ನವದೆಹಲಿ: ತೈಲ ಮಾರುಕಟ್ಟೆ ಕಂಪನಿಗಳು ಸಬ್ಸಿಡಿ ರಹಿತ ಎಲ್ ಪಿಜಿ ಬೆಲೆಯನ್ನು ಸತತ ಎರಡನೇ ತಿಂಗಳು ಏರಿಕೆ ಮಾಡಿವೆ. ಬೇರೆ ಬೇರೆ ವ್ಯಾಟ್ ದರಗಳಿಗೆ ಅನುಗುಣವಾಗಿ ಎಲ್ ಪಿಜಿ ದರ 1 ರೂಪಾಯಿಗಳಿಂದ 4.50 ರೂಪಾಯಿಗಳ ವರೆಗೆ ಏರಿಕೆಯಾಗಿದೆ.
ಜುಲೈ 1ರಿಂದ ಪರಿಷ್ಕೃತ ದರ ಜಾರಿಗೆ ಬಂದಿದ್ದು, ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 14.2 ಕೆ.ಜಿ ಸಬ್ಸಿಡಿ ರಹಿತ ಎಲ್ ಪಿಜಿ ದರ 1 ರೂಪಾಯಿ ಏರಿಕೆಯಾಗಿದ್ದರೆ, ಕೋಲ್ಕತ್ತಾದಲ್ಲಿ 4.50 ರೂಪಾಯಿ ಏರಿಕೆಯಾಗಿದೆ. ಮುಂಬೈ ಹಾಗೂ ಚೆನ್ನೈ ಗಳಲ್ಲಿ ಅನುಕ್ರಮವಾಗಿ 3.50 ರೂಪಾಯಿ ಹಾಗೂ 4 ರೂಪಾಯಿಗಳಷ್ಟು ಏರಿಕೆ ಕಂಡಿದೆ.
ಪ್ರತಿ ಮನೆಗೆ ವಾರ್ಷಿಕ 14.2 ಕೆ.ಜಿಯ 12 ಎಲ್ ಪಿಜಿ ಸಿಲೆಂಡರ್ ಗಳನ್ನು ಸರ್ಕಾರ ಸಬ್ಸಿಡಿ ದರದಲ್ಲಿ ನೀಡುತ್ತದೆ. ಹೆಚ್ಚುವರಿ ಸಿಲಿಂಡರ್ ಗಳನ್ನು ಮಾರುಕಟ್ಟೆ ದರದಲ್ಲಿ ಪಡೆಯಬೇಕಾಗುತ್ತದೆ. ಇದೇ ವೇಳೆ ಏವಿಯೇಷನ್ ಟರ್ಬೈನ್ ಇಂಧನ ದರವನ್ನೂ ತೈಲ ಕಂಪನಿಗಳು ಶೇ.7.5 ರಷ್ಟು ಏರಿಕೆ ಮಾಡಿವೆ.