HEALTH TIPS

ಕೋವಿಡ್ ಹಿನ್ನೆಲೆ ಅನ್ಯೆಡೆಗಳಿಂದ ಬಂದವರ ಅಂಕಿಅಂಶಗಳ ವಿವರ ನೀಡಿದ ಸಿಎಂ

 
       ತಿರುವನಂತಪುರ: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ವರದಿಯಾದ ಆರು ತಿಂಗಳ ಹೊತ್ತಲ್ಲಿ ಕೇರಳಕ್ಕೆ ಬಂದಿರುವ ವಲಸಿಗರ ಅಂಕಿಅಂಶಗಳನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಬಿಡುಗಡೆ ಮಾಡಿದ್ದಾರೆ. ಕೋವಿಡ್ ಪರಿಶೀಲನಾ ಸಭೆಯ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿ ಈ ವಿಷಯವನ್ನು ಬಹಿರಂಗಪಡಿಸಿದರು.
              ಈವರೆಗೆ 6.8 ಲಕ್ಷ ಜನರ ಆಗಮನ: 
      ಇಲ್ಲಿಯವರೆಗೆ 6,82,699 ಜನರು ಅನ್ಯ ಪ್ರದೇಶಗಳಿಂದ ರಾಜ್ಯಕ್ಕೆ ಬಂದಿದ್ದಾರೆ.ಈ ಪೈಕಿ 4,19,943 ಮಂದಿ ಇತರ ರಾಜ್ಯಗಳಿಂದ ಬಂದವರು. 262756 ಜನರು ವಿದೇಶದಿಂದ ಬಂದವರು ಎಂದು ಮುಖ್ಯಮಂತ್ರಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ನಿನ್ನೆ ಜುಲೈ 30 ರಂದು ಭಾರತದಲ್ಲಿ ಕೋವಿಡ್ ಮೊದಲ ಬಾಧಿತ ವರದಿಯಾಗಿ ಆರು ತಿಂಗಳು ಪೂರ್ಣಗೊಂಡ ಸಂದರ್ಭದಲ್ಲಿ ಮುಖ್ಯಮಂತ್ರಿ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ.
           ಇದುವರೆಗಿನ ಸೋಂಕಿತರ  ಅಂಕಿಅಂಶಗಳು:
    ಮೂರನೇ ಹಂತದಲ್ಲಿ ಜುಲೈ ವರೆಗೆ 21,298 ಜನರಿಗೆ ಸೋಂಕು ತಗಲಿದೆ. ಈ ಪೈಕಿ 9,099 ಮಂದಿ ಕೇರಳಕ್ಕೆ ಇತರೆಡೆಗಳಿಂದ ಆಗಮಿಸಿದವರಾಗಿದ್ದು ಸಂಪರ್ಕದ ಮೂಲಕ 12,199 ಪ್ರಕರಣಗಳು ವರದಿಯಾಗಿವೆ. ಮೂರನೇ ಹಂತದಲ್ಲಿ, ಕೋವಿಡ್ ಬಾಧಿತರ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳವನ್ನು ಮೊದಲೇ ತಿಳಿಹಿಸಲಾಗಿತ್ತು. ಆದರೆ ರೋಗದ ಹರಡುವಿಕೆಯು ಅನಿರೀಕ್ಷಿತವಾಗಿದೆ. ಕೇರಳ ಪ್ರಸ್ತುತ  ಹಿಡಿತ ಸಾಧಿಸಿದೆ. ಇತರ ರಾಜ್ಯಗಳಿಗೆ ಹೋಲಿಸಿದರೆ ಕೇರಳದಲ್ಲಿ ವೈರಸ್ ಭೀತಿ ಎನ್ನುವುದು ಗಮನಾರ್ಹ ಎಂದು ಸಿಎಂ ಹೇಳಿದರು.
          ಆರು ತಿಂಗಳ ನಿಯಮಿತ ಚಟುವಟಿಕೆ:
     ಕಳೆದ ಆರು ತಿಂಗಳಲ್ಲಿ ಕೇರಳ ಕೈಗೊಂಡ ವ್ಯವಸ್ಥಿತ ಕ್ರಮವೇ ಕೇರಳದ ಅನೇಕರು ಜೀವಹಾನಿಗಳಂತಹ ಅಪಾಯದ ಮಟ್ಟಕ್ಕೆ ತಲಪಿಲ್ಲ. ನಾವು ಆರೋಗ್ಯ ಕ್ಷೇತ್ರವನ್ನು ಮಾತ್ರ ಗಮನಿಸಿದರೆ ಸರ್ಕಾರದ ಮಧ್ಯಪ್ರವೇಶದಿಂದ ನಿಯಂತ್ರಕ ಗುರಿ ತಲಪಲಾಗುತ್ತಿದೆ. ಕಾಸರಗೋಡು ವೈದ್ಯಕೀಯ ಕಾಲೇಜನ್ನು ಕಾರ್ಯರೂಪಕ್ಕೆ ತರಲಾಗಿದ್ದು, 273 ಹುದ್ದೆಗಳನ್ನು ರಚಿಸಲಾಗಿದೆ. ತಾತ್ಕಾಲಿಕ ಆಧಾರದ ಮೇಲೆ 980 ವೈದ್ಯರನ್ನು ನೇಮಿಸಲಾಯಿತು. ಇದಲ್ಲದೆ, 6,700 ತಾತ್ಕಾಲಿಕ ಉದ್ಯೋಗಿಗಳನ್ನು ಎನ್ ಎಚ್ ಎಂ ಮೂಲಕ ನೇಮಕ ಮಾಡಿಕೊಳ್ಳಲಾಯಿತು ಎಮದು ತಿಳಿಸಿರುವರು.
                 ಒಂದು ಸಾವಿರ ಆಂಬುಲೆನ್ಸ್‍ಗಳನ್ನು ನಿಯೋಜನೆ: 
      ನಮ್ಮ ಆರೋಗ್ಯ ವ್ಯವಸ್ಥೆಯನ್ನು ತಳಮಟ್ಟಕ್ಕೆ ಬಲಪಡಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದು ಸಿಎಂ ಹೇಳಿದರು. ಕೋವಿಡ್ ರೋಗಿಗಳಿಗೆ ಮಾತ್ರ ಸುಮಾರು ಒಂದು ಸಾವಿರ ಆಂಬುಲೆನ್ಸ್‍ಗಳನ್ನು ನೀಡಲಾಗಿದೆ. ವಿವಿಧ ಕ್ಷೇತ್ರಗಳಲ್ಲಿ 50 ಮೊಬೈಲ್ ವೈದ್ಯಕೀಯ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಆಸ್ಪತ್ರೆಗಳನ್ನು ಕೋವಿಡ್ ಆಸ್ಪತ್ರೆಗಳಾಗಿ ಪರಿವರ್ತಿಸಲಾಗುತ್ತಿದೆ. ಮತ್ತು ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಆರೋಗ್ಯ ಕಾರ್ಯಕರ್ತರು 105 ರಿಂದ 95 ವರ್ಷದೊಳಗಿನ ರೋಗಿಗಳಿಗೆ ಚಿಕಿತ್ಸೆ ನೀಡಲು ಮತ್ತು ಗುಣಪಡಿಸಲು ಸಮರ್ಥರಾಗಿದ್ದಾರೆ ಎಂದು ಪಿಣರಾಯಿ ವಿಜಯನ್ ತಿಳಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries