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries