ತಿರುವನಂತಪುರ: ಕಳೆದ ವರ್ಷ ವಾಟ್ಸ್ ಆಫ್ ಸಹಿತ ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ಜನಪ್ರೀಯತೆಗಳಿಸಿದ್ದ ಚೆಂಡೆ ಮೇಳವೊಂದರಲ್ಲಿ ಕುಣಿಯುವ ಸುಂದರ ಕೃಷ್ಣನ ವೇಷ ಧರಿಸಿದ್ದ ಪ್ರತಿಭಾನ್ವಿತೆಯಾದ ದೇವೊ ಚಂದನಾಳ ತಂದೆ ಬಿ.ಚಂದ್ರಬಾಬು (38)ಬುಧವಾರ ಆಸ್ಪತ್ರೆಯಲ್ಲಿ ನೇಣಿಗೆ ಶರಣಾದ ಆಘಾತಕಾರಿ ಘಟನೆ ನಡೆದಿದೆ.
ಕಳೆದ ಕೆಲವು ಸಮಯಗಳಿಂದ ದೇವೊ ಚಂದನಾ ಮಿದುಳು ಸಂಬಂಧಿ ಅಸೌಖ್ಯಕ್ಕೊಳಗಾಗಿ ತಿರುವನಂತಪುರಂನ ಎಸ್‍ಎಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಕೆಯ ಚಿಕಿತ್ಸೆಗೆ ಭಾರೀ ಮೊತ್ತದ ಹಣ ಬೇಕಾಗಿದ್ದು ಕಡು ಬಡತನದಲ್ಲಿದ್ದ ಚಂದ್ರಬಾಬು ಮನನೊಂದು ಆತ್ಮಹತ್ಯೆಗೈದರೆಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಇವರು ಆಲಪ್ಪುಳ ನೂರನಾಡು ಮೂಲದವರಾಗಿದ್ದಾರೆ.
ನೂರನಾಡು ಪುತ್ತುವಿಲ್ ದೇವಸ್ಥಾನದಲ್ಲಿ ನಡೆಯುತ್ತಿರುವ ಉತ್ಸವದಲ್ಲಿ ದೇವೋ ಚಂದನಾ ಅವರ ಬಾಲಕೃಷ್ಣನ ನೃತ್ಯದ ವೇಷವೊಂದು ಭಾರೀ ಜನಪ್ರೀಯತೆಗಳಿಸಿತ್ತು. ಆದರೆ ಕೂಲಿ ಮಾಡಿದ ಪೆÇೀಷಕರು ತಮ್ಮ ಮಗುವಿನ ಚಿಕಿತ್ಸೆಯ ವೆಚ್ಚವನ್ನು ಭರಿಸಲು ಅಸಮರ್ಥರಾಗಿದ್ದರು. ಕೆಲವೇ ದಿನಗಳಲ್ಲಿ ನಡೆಯಲಿರುವ ಶಸ್ತ್ರ ಚಿಕಿತ್ಸೆಗೆ ಭಾರೀ ಮೊತ್ತದ ಹಣ ಬೇಕಾಗಿದ್ದು ಸಂಬಂಧಿಕರು, ಸ್ನೇಹಿತರು ಮಗುವಿನ ಚಿಕಿತ್ಸೆಗಾಗಿ ಹಣವನ್ನು ಸಂಗ್ರಹಿಸಲು ಪ್ರಾರಂಭಿಸಿದ್ದರು. ಈ ಉದ್ದೇಶಕ್ಕಾಗಿ ಬ್ಯಾಂಕ್ ಖಾತೆ ಕೂಡಾ ತೆರೆಯಲಾಗಿತ್ತು. ಈ ಮಧ್ಯೆ ಆಕೆಯ ತಂದೆಯ ಸಾವು ನೋವಿಗೆ ಕಾರಣವಾಗಿದೆ.