ಕಾಸರಗೋಡು: ಕಾಸರಗೋಡು ಜಿಲ್ಲೆಯ ಎಲ್ಲ ಕಸಾಯಿಖಾನೆ, ಮಾಂಸ ಮಾರಾಟ ಅಂಗಡಿಗಳಲ್ಲಿ ಮೃಗಸಂರಕ್ಷಣೆ ಇಲಾಖೆ ಅಧಿಕಾರಿಗಳು ತಪಾಸಣೆ ನಡೆಸಲಿದ್ದಾರೆ. ಶುಚಿತ್ವ ಮತ್ತು ಗುಣಮಟ್ಟ ಪರಿಶೀಲನೆ, ಕೋವಿಡ್ ಪ್ರತಿರೋಧ ಕಟ್ಟುನಿಟ್ಟುಗಳ ಪಾಲನೆ ಖಚಿತಪಡಿಸುವಿಕೆ ಸಂಬಂಧ ಈ ತಪಾಸಣೆ ಜರಗುವುದು. ಈ ಸಂಬಂಧ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಮೃಗಸಂರಕ್ಷಣೆ ಇಲಾಖೆಯ ವಿಶೇಷ ದಳಕ್ಕೆ ಆದೇಶ ನೀಡಿದ್ದಾರೆ. 4 ತಾಲೂಕುಗಳಲ್ಲೂ ಬೆಳಗ್ಗೆ 5 ರಿಂದ ತಪಾಸಣೆ ಆರಂಭಗೊಳ್ಳಲಿದೆ. ಆದೇಶ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೆÇಲೀಸರಿಗೂ ಆದೇಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿರುವರು.