HEALTH TIPS

ರಾಜ್ಯದಲ್ಲಿ ಮತ್ತೆ ಕೊರೊನಾ ಸೋಂಕಿತರ ಏರಿಕೆ-ಹಾಟ್ ಸ್ಪಾಟ್ ಗಳಲ್ಲಿ ಹೆಚ್ಚಳ


               ತಿರುವನಂತಪುರ: ಕೇರಳದಲ್ಲಿ ಕೊರೊನಾ ಮತ್ತೆ ಕಳವಳಕಾರಿಯಾಗಿದ್ದು ಇಂದು  151 ಸೋಂಕಿತರು ಪತ್ತೆಯಾಗಿದ್ದಾರೆ. 131 ರೋಗಿಗಳು ಸೋಂಕಿನಿಂದ ಮುಕ್ತರಾಗಿರುವರು. ಇಂದಿನ ಪರೀಕ್ಷೆಯಲ್ಲಿ ಹದಿಮೂರು ಮಂದಿಗಳಿಗೆ ಸಂಪರ್ಕದಿಂದ ಸೋಂಕು ತಗುಲಿರುವುದು ದೃಢಪಟ್ಟಿದೆ.   
              ಇಂದು ಸೋಂಕು ದೃಢಪಟ್ಟವರಲ್ಲಿ 86 ಮಂದಿ ವಿದೇಶದಿಂದ ಬಂದವರು. 81 ಮಂದಿ ಇತರ ರಾಜ್ಯಗಳಿಂದ ಬಂದವರಾಗಿದ್ದಾರೆ. ನೂರಕ್ಕಿಂತ ಮೇಲೆ ಸೋಂಕು ರಾಜ್ಯದಲ್ಲಿ ಏರಿಕೆಯಾಗುತ್ತಿರುವುದು ಇಂದು 13ನೇ ದಿನವಾಗಿದೆ.
           ಕೇರಳದಲ್ಲಿ ಸಿವಿಡಿ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿಲ್ಲ. ಇಂದು ಮಲಪ್ಪುರಂ  34, ಕಣ್ಣೂರು 27, ಪಾಲಕ್ಕಾಡ್ 17, ತಿರುವನಂತಪುರಂ 4, ಕೊಲ್ಲಂ 3, ಎರ್ನಾಕುಲಂ 12, ಕಾಸರಗೋಡು 10, ತ್ರಿಶೂರ್ 18, ಪತ್ತನಂತಿಟ್ಟು 6, ಕೋಝಿಕ್ಕೋಡ್ 6, ಕೊಟ್ಟಾಯಂ 4., ವಯನಾಡ್ 3, ಇಡುಕ್ಕಿ 1 ಜಿಲ್ಲೆಗಳಲ್ಲಿ ಹೊಸ ಸೋಂಕಿತರನ್ನು ಪತ್ತೆಹಚ್ಚಲಾಗಿದೆ.
                 ರಾಜ್ಯದ ಒಟ್ಟುಯ ಮಾಹಿತಿ:
      ಕೇರಳದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಕುಸಿತ ಉಂಟಾಗದಿರುವುದು ಆತಂಕಕಾರಿಯಾಗಿದೆ ಎಂದು ಮುಖ್ಯಮಂತ್ರಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ರಾಜ್ಯದ ಜಿಲ್ಲೆಗಳಾದ  ಕೊಲ್ಲಂ (21) ಜಿಲ್ಲೆಯಿಂದ ವರದಿಯಾಗಿವೆ. ತಿರುವನಂತಪುರಂ 3, ಕೊಲ್ಲಂ 21, ಪತ್ತನಂತಿಟ್ಟು 5, ಆಲಪ್ಪುಳ 9, ಕೊಟ್ಟಾಯಂ 6, ಇಡುಕಿ 2, ಎರ್ನಾಕುಲಂ 1, ತ್ರಿಶೂರ್ 16, ಪಾಲಕ್ಕಾಡ್ 11, ಮಲಪ್ಪುರಂ 12, ಕೋಝಿಕ್ಕೋಡ್ 15, ವಯನಾಡ್ 2, ಕಣ್ಣೂರು 13 ಮತ್ತು ಕಾಸರಗೋಡು 16 ಮಂದಿಗಳು ಇಂದು ಗುಣಮುಖರಾಗಿ ತೆರಳಿದರು.
        ಮತ್ತೆ ಕೋವಿಡ್ ಮೃತ್ಯು:
      ನಿನ್ನೆ ಆತ್ಮಹತ್ಯೆಗೈದ ಕೋಝಿಕ್ಕೋಡ್ ನಾಡಕ್ಕಾವ್ ಮೂಲದ ಕೃಷ್ಣನ್ ಅವರ ಪರಿಶೋಧನಾ ವರದಿ ಇಂದಷ್ಟೇ ಬಂದಿದ್ದು ಕೋವಿಡ್ ಇರುವುದು ಖಚಿತವಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಕೋವಿಡ್ ಸಾವು ಮತ್ತೆ ಏರಿಕೆಯಾಗಿದೆ.
