ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳ ಜಾರಿ ಆರ್ಥಿಕ ವರ್ಷದ ವಾರ್ಷಿಕ ಯೋಜನೆಗಳಲ್ಲಿ ಬದಲಾವಣೆಗಳಿಗೆ ಅಂಗೀಕಾರ ನೀಡಲಾಗಿದೆ.
ಗೂಗಲ್ ಮೀಟ್ ಮೂಲಕ ಆನ್ ಲೈನ್ ಆಗಿ ನಡೆದ ಜಿಲ್ಲಾ ಯೋಜನೆ ಸಮಿತಿ ಸಭೆಯಲ್ಲಿ ಈ ಅಂಗೀಕಾರ ನೀಡಲಾಗಿದೆ. ಈ ಮೂಲಕ ಪ್ರಥಮ ಬಾರಿಗೆ ಈ ಸಭೆ ಆನ್ ಲೈನ್ ಆಗಿ ನಡೆದಿದೆ.
ಕಾಸರಗೋಡು ಮತ್ತು ನೀಲೇಶ್ವರ ನಗರಸಭೆಗಳ ಜಾರಿ ವರ್ಷದ ಅಯ್ಯಂಗಾಳಿ ನಗರ ನೌಕರಿ ಖಾತರಿ ಯೋಜನೆಯ ಲೇಬರ್ ಬಜೆಟ್, ಆಕ್ಷನ್ ಪ್ಲಾನ್ ಗಳನ್ನು ಅಂಗೀಕರಿಸಲಾಗಿದೆ. ಕಾಞಂಗಾಡ್ ಬ್ಲೋಕ್ ಪಂಚಾಯತ್ ನ ಮತ್ತು 20 ಗ್ರಾಮಪಂಚಾಯತ್ ಗಳ ಬದಲಾವಣೆ ನಡೆಸಲಾದ ಯೋಜನೆಗಳಿಗೆ ಅಂಗೀಕಾರ ನೀಡಲಾಗಿದೆ.