ಕುಂಬಳೆ: ರಾಷ್ಟ್ರದ ಎಲ್ಲಾ ವಿದ್ಯಾರ್ಥಿಗಳಿಗೂ ಉನ್ನತ, ಗುಣಮಟ್ಟದ ಶಿಕ್ಷಣ ಒದಗಿಸುವ ಮತ್ತು ಸುದೃಢ ಶಿಕ್ಷಣ ವ್ಯವಸ್ಥೆ ಕಲ್ಪಿಸುವ ಧ್ಯೇಯದೊಂದಿಗೆ ನೂತನ ಶಿಕ್ಷಣ ನೀತಿಗೆ ಅನುಮೋದನೆ ನೀಡಿರುವ ಕೇಂದ್ರ ಸಂಪುಟದ ತೀರ್ಮಾನವನ್ನು ಮಂಜೇಶ್ವರ ಮಂಡಲ ಬಿಜೆಪಿಯ ಓಬಿಸಿ ಮೋರ್ಚಾ ಸ್ವಾಗತಿಸುತ್ತದೆ ಎಂದು ಓಬಿಸಿ ಮೋರ್ಚಾ ಮಂಡಲಾಧ್ಯಕ್ಷ ಚಂದ್ರಹಾಸ ಪೂಜಾರಿ ಕಡಂಬಾರ್ ಅವರು ತಿಳಿಸಿದರು.
ಪಕ್ಷದ ಮಂಡಲ ಕಚೇರಿಯಲ್ಲಿ ಗುರುವಾರ ನಡೆದ ಆನ್ ಲೈನ್ ಸಭೆಯಲ್ಲಿ ಅವರು ಅಭಿನಂದನೆ ಸಲ್ಲಿಸಿ ಮಾತನಾಡಿದರು.
ಮಂಡಲಾಧ್ಯಕ್ಷ ಚಂದ್ರಹಾಸ ಪೂಜಾರಿ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಓಬಿಸಿ ಮೋರ್ಚಾ ರಾಜ್ಯ ಕೋಶಾಧಿಕಾರಿ ನ್ಯಾಯವಾದಿ ನವೀನ್ ರಾಜ್, ಜಿಲ್ಲಾ ಸಮಿತಿ ಸದಸ್ಯ ಶಶಿ ಕುಂಬಳೆ, ರಾಮಕೃಷ್ಣ ಸಂತಡ್ಕ, ಮಂಡಲ ಉಪಾಧ್ಯಕ್ಷ ಮಧುಸೂದನ ದೇವೀನಗರ, ಜಯಶಂಕರ ಮುನ್ನಾರ್, ಕಾರ್ಯದರ್ಶಿ ಸಂಕಪ್ಪ ಸುವರ್ಣ ಬಾಡೂರು, ಕೋಶಾಧಿಕಾರಿ ಆನಂದ ತಚ್ಚಿರೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುಷ್ಪರಾಜ ಐಲ, ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ವಿನೋದನ್ ಕಡಪ್ಪರ ಕುಂಬಳೆ ಮೊದಲಾದವರು ಮಾತನಾಡಿದರು. ಮಂಡಲ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್ ಸ್ವಾಗತಿಸಿ, ಚಂದ್ರಹಾಸ ವಳಚ್ಚಾಲ್ ವಂದಿಸಿದರು.