            ಹಾಟ್‍ಸ್ಪಾಟ್ ಮಾಹಿತಿ:
     ಕೋವಿಡ್ ಪೀಡಿತರ ಸಂಖ್ಯೆಯಲ್ಲಿ ಹೆಚ್ಚಳದೊಂದಿಗೆ, ಹಾಟ್ ಸ್ಪಾಟ್‍ಗಳ ಸಂಖ್ಯೆಯೂ ಹೆಚ್ಚಳಗೊಂಡಿದೆ. ರಾಜ್ಯದಲ್ಲಿ 124 ಹಾಟ್ ಸ್ಪಾಟ್‍ಗಳಿವೆ. ಟ್ರಿಪಲ್ ಲಾಕ್ ಡೌನ್ ಹೊಂದಿರುವ ಪೆÇನ್ನಾನಿ ಅತಿ ಸೂಕ್ಷ್ಮ ವಲಯವಾಗಿದೆ.  ಐಜಿ ಅಶೋಕ್ ಯಾದವ್ ಅವರ ಮೇಲ್ವಿಚಾರಣೆಯಲ್ಲಿ ಈ ಪ್ರದೇಶದಲ್ಲಿ ನಿಬರ್ಂಧಗಳು ಮತ್ತು ನಿರ್ದೇಶನಗಳನ್ನು ನೀಡಲಾಗುತ್ತಿದೆ. ಈ ಪ್ರದೇಶದ ಮೇಲೆ ಕಠಿಣ ನಿಯಂತ್ರಣ ಹೇರಲು ಪೆÇಲೀಸರು ಮುಂದಾಗಿದ್ದಾರೆ.
            63 ಉದ್ಯೋಗಿ ಕೋವಿಡ್ ಚೆಕ್ ಫಲಿತಾಂಶಗಳು ಋಣಾತ್ಮಕ
      ಮಲಪ್ಪುರಂ ಎಡಪ್ಪಲ್ ಆಸ್ಪತ್ರೆಯ 163 ಆಸ್ಪತ್ರೆ ಉದ್ಯೋಗಿಗಳ ಕೋವಿಡ್ ಪರೀಕ್ಷಾ ಫಲಿತಾಂಶಗಳು ಋಣಾತ್ಮಕವೆಂದು ದೃಢಪಡಿಸಲಾಗಿದೆ. ಕೋವಿಡ್ ಖಚಿತವಾದ ನಂತರ ಇಬ್ಬರು ವೈದ್ಯರು ಮತ್ತು ಮೂವರು ದಾದಿಯರು ಸೇರಿದಂತೆ ಐದು ಆರೋಗ್ಯ ಕಾರ್ಯಕರ್ತರನ್ನು ಹೆಚ್ಚಿನ ಪರೀಕ್ಷೆಗಳಿಗೊಳಪಡಿಸಲಾಗಿದೆ. ಅವರು ಸಂಪರ್ಕದಿಂದ ಸೋಂಕಿಗೆ ಒಳಗಾಗಿದ್ದಾರೆಯೇ ಎಂಬ ಅನುಮಾನ ವ್ಯಕ್ತವಾಗಿದೆ. ಇದರೊಂದಿಗೆ ಆಸ್ಪತ್ರೆಯಲ್ಲಿ ನಿಯಂತ್ರಣಗಳನ್ನು ಬಿಗಿಗೊಳಿಸಲಾಯಿತು. ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗುತ್ತಿದ್ದಂತೆ ದೊಡ್ಡ ಆತಂಕ ದೂರವಾಗಿದೆ.
              ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿ ಮೃತ:
      ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್‍ನ ಕ್ವಾರಂಟೈನ್ ನಲಿದ್ದ ವಲಸೆ ಕಾರ್ಮಿಕ ಸಾವನ್ನಪ್ಪಿದ್ದಾನೆ. ಮೃತನನ್ನು ಉತ್ತರ ಪ್ರದೇಶದ ನಿವಾಸಿ ಬುಂಡಿ (23) ಎಂದು ಗುರುತಿಸಲಾಗಿದೆ. ಅವರ ಶವವನ್ನು ಕಾಸರಗೋಡು ವೈದ್ಯಕೀಯ ಕಾಲೇಜಿನಲ್ಲಿ ಇಡಲಾಗಿದೆ. ಜೊಲ್ಲನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಅವರು ಇಂದು ಬೆಳಿಗ್ಗೆ ಕಾಸರಗೋಡು ತಲುಪಿದ್ದರು. ಅವರು ಮಧ್ಯಾಹ್ನ ಮೃತಪಟ್ಟರು.
             ಕೇರಳದ ಕೋವಿಡ್ ಪರಿಸ್ಥಿತಿಗಳು ಈ ಕೆಳಗಿನಂತಿವೆ
       ಕೋವಿಡ್ ಪೀಡಿತರ ಸಂಖ್ಯೆ ಹೆಚ್ಚಾದಂತೆ ಕಳವಳಗಳು ಪ್ರಬಲವಾಗಿವೆ. ಆಸ್ಪತ್ರೆಗಳು ಮತ್ತು ಮನೆಗಳಲ್ಲಿ ಹೆಚ್ಚುತ್ತಿರುವ ಜನರ ಚಿಕಿತ್ಸೆ ಮತ್ತು ಕ್ವಾರಂಟೈನ್ ಮುಂದುವರಿಯುತ್ತಿದೆ. ಆರೋಗ್ಯ ಕಾರ್ಯಕರ್ತರಲ್ಲಿ ಸಂಪರ್ಕ ಕಾರಣ ಸೋಂಕು ಬಾಧಿಸುತ್ತಿರುವುದು ಕಳವಳಕಾರಿಯಾಗಿದೆ. ಇತರ ರಾಜ್ಯ ಹಾಗೂ ವಿದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ರಾಜ್ಯಕ್ಕೆ ಬರುವುದರಿಂದ ಸೋಂಕಿತರ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ ಎಂದು ಪರಿಭಾವಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries