HEALTH TIPS

ಕೋವಿಡ್ ಗುಣಮುಖನಾದ ವ್ಯಕ್ತಿಗೆ ಮತ್ತೆ ಕೋವಿಡ್!


             ಕಾಸರಗೋಡು: ಕೋವಿಡ್ ಬಾಧಿಸಿ ಚಿಕಿತ್ಸೆ ಪಡೆದು ಗುಣಮುಖನಾದ ಉದುಮ ಬಾರಾ ಮುಕ್ಕುನೋಥ್‍ನ 42 ವರ್ಷದ ವ್ಯಕ್ತಿಗೆ ಕಳವಳಕಾರಿಯಾದ ವಿದ್ಯಮಾನದಲ್ಲಿ ನಿನ್ನೆ ಮತ್ತೆ ಕೋವಿಡ್ ಕಂಡುಬಂದಿದೆ. ವಿದೇಶದಿಂದ ಆಗಮಿಸಿದ್ದ ಈ ವ್ಯಕ್ತಿಗೆ ಕಳೆದ ತಿಂಗಳು ಮಸ್ಕತ್ ನ ರಾಸಲ್ ಖೈಮಾದ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆಗೆ ಒಳಗಾಗಿದ್ದರು. ಅಲ್ಲಿಯ ಆಸ್ಪತ್ರೆಯೊಂದರಲ್ಲಿ ಅವರು ಎರಡು ವಾರ ಚಿಕಿತ್ಸೆ ಪಡೆದಿದ್ದರು.  ಕೋವಿಡ್ ನಕಾರಾತ್ಮಕವೆಂದು ಕಂಡುಬಂದ ಬಳಿಕ ಜೂ. 20 ರಂದು ಕಣ್ಣೂರು ವಿಮಾನ ನಿಲ್ದಾಣದ ಮೂಲಕ ಮನೆಗೆ ಮರಳಿದ್ದರು.
               ಆದರೆ ಈ ವ್ಯಕ್ತಿ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿರುವಂತೆ ಕೋವಿಡ್ ಮುಕ್ತ ನಾನೆಂದು ತಿಳಿಸಿರಲೂ ಇರಿಲ್ಲ ಎಂದು ಮೂಲಗಳಿಂದ ತಿಳಿಯಲಾಗಿದೆ. ಅಲ್ಲಿಂದ ಮನೆಗೆ ಬಂದ ಕೂಡಲೇ ಹೋಂ ಕ್ವಾರಂಟೈನ್ ಗೆ ಒಳಗಾದರು. ಆಶಾ ಕಾರ್ಯಕರ್ತೆಯರು ಮನೆ ಸಂದರ್ಶನ ನಡೆಸಿದಾಗ ತಾನು ಕೋವಿಡ್ ಬಾಧಿಸಿ ಗುಣಮುಖನಾದವನೆಂದು ತಿಳಿಸಿದ್ದು ಈ ವೇಳೆ ಸಂಶಯಗೊಂಡ ಆಶಾ ಕಾರ್ಯಕರ್ತೆಯರ ಸೂಚನೆಯಂತೆ ಜೂ. 29 ರಂದು ಪಿಎಚ್‍ಸಿಗೆ ಕರೆದು ಜೊಲ್ಲು ತಪಾಸಿದರು. ಈ ವೇಳೆ ಕೋವಿಡ್ ಮತ್ತೆ ದೃಢಪಟ್ಟಿದ್ದು ನಿನ್ನೆ ಅವರನ್ನು ಕಾಸರಗೋಡಿನ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
        ಕೋವಿಡ್ ಬಾಧಿಸಿ ಗುಣಮುಖರಾದ ವ್ಯಕ್ತಿಗೆ ಮತ್ತೆ ಕೋವಿಡ್ ದೃಢಪಟ್ಟಿರುವುದು ಇದೀಗ ಭಾರೀ ಆತಂಕಕ್ಕೂ ಕಾರಣವಾಗುತ್ತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries