HEALTH TIPS

ಗುರುವಾರದ ವರೆಗಿನ ರಾಜ್ಯವಾರು ಕೋವಿಡ್ ಮಾಹಿತಿ ಓದುಗರಿಗಾಗಿ


        ತಿರುವನಂತಪುರಂ ಕೇರಳದಲ್ಲಿ ಸತತ 14 ನೇ ದಿನವೂ ಕೋವಿಡ್ ಬಾಧಿತರ ಸಂಖ್ಯೆ 100 ಕ್ಕೂ ಹೆಚ್ಚು ವರದಿಯಾಗುತ್ತಿರುವುದರಿಂದ, ಕ್ವಾರಂಟೈನ್ ನಲ್ಲಿರುವವರ ಸಂಖ್ಯೆ ಹೆಚ್ಚಾಗಿದೆ. ಪ್ರಸ್ತುತ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 1,78,099 ಜನರು ಕ್ವಾರಂಟೈನ್ ಗೊಳಗಾಗಿದ್ದಾರೆ. ಈ  ಪೈಕಿ 1,75,111 ಮನೆಗಳು ಅಥವಾ ಸಾಂಸ್ಥಿಕ ಸಂಪರ್ಕದಲ್ಲಿರುವರು. ಆಸ್ಪತ್ರೆಗಳಲ್ಲಿ 2988 ಜನರು ವೀಕ್ಷಣೆಯಲ್ಲಿದ್ದಾರೆ. ನಿನ್ನೆ ಒಂದೇ ದಿನ 403 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈವರೆಗೆ 2088 ಜನರಲ್ಲಿ ಸೋಂಕು ಪತ್ತೆಯಾಗಿದೆ.
         ಕೋವಿಡ್ ಬಾಧಿತರು ನಿನ್ನೆ 160 ಜನರಿಗೆ:
      ರಾಜ್ಯದಲ್ಲಿ ಹೊಸದಾಗಿ 160 ಕ್ಕೂ ಹೆಚ್ಚು ಕೋವಿಡ್ ಸೋಂಕಿನ ಪ್ರಕರಣಗಳು ನಿನ್ನೆ(ಗುರುವಾರ)ವರದಿಯಾಗಿವೆ. ಪತ್ತನಂತಿಟ್ಟು ಜಿಲ್ಲೆಯಿಂದ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಅಲ್ಲಿ 27 ಸಾವುಗಳು ಸಂಭವಿಸಿವೆ. ದೃಢಪಡಿಸಿದ 106 ಪ್ರಕರಣಗಳಲ್ಲಿ 40 ಪ್ರಕರಣಗಳು ವಿದೇಶಗಳಿಂದ ಮತ್ತು 40 ಪ್ರಕರಣಗಳು ಇತರ ರಾಜ್ಯಗಳಿಂದ ಬಂದವರಲ್ಲಾಗಿದೆ.
           ಗುಣಮುಖರಾದವರ ಸಂಖ್ಯೆ ಹೆಚ್ಚುವಿಕೆ:
    ಕೋವಿಡ್ ವ್ಯಾಪಕತೆಯ ಭೀತಿಯ ಮಧ್ಯೆಯೂ ನಿನ್ನೆ ರೋಗಮುಕ್ತರಾದ ರೋಗಿಗಳ ಸಂಖ್ಯೆ ಹೆಚ್ಚಿರುವುಉದ ಸಮಾಧಾನಕ್ಕೂ ಕಾರಣವಾಗಿದೆ. ಚಿಕಿತ್ಸೆ ಪಡೆದ 202 ರೋಗಿಗಳಲ್ಲಿ, ಪರೀಕ್ಷಾ ಫಲಿತಾಂಶವು ಋಣಾತ್ಮಕವಾಗಿರುವುದರಿಂದ ರೋಗ ಮುಕ್ತರೆಂದು ಘೋಶಿಸಲಾಗಿದೆ. ಮಲಪ್ಪುರಂ ಜಿಲ್ಲೆಯಲ್ಲಿ ಅತಿ ಹೆಚ್ಚು ರೋಮುಕ್ತರಾದವರಿರುವ ಜಿಲ್ಲೆಯಾಗಿದ್ದು, 57 ಬಾಧಿತರು ರೋಗಮುಕ್ತಿಗೊಂಡರು. ಈ ಪೈಕಿ ಓರ್ವರು ಪಾಲಕ್ಕಾಡ್ ಮೂಲದವರು. ಪಾಲಕ್ಕಾಡ್‍ನಲ್ಲಿ 53, ಕಾಸರಗೋಡಿನಲ್ಲಿ 23, ತಿರುವನಂತಪುರಂನಲ್ಲಿ 15, ಕಣ್ಣೂರಿನಲ್ಲಿ 14, ಇಡುಕಿಯಲ್ಲಿ 13, ಎರ್ನಾಕುಲಂನಲ್ಲಿ 11, ತ್ರಿಶೂರ್‍ನಲ್ಲಿ 8, ಆಲಪ್ಪುಳದಲ್ಲಿ 7 ಮತ್ತು ಕೊಟ್ಟಾಯಂನಲ್ಲಿ ಒಬ್ಬರು ರೋಗಮುಕ್ತರಾದರು. ನಿನ್ನೆ ಕೋವಿಡ್ ರೋಗ ಪರೀಕ್ಷೆಗೊಳಗಾದವರ ಸಂಖ್ಯೆ 2,638 ಕ್ಕೆ ಏರಿದೆ.
          ಸಂಪರ್ಕದ ಮೂಲಕ 14 ಜನರು ಸೋಂಕು:
      ಕಳೆದ 24 ಗಂಟೆಗಳಲ್ಲಿ 14 ಜನರಿಗೆ ಸಂಪರ್ಕಕ್ಕದಿಂದ ಕೋವಿಡ್ ಬಾಧಿಸಿರುವುದು ದೃಢವಾಗಿದೆ. ಆಲಪ್ಪುಳದಲ್ಲಿ ಅತಿ ಹೆಚ್ಚು ಪ್ರಕರಣಗಳು ಸಂಪರ್ಕದಿಂದ ಬಂದಿದೆ.  ಐದು ಜನರಿಗೆ ಕೋವಿಡ್ -19 ರೋಗನಿರ್ಣಯ ಮಾಡಲಾಗಿದೆ. ಇದಲ್ಲದೆ, ತಿರುವನಂತಪುರಂ ಮತ್ತು ಎರ್ನಾಕುಲಂ ಜಿಲ್ಲೆಗಳಲ್ಲಿ ತಲಾ ನಾಲ್ಕು ವ್ಯಕ್ತಿಗಳು ಮತ್ತು ಕೊಟ್ಟಾಯಂ ಜಿಲ್ಲೆಯ ಒಬ್ಬ ವ್ಯಕ್ತಿ ಸಂಪರ್ಕ ಮೂಲದಿಂದ ವೈರಸ್ ಬಾಧಿಸಿ ಬಳಲುತ್ತಿದ್ದಾರೆ. 
            ಹೆಚ್ಚಿನ ತಪಾಸಣೆ:
    ರಾಜ್ಯದಲ್ಲಿ ಕೋವಿಡ್ -19 ಸೋಂಕು ಪತ್ತೆಯ ವೈದ್ಯಕೀಯ ಪರೀಕ್ಷೆಯನ್ನು ಸರ್ಕಾರ ಹೆಚ್ಚಿಸಿದೆ. 24 ಗಂಟೆಗಳ ಅವಧಿಯಲ್ಲಿ 7589 ಮಾದರಿಗಳನ್ನು ಪರೀಕ್ಷಿಸಲಾಯಿತು. ವಿವಿಧ ವಿಧಾನಗಳ ಮೂಲಕ ಸಂಗ್ರಹಿಸಿದ ಒಟ್ಟು 2,46,799 ಮಾದರಿಗಳನ್ನು ಪರಿಶೀಲನೆಗಾಗಿ ಕಳುಹಿಸಲಾಗಿದೆ. ಈ ಪೈಕಿ 4,722 ಮಾದರಿಗಳನ್ನು ಪರೀಕ್ಷಿಸುವ ನಿರೀಕ್ಷೆಯಿದೆ. ಇದಲ್ಲದೆ, ಸೆಂಟಿನೆಲ್ ಕ್ವಾರಂಟೈನ್ ಭಾಗವಾಗಿ ಆರೋಗ್ಯ ಕಾರ್ಯಕರ್ತರು, ಅತಿಥಿ ಕೆಲಸಗಾರರು, ಸಾಮಾಜಿಕ ಸಂಪರ್ಕಗಳಂತಹ ಆದ್ಯತೆಯ ಗುಂಪುಗಳಿಂದ 52,316 ಮಾದರಿಗಳನ್ನು ಸಂಗ್ರಹಿಸಲಾಗಿದೆ ಮತ್ತು 50,002 ಮಾದರಿಗಳು ನಕಾರಾತ್ಮಕವಾಗಿವೆ.
              ಮೂರು ಹೊಸ ಹಾಟ್‍ಸ್ಪಾಟ್‍ಗಳು:
      ರಾಜ್ಯದಲ್ಲಿ ಮೂರು ಹೊಸ ಹಾಟ್ ಸ್ಪಾಟ್‍ಗಳನ್ನು ನಿನ್ನೆ ನಿರ್ಧರಿಸಲಾಗಿದೆ. ಕಣ್ಣೂರು ಮತ್ತು ಕೋಝಿಕ್ಕೋಡ್ ಜಿಲ್ಲೆಗಳಲ್ಲಿ ಹೊಸ ಹಾಟ್ ಸ್ಪಾಟ್‍ಗಳನ್ನು ನಿರ್ಧಋಇಸಲಾಗಿದೆ. ಕಣ್ಣೂರಿನಲ್ಲಿ ಪನೂರ್ (ಕಂಟೈನ್‍ಮೆಂಟ್ ವಲಯ ವಾರ್ಡ್‍ಗಳು: 3, 26, 31), ಕೋಝಿಕ್ಕೋಡ್ ಕಾಪೆರ್Çರೇಷನ್ (56, 62, 66) ಮತ್ತು ಒಳವಣ್ಣ (9) ಹೊಸ ಹಾಟ್ ಸ್ಪಾಟ್‍ಗಳಾಗಿವೆ.
          ಏತನ್ಮಧ್ಯೆ, ಮೂರು ಪ್ರದೇಶಗಳನ್ನು ಹಾಟ್ ಸ್ಪಾಟ್ನಿಂದ ಹೊರಗಿಡಲಾಗಿದೆ. ಪಡಿಯೂರ್, ಕಣ್ಣೂರು ಜಿಲ್ಲೆಯ ಕಿಲ್ಲೂರ್ ಮತ್ತು ಪಾಲಕ್ಕಾಡ್ ಜಿಲ್ಲೆಯ ಅನಕ್ಕಾರರನ್ನು ಕಂಟೋನ್ಮೆಂಟ್ ವಲಯದಿಂದ ಹೊರಗಿಡಲಾಗಿದೆ. ಪ್ರಸ್ತುತ 123 ಹಾಟ್ ಸ್ಪಾಟ್‍ಗಳಿವೆ.
  

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries