ಕುವೈತ್: ಭಾರತದ ಪ್ರಯಾಣಿಕರು ಸಹಿತ ಏಳು ರಾಷ್ಟ್ರಗಳ ಜನರು ಕುವೈತ್ ಪ್ರವೇಶವನ್ನು ಅಲ್ಲಿಯ ಆಡಳಿತ ನಿರ್ಬಂಧಿಸಿದೆ. ಈ ಬಗ್ಗೆ ಭಾರತ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಮಲಬಾರ್ ಅಭಿವೃದ್ಧಿ ವೇದಿಕೆ ಕುವೈತ್ ಒತ್ತಾಯಿಸಿದೆ.
ರಜೆ ಕಡಿಮೆ ಇರುವವರು ಸಹಿತ ಸಾವಿರಾರು ವಲಸಿಗರು ಇದರಿಂದ ಸಂಕಷ್ಟಕ್ಕೊಳಗಾಗಲಿದ್ದಾರೆ. ಕೊರೊನಾ ಮಹಾಮಾರಿಯಿಂದ ವಿಮಾನವನ್ನು ಸ್ಥಗಿತಗೊಳಿಸಿದ ನಂತರ ಈಗಲೂ ಹಲವರು ಕುವೈತ್‍ನಲ್ಲಿ ಸಿಲುಕಿಕೊಂಡಿರುವರು. ಹಲವರು ಉದ್ಯೋಗ ಕಳೆದುಕೊಳ್ಳುವ ಹಾದಿಯಲ್ಲಿದ್ದಾರೆ ಮತ್ತು ಆಗಸ್ಟ್ 1 ರಿಂದ ಅಂತರರಾಷ್ಟ್ರೀಯ ವಾಯು ಸೇವೆಯ ಪುನಃರಾರಂಭದೊಂದಿಗೆ ಹಿಂದಿರುಗಬಹುದೆಂದು ಭಾವಿಸಿದವರಿಗೆ ಈ ನಿಷೇಧವು ಇದ್ದಕ್ಕಿದ್ದಂತೆ ಹಿನ್ನಡೆಯಾಗಿ ಮಾರ್ಪಟ್ಟಿದೆ.
ಈ ವಿಷಯದ ಬಗ್ಗೆ ಭಾರತ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳದ ಹೊರತು ನೂರಾರು ಅನಿವಾಸಿ ಭಾರತೀಯರ ಭವಿಷ್ಯ ಅನಿಶ್ಚಿತತೆಯಾಗುವುದು. ಭಾರತ-ಕುವೈತ್ ದ್ವಿಪಕ್ಷೀಯ ಮಾತುಕತೆಗಳ ಮೂಲಕ ಈ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸಬೇಕು ಮತ್ತು ಕುವೈತ್ ವಲಸಿಗರಿಗೆ ಸ್ವದೇಶಕ್ಕೆ ಮರಳಲು ಅವಕಾಶ ನೀಡಬೇಕು ಎಂದು ಮಲಬಾರ್ ಅಭಿವೃದ್ಧಿ ವೇದಿಕೆ ಒತ್ತಾಯಿಸಿತು. ಈ ಸಂಬಂಧ ಭಾರತದ ಪ್ರಧಾನಿ ಮತ್ತು ವಿದೇಶಾಂಗ ಸಚಿವರಿಗೆ ಮನವಿ ಸಲ್ಲಿಸಲಾಗುವುದು ಎಂದು ಪದಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.