ಕಾಸರಗೋಡು: ಕ್ವಾರಂಟೈನ್ ತಪ್ಪಿಸಲು ಜಿಲ್ಲಾಡಳಿತಕ್ಕೆ ಮಾಹಿತಿ ನೀಡದೆ ಬೆಂಗಳೂರಿಂದ ರಹಸ್ಯವಾಗಿ ಗಡಿ ದಾಟಿ ಬಂದಿದ್ದ ವ್ಯಕ್ತಿಗೆ ನಿನ್ನೆ ಕೋವಿಡ್ ದೃಢಪಟ್ಟಿದೆ. ಜ್ವರದಿಂದ ಅವರನ್ನು ಚೆಂಗಳ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ತಮ್ಮ ಕಾರಿನಲ್ಲಿ ತಾನು ಆಲಪ್ಪುಳದಿಂದ ಬಂದಿರುವುದಾಗಿ, ಹೊರ ರಾಜ್ಯಕ್ಕೆ ಹೋಗಿಲ್ಲ ಎಂದು ಸುಳ್ಳು ಹೇಳಿದ್ದರಿಂದ ಅವರ ಮಾತನ್ನು ನಂಬಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇಂದಿರಾನಗರ ಪೆÇಡಿಪಲ್ಲಂ ನಿವಾಸಿ 50 ವರ್ಷದ ವ್ಯಕ್ತಿ ಹತ್ತು ದಿನಗಳ ಹಿಂದೆ ಬೆಂಗಳೂರಿಂದ ಆಗಮಿಸಿದ್ದರು. ಆತ ಬೆಂಗಳೂರಿನಲ್ಲಿ ಜ್ವರ ಪೀಡಿತರ ಮನೆಗೆ ಭೇಟಿ ನೀಡಿದ್ದು, ಮನೆಗೆ ಮರಳಿದ ಕೂಡಲೇ ಆಲಪ್ಪುಳಕ್ಕೆ ಹೋಗಿದ್ದೆ ಎಂದು ತಿಳಿಸಿದ್ದ. ಈತನಿಗೆ ಕೋವಿಡ್ ದೃಢಪಟ್ಟ ಬಳಿಕ ಆಸ್ಪತ್ರೆಯ ವೈದ್ಯರು ಮತ್ತು ದಾದಿಯರು ಸೇರಿದಂತೆ 10 ಜನರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. ವ್ಯಕ್ತಿ ಪರೀಕ್ಷೆಗಾಗಿ ಭೇಟಿ ನೀಡಿದ್ದ ಕಾಸರಗೋಡಿನ ಪ್ರಸಿದ್ದ ಸ್ಕ್ಯಾನಿಂಗ್ ಕೇಂದ್ರವನ್ನು ಮುಚ್ಚಲಾಗಿದೆ.
ಇತರ ರಾಜ್ಯಗಳಿಂದ ಆಗಮಿಸುವ ಸಭ್ಯ ನಾಗರಿಕರು ತಮ್ಮ ನಿಜವಾದ ಪ್ರಯಾಣದ ವಿವರಗಳನ್ನು ಬಹಿರಂಗಪಡಿಸಬೇಕಾಗಿದೆ, ಮತ್ತು ಪ್ರಯಾಣದ ಮಾಹಿತಿಯನ್ನು ಮರೆಮಾಡುವುದು ಜಿಲ್ಲೆಯಲ್ಲಿ ಕೋವಿಡ್‍ನ ಸಾಮಾಜಿಕ ಹರಡುವಿಕೆಯಂತಹ ಗಂಭೀರ ಪರಿಣಾಮಗಳನ್ನು ಉಂಟುಮಾಡುತ್ತದೆ ಎಂದು ಡಿಎಂಒ ಎ.ವಿ.ರಾಮದಾಸ್ ಹೇಳಿರುವರು. ಸುಳ್ಳು ಮಾಹಿತಿ ನೀಡುವುದು ಕೇರಳ ಸಾಂಕ್ರಾಮಿಕ ರೋಗದ ಸುಗ್ರೀವಾಜ್ಞೆ 2020 ರ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ.
ಜಾಲ್ಸೂರ್ ಸಹಿತವಾಗಿರುವ ವಿವಿಧ ಅಂತರ್ ರಾಜ್ಯ ಗ್ರಾಮೀಣ ರಸ್ತೆಗಳ ಮೂಲಕ ಮತ್ತು ಅಕ್ರಮವಾಗಿ ಚೆಕ್‍ಪೆÇೀಸ್ಟ್‍ಗಳ ಮೂಲಕ ಜಿಲ್ಲೆಗೆ ಬರುವುದು ಆರೋಗ್ಯ ಇಲಾಖೆಗೆ ಕೋವಿಡ್ -19 ದೃಢಪಡಿಸಲು, ಪ್ರಯಾಣದ ಮಾಹಿತಿಯನ್ನು ಪತ್ತೆಹಚ್ಚಲು, ಅವರು ಯಾರೊಂದಿಗೆ ಸಂಪರ್ಕದಲ್ಲಿದ್ದರು ಎಂಬುದನ್ನು ಕಂಡುಹಿಡಿಯಲು ಮತ್ತು ಸಾಮಾಜಿಕ ಹರಡುವಿಕೆಯನ್ನು ತಡೆಯಲು ಕಷ್ಟಕರವಾಗಿ ಪರಿಣಮಿಸುತ್ತಿದೆ. ಆದ್ದರಿಂದ ಇತರ ರಾಜ್ಯಗಳಿಂದ ಅಕ್ರಮವಾಗಿ ಬರದಂತೆ ಡಿಎಂಒ ಸೂಚಿಸಿದ್ದಾರೆ. ಸಂತ್ರಸ್ತ ವ್ಯಕ್ತಿ ಬಂದ ಕಾಲುದಾರಿಯಲ್ಲಿ ಪೆÇಲೀಸರನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಸಜಿತ್ ಬಾಬು ತಿಳಿಸಿದ್ದಾರೆ.