ಕಾಸರಗೋಡು: ಜಿಲ್ಲೆಯಲ್ಲಿ ಸಂಪರ್ಕ ಮೂಲಕ ಇಬ್ಬರಿಗೆ ಕೋವಿಡ್ ಸೋಂಕು ಖಚಿತಗೊಂಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಹೆಚ್ಚುವರಿ ಜಾಗರೂಕತೆ ಪಾಲಿಸಬೇಕು. ಆರೋಗ್ಯ ಇಲಾಖೆ ತಿಳಿಸಿರುವ ಕಟ್ಟುನಿಟ್ಟುಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
ಇತರ ರಾಜ್ಯಗಳಿಂದ ಆಗಮಿಸಿದ ಮಂದಿ ತಮ್ಮ ಸ್ಪಷ್ಟ ಯಾತ್ರಾ ಮಾಹಿತಿಯನ್ನು ತಿಳಿಸಬೇಕು. ಯಾವ ವಿಚಾರವನ್ನೂ ಗುಟ್ಟಾಗಿರಿಸಬಾರದು. ಇದರಿಂದ ಗಂಭೀರ ಸಮಸ್ಯೆಗಳು ತಲೆದೋರುವ ಭೀತಿಯಿದೆ. ಜೊತೆಗೆ ಈ ಆದೇಶ ಉಲ್ಲಂಘನೆ ಕೇರಳ ಎಪಿಡೆಮಿಕ್ ಡಿಸೀಸ್ ಆರ್ಡಿನೆನ್ಸ್ 2020 ಪ್ರಕಾರ ಶಿಕ್ಷಾರ್ಹವಾಗಿದೆ ಎಂದವರು ತಿಳಿಸಿರುವರು.