ಮಂಜೇಶ್ವರ/ಕುಂಬಳೆ: ಮುಸ್ಲಿಂ ಬಾಂಧವರಿಂದ ತ್ಯಾಗದ ಹಬ್ಬವಾದ ಬಕ್ರೀದ್ ಶುಕ್ರವಾರ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ನಡೆಯಿತು. ಕೋವಿಡ್ ನಿಬಂಧನೆಗಳಿಗೆ ಈದ್ ಪ್ರಾರ್ಥನೆಯನ್ನು ನೆರವೇರಿಸಿದರು.
ಈದ್ ಪ್ರಾರ್ಥನೆಯ ಬಳಿಕ ಪರಸ್ಪರ ಕೈಕುಲುಕುವ, ಅಪ್ಪಿಕೊಳ್ಳುವ ಸಾಮಾನ್ಯ ಶುಭಾಶಯಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು. ಪ್ರಾರ್ಥನೆಯ ಬಳಿಕ ನಡೆದ ಈದ್ ಸಂದೇಶದಲ್ಲಿ ಮುಸ್ಲಿಂ ವಿದ್ವಾಂಸರು ಇತಿಹಾಸದಲ್ಲಿ ಮೊದಲ ಬಾರಿಗೆ ಹಜ್ ಯಾತ್ರೆಯನ್ನು ಸಹ ನಿಬರ್ಂಧಿಸಬೇಕಾಗಿದೆ. ಈ ಹಿನ್ನೆಲೆಯನ್ನು ಅರ್ಥೈಸಿ ಸಾಂಕ್ರಾಮಿಕ ರೋಗಮುಕ್ತಿಗೆ ವಿಶೇಷ ಧರ್ಮೋಪದೇಶ ನೀಡಿದರು.
ಸರ್ಕಾರವು ನಿಗದಿಪಡಿಸಿದ ಕೋವಿಡ್ ಮಾನದಂಡಗಳಿಗೆ ಅನುಗುಣವಾಗಿ ಈಗ ಜೀವನವನ್ನು ನಡೆಸಬೇಕು ಮತ್ತು ಪ್ರಾರ್ಥನೆಯನ್ನು ಕೈಬಿಡದಿದ್ದರೆ ಯಾವುದೇ ಸಾಂಕ್ರಾಮಿಕ ರೋಗವನ್ನು ಹೋರಾಡಬಹುದು ಎಂದು ಖತೀಬ್‍ಗಳು ನೆನಪಿಸಿದರು. ಮಹಲ್ ಸಮಿತಿಗಳು ಮತ್ತು ಖತೀಬ್‍ಗಳು ಆಚರಣೆಯನ್ನು ಮನೆಗಳಿಗೆ ಸೀಮಿತಗೊಳಿಸಬೇಕೆಂದು ಕರೆ ನೀಡಿದ್ದರು.