ಕಾಸರಗೋಡು: ಕೋವಿಡ್ ಪ್ರತಿರೋಧ ಚಟುವಟಿಕೆಗಳ ಅಂಗವಾಗಿ ಕಾಸರಗೋಡು ಥಿಯೇಟ್ರಿಕ್ಸ್ ಸೊಸೈಟಿ ಒಂದು ಸಾವಿರ ಮಾಸ್ಕ್ ಗಳ ವಿತರಣೆ ನಡೆಸಿದೆ. ಆರೋಗ್ಯ ವಲಯದಲ್ಲಿ ಚಟುವಟಿಕೆ ನಡೆಸುತ್ತಿರುವ ಶುಚೀಕರಣ ಕಾರ್ಮಿಕರು, ಪೆÇಲೀಸರು, ಆಟೋ ಚಾಲಕರು, ಕೆ.ಎಸ್.ಆರ್.ಟಿ.ಸಿ. ಬಸ್ ಕಾರ್ಮಿಕರು, ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ, ಪತ್ರಕರ್ತರು ಮೊದಲಾದವರಿಗಾಗಿ ಈ ಮಾಸ್ಕ್ ವಿತರಣೆ ನಡೆಸಲಾಗಿದೆ.
ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಥಿಯೇಟ್ರಿಕ್ಸ್ ಸೊಸೈಟಿ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಆರೋಗ್ಯ ಮಿಷನ್ ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಡಾ.ರಾಮನ್ ಸ್ವಾತಿ ವಾಮನ್ ಅವರು ಮಾಸ್ಕ್ ಪಡೆದುಕೊಂಡರು. ಸೊಸೈಟಿ ಕಾರ್ಯದರ್ಶಿ ಟಿ.ಎ.ಶಾಫಿ, ಕೋಶಾಧಿಕಾರಿ ಟಿ.ವಿ.ಗಂಗಧರನ್, ಜಿ.ಬಿ.ವತ್ಸನ್, ಉಮೇಶ್ ಎಂ.ಸಾಲ್ಯಾನ್, ಕೆ.ಎಸ್.ಗೋಪಾಲಕೃಷ್ಣನ್, ಪ್ರಭಾಕರನ್, ಡಾ.ಅಶ್ವಿನಿ, ದಿಲೀಪ್ ಚಿಲಂಗ, ಅನಂತಕೃಷ್ಣನ್, ಷಹಸಮಾನ್ ತೊಟ್ಟಾನ್, ಹುಸೂರ್ ಶಿರಸ್ತೇದಾರ್ ಮುರಳೀಧರನ್ , ಖಾಲಿದ್ ಕ್ಲಾಪ್ ಔಟ್ ಮೊದಲಾದವರು ಉಪಸ್ಥಿತರಿದ್ದರು.