HEALTH TIPS

ಸಿರಿಬಾಗಿಲು ಪ್ರತಿಷ್ಠಾನದ ಸಂಯೋಜನೆಯಲ್ಲಿ ಬೊಂಬೆಯಾಟ ಸಂಘದ ಸಹಯೋಗದೊಂದಿಗೆ ಕೊರೊನಾ ಯಕ್ಷಜಾಗೃತಿ- ಕಲೆಯ ಮೂಲಕ ಕೊರೊನಾ ಜಾಗೃತಿ ಪರಿಣಾಮಕಾರಿ ಡಾ. ಡಿ. ಸಜಿತ್ ಬಾಬು


             ಕಾಸರಗೋಡು: ಜಾಗತಿಕ ಮಟ್ಟದಲ್ಲಿ ಜನಜೀವನವನ್ನು ತಲ್ಲಣಗೊಳಿಸುತ್ತಿರುವ ಮಹಾಮಾರಿ ಕೊರೊನಾ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಇಂದು ಬಹಳ ಮುಖ್ಯವಾಗಿ ನಡೆಯುತ್ತಿದೆ. ಇದರ ಮಹತ್ವವನ್ನು ಅರಿತು ಯಕ್ಷಗಾನ ಕಲೆ ಹಾಗೂ ಗೊಂಬೆಯಾಟದ ಮೂಲಕ ಮೂರು ಬೇರೆ ಬೇರೆ ಭಾಷೆಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನ ಹಾಗೂ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಗೊಂಬೆಯಾಟ ಸಂಘವು ಮಾಡುತ್ತಿರುವುದು ಅತ್ಯಂತ ಶ್ಲಾಘನೀಯ ವಿಚಾರ ಎಂದು ಜಿಲ್ಲಾಧಿಕಾರಿ ಡಾ. ಡಿ. ಸಜಿತ್ ಬಾಬು ಐ.ಎ.ಎಸ್ ಅಭಿಪ್ರಾಯಪಟ್ಟರು.
           ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಕಾಸರಗೋಡು ಸಂಯೋಜನೆಯಲ್ಲಿ, ಶ್ರೀ ಗೋಪಾಲಕೃಷ್ಣ ಯಕ್ಷಗಾನ ಗೊಂಬೆಯಾಟ ಸಂಘದ ಸಹಯೋಗದೊಂದಿಗೆ ಕಾಸರಗೋಡು ಸರಕಾರಿ ಕಾಲೇಜಿನ ಸಹಕಾರದೊಂದಿಗೆ ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಸಾರಗೊಳ್ಳಲು ಸಜ್ಜಾಗುತ್ತಿರುವ 'ಕೊರೊನಾ ಯಕ್ಷ ಜಾಗೃತಿ' ಯಕ್ಷಗಾನ ಗೊಂಬೆಯಾಟ ಪ್ರದರ್ಶನ ಯೋಜನೆಯ ಉದ್ಘಾಟನೆಯನ್ನು ಕಾಸರಗೋಡು ಯಕ್ಷಪುತ್ಥಳಿ ಗೊಂಬೆ ಮನೆಯಲ್ಲಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
         ಕೋವಿಡ್ 19 ಎಂಬ ಈ ಸಾಂಕ್ರಾಮಿಕ ರೋಗಕ್ಕೆ ಔಷಧಿಯನ್ನು ಕಂಡುಹಿಡಿಯುವವರೆಗೆ ನಾವು ನಮ್ಮ ಬದುಕಿನ ರೀತಿನೀತಿಗಳಲ್ಲಿ ಸಾಕಷ್ಟು ಹೊಂದಾಣಿಕೆಗಳನ್ನು ಮಾಡಬೇಕಾಗಿದೆ. ಪ್ರತಿಯೊಬ್ಬ ವ್ಯಕ್ತಿಯೂ ಸಮಾಜದ ಭಾಗವೇ ಆದ ಕಾರಣ, ಒಬ್ಬ ವ್ಯಕ್ತಿಯ ನಿರ್ಲಕ್ಷ್ಯವೂ ದೇಶದ ಅತಂತ್ರ ಸ್ಥಿತಿಗೆ ಕಾರಣವಾಗುವ ಸಾಧ್ಯತೆಯಿದೆ. ಇಂತಹ ತುರ್ತು ಸನ್ನಿವೇಶದಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಪ್ರಕ್ರಿಯೆ ನಿತ್ಯ ನಿರಂತರವಾಗಿ ವಿವಿಧ ರೀತಿಯಲ್ಲಿ ನಡೆಯಬೇಕಾಗಿದೆ. ಸರಕಾರದ ಆದೇಶಗಳು, ಸೂಚನೆಗಳು ಸಮಾಜದ ಎಲ್ಲಾ ವರ್ಗದ ಜನರಿಗೆ ಅತ್ಯಂತ ಸಮರ್ಪಕವಾಗಿ ತಲುಪಿಸುವ ಕಾರ್ಯವು ಅನಿವಾರ್ಯವಾಗಿದೆ. ಕಲೆಯ ಮೂಲಕ ಸಂದೇಶ ರವಾನಿಸುವ ಕಾರ್ಯವು ಅತ್ಯಂತ ಸಮರ್ಪಕವಾಗಿದ್ದು, ಯಕ್ಷಗಾನ ಹಾಗೂ ಗೊಂಬೆಯಾಟದ ಮಾಧ್ಯಮವನ್ನು ಇದಕ್ಕಾಗಿ ಉಪಯೋಗಿಸಿದ್ದು ಅತ್ಯಂತ ಆಕರ್ಷಣೀಯವಾದುದಾಗಿದೆ.  ಇದನ್ನು ದೇಶ ಹಾಗೂ ವಿದೇಶಗಳಲ್ಲಿ ಪಸರಿಸುವ ಕಾರ್ಯವನ್ನು ಪ್ರತಿಯೊಬ್ಬರೂ ಮಾಡಬೇಕಾಗಿದೆ. ಹೀಗೆ ಪ್ರಸಾರ ಮಾಡುವ ಪ್ರಕ್ರಿಯೆಯಲ್ಲಿ ಜಿಲ್ಲಾಡಳಿತವು ಈ ಸಂಸ್ಥೆಗಳಿಗೆ ನೈತಿಕ ಬೆಂಬಲ ನೀಡಬೇಕಾಗಿದೆ ಎಂದು ಜಿಲ್ಲಾಧಿಕಾರಿ ನುಡಿದರು.
ಆರೋಗ್ಯ ಇಲಾಖೆಯು ಸೂಚಿಸಿದ ನಿಬಂಧನೆಗಳನ್ನು ಅನುಸರಿಸಿ ನಡೆದ ಸರಳ ಕಾರ್ಯಕ್ರಮದಲ್ಲಿ ಕಾಸರಗೋಡು ಸರಕಾರಿ ಕಾಲೇಜಿನ ಪ್ರಾಂಶುಪಾಲ ಡಾ. ಎ.ಎಲ್. ಅನಂತಪದ್ಮನಾಭ, ತ್ರಿಕರಿಪುರ ಫೆÇೀಕ್ ಲೇಂಡ್ ಅಧ್ಯಕ್ಷ ಹಾಗೂ ಯುನೆಸ್ಕೊ ಸದಸ್ಯ ವಿ. ಜಯರಾಜನ್, ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯ ಯೋಗೀಶ್ ರಾವ್ ಚಿಗುರುಪಾದೆ ಈ ಸಂದರ್ಭದಲ್ಲಿ ಶುಭಹಾರೈಸಿದರು.
          ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಸಿರಿಬಾಗಿಲು, ಯಕ್ಷಗಾನ ಗೊಂಬೆಯಾಟದ ನಿರ್ದೇಶಕ ರಮೇಶ್ ಕೆ. ವಿ ಕಾಸರಗೋಡು, ಸರಕಾರಿ ಕಾಲೇಜಿನ ಯಕ್ಷಗಾನ ಸಂಶೋಧನ ಕೇಂದ್ರದ ಸಂಯೋಜನಾಧಿಕಾರಿ ಡಾ. ರತ್ನಾಕರ ಮಲ್ಲಮೂಲೆ, ಹಿರಿಯ ಯಕ್ಷಗಾನ ಕಲಾವಿದ ರಾಧಾಕೃಷ್ಣ ನಾವಡ ಈ ಮುಂತಾದವರು ಉಪಸ್ಥಿತರಿದ್ದರು. ರತ್ನಾಕರ ಮಲ್ಲಮೂಲೆ ಸ್ವಾಗತಿಸಿ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

1 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries