HEALTH TIPS

ನಿರೀಕ್ಷೆಗೆ ಮೀರಿ ಅಬ್ದುಲ್ ರಯಾಸ್ ನ ಸಾಧನೆ-ಎ ಪ್ಲಸ್ ಪಡೆದು ಅಲ್ಲ!


              ಮಂಜೇಶ್ವರ: ಮಂಗಳವಾರ ಪ್ರಕಟವಾದ ಕೇರಳ ಎಸ್  ಎಸ್  ಎಲ್ ಸಿ ಪರೀಕ್ಷಾ ಫಲಿತಾಂಶ ಹೊರ ಬರುತ್ತಿದ್ದಂತೆಯೇ ಬಹುತೇಕ ಮಂದಿ ಎಲ್ಲಾ ವಿಷಯಗಳಲ್ಲೂ ಎ ಪ್ಲಸ್ ಗ್ರೇಡಿನಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಫೆÇೀಟೋ ಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹರಿಯಬಿಟ್ಟು ಸಂತೋಷದ ಕ್ಷಣಗಳನ್ನು ಆಚರಿಸಿರುವುದು ಕಂಡುಬಂದಿರುವುದು ಸಾಮಾನ್ಯ.
         ಆದರೆ ಕುಂಜತ್ತೂರು ಹೈಯರ್ ಸೆಕಂಡರಿ ಶಾಲೆಯಲ್ಲಿ ಕಲಿತ ಕುಂಜತ್ತೂರು ನಿವಾಸಿಯಾದ ಜಬ್ಬಾರ್ ಹಾಗೂ ಫಾತಿಮತ್ ಸುಹರಾ ದಂಪತಿಗಳ ಪುತ್ರ ಅಬ್ದುಲ್ ರಯಾಸ್ ಎಂಬ ವಿದ್ಯಾರ್ಥಿಯ ಫಲಿತಾಂಶ ಎಲ್ಲಾ ವಿಷಯಗಳಲ್ಲೂ ಎ ಗ್ರೇಡ್ ಅಲ್ಲವಾಗಿದ್ದರೂ ಅದಕ್ಕಿಂತ ಮಿಗಿಲಾಗಿತ್ತು.  ವಿದ್ಯಾರ್ಥಿಯ ಕುಟುಂಬಕ್ಕೆ ಹಾಗೂ ಈತನನ್ನು ಕಲಿಸಿದ ಅಧ್ಯಾಪಕ ವೃಂದ ಹರ್ಷದ ಮುಗಿಲು ಮೇರೆಮೀರಿತ್ತು ಎಂದರೂ ತಪ್ಪಲ್ಲ.
          ಈ ವಿದ್ಯಾರ್ಥಿ ಹುಟ್ಟಿನಿಂದಲೇ ಮೂಗ ಹಾಗೂ ಕಿವುಡನಾಗಿದ್ದು ಕುಟುಂಬದ ಬಡತನದ ಕಾರಣ ಸಾಮಾನ್ಯ ಶಾಲೆಯಲ್ಲಿ ಎಲ್ಲರೊಂದಿಗೆ ಕಲಿಯಬೇಕಾಯಿತು. ವಿಶೇಷ ಚೇತನರಿಗೆ ಪ್ರತ್ಯೇಕ ಶಾಲೆಗಳಿದ್ದರೂ ಬಾಲಕನನ್ನು ಅಲ್ಲಿಗೆ ಕಳಿಸುವ ಸ್ಥಿತಿಯಲ್ಲಿ ಪಾಲಕರಿರಲಿಲ್ಲ. ಅಬ್ದುಲ್ ರಯಾಸ್ ಹತ್ತನೇ ತರಗತಿಗೆ ತಲಪುತ್ತಿರುವಂತೆ ಕುಟುಂಬ ಹಾಗೂ ಅಧ್ಯಾಪಕರುಗಳು ಈ ಮಗು ಹೇಗೆ ಉತ್ತೀರ್ಣರಾಗಬಹುದೆಂಬ ಆತಂಕದಲ್ಲಿದ್ದರು. ಆದರೆ ಮಂಗಳವಾರದಂದು ಪ್ರಕಟಗೊಂಡ ಫಲಿತಾಂಶ ಕುಟುಂಬಸ್ಥರ ಹಾಗೂ ಅಧ್ಯಾಪಕರುಗಳ ಆತಂಕಗಳಿಗೆ ಸುಖಾಂತ್ಯಗೊಳಿಸಿತು. ನಿರೀಕ್ಷಿಸದ ರೀತಿಯಲ್ಲಿ ತೇರ್ಗಡೆಯಾದ ಫಲಿತಾಂಶವಾಗಿತ್ತು. ಈ ಫಲಿತಾಂಶವು ಕುಟುಂಬವನು ಆನಂದದ ಕಡಲಲ್ಲಿ ತೇಲಾಡಿಸಿದೆ.
          ಈತ ಶಾಲೆಯಲ್ಲಿ ಉತ್ತಮ ಫುಟ್ಬಾಲ್ ಆಟಗಾರನಾಗಿದ್ದು, ಜೊತೆಗೆ ಸ್ಟೂಡೆಂಟ್ ಪೆÇಲೀಸ್ ಕೆಡೆಟ್(ಎಸ್ ಪಿ ಸಿ) ನಲ್ಲೂ ಆಸಕ್ತಿ ಇರುವ ವಿದ್ಯಾರ್ಥಿಯಾಗಿದ್ದನೆಂದು ಅಧ್ಯಾಪಕರು ಹೇಳಿದ್ದಾರೆ.  ಕುಂಜತ್ತೂರು ಹೈಯರ್ ಸೆಕಂಡರಿ ಶಾಲೆಯಲ್ಲಿ 78 ಮಂದಿ ಪರೀಕ್ಷೆ ಬರೆದಿದ್ದು ಆ ಪೈಕಿ 75 ಮಂದಿ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಇದರಲ್ಲಿ ಐವರು ವಿದ್ಯಾರ್ಥಿಗಳಾದ ಹರ್ಷಿ, ಹರ್ಷಿತಾ, ದುಲೈಖಾಬಿ , ಖದೀಜತ್ ಸಾಜಿದಾ  ಹಾಗೂ ತಫ್ಸಿರ ಎಂಬವರು ಎಲ್ಲಾ ವಿಷಯಗಳಲ್ಲೂ ಎ ಪ್ಲಸ್ ಅಂಕಗಳನ್ನು ಪಡೆದು ಎಲ್ಲಾ ಉತ್ತೀರ್ಣರಾಗಿ ಶಾಲೆಗೆ ಕೀರ್ತಿಯನ್ನು ತಂದಿರುವುದಾಗಿ ಮುಖ್ಯೋಪಾಧ್ಯಾಯರು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries