ಮಂಜೇಶ್ವರ: ಮಂಗಳೂರು ವಿಶ್ವವಿದ್ಯಾಲಯ ಡಾ.ಪಿ.ದಯಾನಂದ ಪೈ ಮತ್ತು ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಆ.1 ರಂದು ಶನಿವಾರ ಸಂಜೆ 4 ರಿಂದ ಝೂಂ ಆ್ಯಪ್ ಮೂಲಕ ವೆಬಿನಾರ್ ನಲ್ಲಿ ಕಾಸರಗೋಡಿನ ಹಿರಿಯ ಸಾಹಿತಿ, ಲೇಖಕ,ಯಕ್ಷಗಾನ ಅರ್ಥಧಾರಿ ವೈದ್ಯ ಡಾ.ರಮಾನಂದ ಬನಾರಿ ಅವರ ಅರ್ಥಾಯನ ಮತ್ತು ಒಳದಾರಿಯ ಬೆಳದಿಂಗಳು ಕೃತಿಗಳ ಬಿಡುಗಡೆ ಹಾಗು ತಾಳಮದ್ದಳೆ:ಸ್ವತಂತ್ರ ಕಲೆಯಾಗಬಹುದೇ? ಎಂಬ ವಿಷಯದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ.
ಎಡನೀರು ಮಠಾಧೀಶ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಅವರು ಕೃತಿ ಬಿಡುಗಡೆ ಹಾಗೆ ಆಶೀರ್ವಚನ ನೀಡುವರು. ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪೆÇ್ರ.ಪಿ.ಎಸ್.ಯಡಪಡಿತ್ತಾಯ ಅಧ್ಯಕ್ಷತೆ ವಹಿಸುವರು. ಮಂಗಳೂರು ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕ ಡಾ.ಧನಂಜಯ ಕುಂಬ್ಳೆ ಕೃತಿ ಅವಲೋಕನ ಮಾಡಲಿದ್ದಾರೆ. ಯಕ್ಷಗಾನ ಅರ್ಥಧಾರಿಗಳು ಮತ್ತು ಸಾಹಿತಿ ಡಾ.ರಮಾನಂದ ಬನಾರಿ ಮಂಜೇಶ್ವರ ಅವರು ವಿಶೇಷ ಉಪನ್ಯಾಸ ನೀಡುವರು.