ಮಂಜೇಶ್ವರ: ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಕಾಸರಗೋಡು ಜಿಲ್ಲೆಯಿಂದ ತೆರಳುವ ವಿದ್ಯಾರ್ಥಿಗಳಿಗೆ ತೆರಳಲು ಜಿಲ್ಲಾಡಳಿತದಿಂದ ವಿಶೇಷ ವ್ಯವಸ್ಥೆ ಮಾಡಲಾಗಿತ್ತು.
ಮೂರು ದಿನಗಳಲ್ಲಾಗಿ ನಡೆಯುವ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಜಿಲ್ಲೆಯಿಂದ ತಲಪ್ಪಾಡಿ ಗಡಿ ಮೂಲಕ 480 ವಿದ್ಯಾರ್ಥಿಗಳು ಮಂಗಳೂರಿನ ವಿವಿಧ ಪರೀಕ್ಷಾ ಕೇಂದ್ರಗಳಿಗೆ ತೆರಳಿದರು.
ಜಿಲ್ಲಾಡಳಿತವು ತಲಪ್ಪಾಡಿ ಗಡಿಯ ವರೆಗೆ 11 ಬಸ್ ಗಳನ್ನು ವಿದ್ಯಾರ್ಥಿಗಳ ಸಂಚಾರಕ್ಕೆ ವಿಶೇಷವಾಗಿ ವ್ಯವಸ್ಥೆಗೊಳಿಸಿತು. ಕರ್ನಾಟಕ ಗಡಿಯಿಂದ ಮಂಗಳೂರಿಗೆ 17 ಬಸ್ ಗಳನ್ನು ದ.ಕ ಜಿಲ್ಲಾಡಳಿತ ವ್ಯವಸ್ಥೆಗೊಳಿಸಿತ್ತು. ಸಂಜೆ ವಿದ್ಯಾರ್ಥಿಗಳು ಮರಳುವಲ್ಲಿವರೆಗೆ ತಲಪ್ಪಾಡಿಯಲ್ಲೇ ನಿಲುಗಡೆಗೊಳಿಸಲಾಗಿದ್ದ ವಿಶೇಷ ಬಸ್ ಗಳು ಬಳಿಕ ವಿದ್ಯಾರ್ಥಿಗಳನ್ನು ಸ್ವಸ್ಥಾನಕ್ಕೆ ಕರೆದೊಯ್ದವು.
ಜೊತೆಗೆ ಕರ್ನಾಟಕದ ಇತರ ಗಡಿಗಳಾದ ಸಾರಡ್ಕ ಹಾಗೂ ಪಂಜಿಕಲ್ಲುಗಳಲ್ಲೂ ವ್ಯವಸ್ಥೆ ಕಲ್ಪಿಸಲಾಗಿತ್ತು.
ಗುರುವಾರ ಮುಂಜಾನೆ ಜಿಲ್ಲೆಯಾದ್ಯಂತ ಭಾರೀ ಮಳೆಯಾದ್ದರಿಂದ ವಿದ್ಯಾರ್ಥಿಗಳಿಗೆ ವಿಶೇಷ ಬಸ್ ಲಭ್ಯವಾಗುವಲ್ಲಿಗೆ ತೆರಳಲು ಕೆಲವರಿಗೆ ಅಲ್ಪ ತೊಂದರೆಯಾಯಿತಾದರೂ ನಿಗದಿತ ಸಮಯಕ್ಕೆ ಸಂಚಾರ ಆರಂಭಗೊಳ್ಳುವಲ್ಲಿ ಸಾಫಲ್ಯಗೊಂಡಿತು.