ತಿರುವನಂತಪುರ: ರಾಜ್ಯದಲ್ಲಿ ಬಸ್ ದರ ಹೆಚ್ಚಳಕ್ಕೆ ಕೇರಳ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಕನಿಷ್ಠ 8 ರೂ ಟಿಕೆಟ್ ದರವನ್ನು ಹೆಚ್ಚಿಸದಿದ್ದರೂ, ಕನಿಷ್ಠ ಪ್ರಯಾಣ ದೂರವನ್ನು ಕಡಿಮೆ ಮಾಡಲಾಗಿದೆ. ದರ ಹೆಚ್ಚಳ ಕೋವಿಡ್ ನಿಯಂತ್ರಣ ಕಾಲಾವಧಿಯ ವರೆಗೆ ಮಾತ್ರ ಎಂದು ಕ್ಯಾಬಿನೆಟ್ ಸಭೆ ನಿರ್ಧರಿಸಿದೆ.
ಪ್ರಸ್ತುತ ಸಾಮಾನ್ಯ ಬಸ್ ಐದು ಕಿಲೋಮೀಟರ್ ದೂರಕ್ಕೆ 8 ರೂ. ಕನಿಷ್ಠ ದರವಿರುವುದನ್ನು ಎರಡೂವರೆ ಕಿಲೋಮೀಟರ್ ಗೆ ಅಳವಡಿಸಲಾಗಿದೆ. ಆದರೆ ಖಾಸಗಿ ಬಸ್ ಮಾಲೀಕರು ಈ ಬಗ್ಗೆ ಪ್ರತಿಕ್ರಿಯಿಸಿ ಕನಿಷ್ಠ ದೂರ ಮಿತಿ ನಿಗದಿಪಡಿಸಿರುವುದರಿಂದ ಯಾವ ಪ್ರಯೋಜನವೂ ಆಗದು ಎಂದು ಹೇಳಿದ್ದಾರೆ.
ಕೋವಿಡ್ ಕಾರಣ ರಾಜ್ಯದಲ್ಲಿ ಕನಿಷ್ಟ ಟಿಕೆಟ್ ದರವನ್ನು 12 ರೂಗಳಿಗೆ ಹೆಚ್ಚಿಸಲು ಬಸ್ ಮಾಲೀಕರು ಒತ್ತಾಯಿಸಿದ್ದರು. ಆದರೆ ಪ್ರಯಾಣಿಕರ ಸಂಖ್ಯೆಯ ಮೇಲಿನ ನಿಬರ್ಂಧದಿಂದಾಗಿ ತೆರಿಗೆ ಹೆಚ್ಚಳವನ್ನು ಹಿಂಪಡೆಯಲಾಗಿತ್ತು. ಇದರೊಂದಿಗೆ ರಾಜ್ಯದ ಖಾಸಗಿ ಬಸ್ಸುಗಳು ಒಟ್ಟಾರೆಯಾಗಿ ಸೇವೆ ನಷ್ಟವೆಂದು ಸಂಚಾರ ಕಡಿತಗೊಳಿಸಿವೆ.
ಈ ಮಧ್ಯೆ ಹೆಚ್ಚುವರಿ ಬಸ್ ಶುಲ್ಕ ವಿಧಿಸುವ ಹೈಕೋರ್ಟ್ ಆದೇಶಕ್ಕೆ ಎರಡು ವಾರಗಳ ಹಿಂದೆ ಏಕ ಸದಸ್ಯ ಪೀಠ ಈ ಆದೇಶವನ್ನು ಮುಂದೂಡಿತ್ತು.