ಹುಬ್ಬಳ್ಳಿ: ಚೀನಾ ಮೂಲದ ಶೇರ್ ಇಟ್ ಆಪ್ ಗೆ ಕರ್ನಾಟಕದ ಧಾರವಾಡ ಮೂಲದ ವಿದ್ಯಾರ್ಥಿ ಸಡ್ಡು ಹೊಡೆದು ತನ್ನದೇ ವಿನೂತನ ವೇಗದ ದತ್ತಾಂಶ ರವಾನೆ ಮತ್ತು ಸ್ವೀಕರಿಸಬಲ್ಲ ಆಪ್ ಅನ್ನು ಸಿದ್ಧಪಡಿಸಿದ್ದಾರೆ.
ಗಲ್ವಾನ್ ಸಂಘರ್ಷದ ಬಳಿಕ ಭಾರತ ಚೀನಾ ಸಂಬಂಧ ಹಳಸಿದ್ದು, ಇದರ ನಡುವೆಯೇ ಭಾರತ ಸರ್ಕಾರ ದೇಶದ ಆಂತರಿಕ ಭದ್ರತೆ ಮತ್ತು ದತ್ತಾಂಶ ಸೋರಿಕೆ ಕಾರಣ ನೀಡಿ ಚೀನಾದ 59 ಆಪ್ ಗಳನ್ನು ನಿಷೇಧಿಸಿದೆ. ಚೀನಾ ಆಪ್ ಗಳಿಗೆ ಕೇಂದ್ರ ಸರ್ಕಾರ ನಿಷೇಧ ಹೇರಿದ ಬೆನ್ನಲ್ಲೇ ಚೀನಾ ಆಪ್ ಗಳಿಗೆ ಪರ್ಯಾಯ ಆಪ್ ಗಳ ಹುಡುಕಾಟ ಆರಂಭವಾಗಿದೆ. ಜೊತೆಗೆ ಪ್ರಮುಖ ಫೈಲ್ ಶೇರಿಂಗ್ ಆಪ್ ಶೇರ್ ಇಟ್ ಗೆ ಪರ್ಯಾಯವಾಗಿ ಜೆಡ್ ಶೇರ್ ಆಪ್ ಬಿಡುಗಡೆಯಾಗಿದೆ.
ಈ ಜೆಡ್ ಶೇರ್ ಆಪ್ ಅನ್ನು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಕನ್ಸೂರು ಗ್ರಾಮದ ನಿವಾಸಿ ಶ್ರವಣ್ ವಂಸತ್ ಹೆಗ್ಡೆ ಜೆಡ್ ಅಭಿವೃದ್ಧಿ ಪಡಿಸಿದ್ದಾರೆ. ಶ್ರವಣ್ ವಂಸತ್ ಹೆಗ್ಡೆ ಧಾರವಾಡದ ಸಿಎಸ್ ಕಾಲೇಜಿನಲ್ಲಿ ಬಿಸಿಎ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಈ ಜೆಡ್ ಶೇರ್ ಆಪ್ ಅನ್ನು ಈ ವರೆಗೂ 1ಲಕ್ಷಕ್ಕೂ ಅಧಿಕ ಮಂದಿ ಇನ್ ಸ್ಟಾಲ್ ಮಾಡಿಕೊಂಡಿದ್ದು, ಪ್ಲೇ ಸ್ಟೋರ್ ನಲ್ಲಿ 3.9 ರೇಟಿಂಗ್ ಪಡೆದುಕೊಂಡಿಗೆ. ಅಲ್ಲದೆ ಈ ಆಪ್ ಕುರಿತಂತೆ ಸುಮಾರು 2 ಸಾವಿರ ರಿವ್ಯೂಗಳು ಬಂದಿದೆ.
ಈ ಬಗ್ಗೆ ಮಾತನಾಡಿರುವ ಶ್ರವಣ್ ವಂಸತ್ ಹೆಗ್ಡೆ 15 ದಿನಗಳ ಅಂತರದಲ್ಲಿ ಈ ಆಪ್ ಅನ್ನು ತಯಾರಿಸಲಾಗಿದ್ದು, ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿದೆ ಎಂದು ಹೇಳಿದ್ದಾರೆ. ಶ್ರವಣ್ ಈ ಹಿಂದೆ ಕರ್ನಾಟಕ ಯೂನಿವರ್ಸಿಟಿಗಾಗಿ ಹಲವು ಬಗೆಯ ಆಪ್ ಗಳನ್ನು ತಯಾರಿಸಿದ್ದಾನೆ. ಪ್ರಧಾನಿ ನರೇಂದ್ರ ಮೋದಿ ಅವರು ಸ್ವದೇಶಿ ವಸ್ತುಗಳ ಕುರಿತು ಮಾತನಾಡಿದಾಗ ಸ್ವದೇಶಿ ಆಪ್ ತಯಾರಿಸುವ ಆಸೆ ಹುಟ್ಟಿತು. ಜೂನ್ ತಿಂಗಳ ಆರಂಭದಲ್ಲಿ ಈ ಆಪ್ ತಯಾರಿಕೆ ಆರಂಭಿಸಿದೆ. 2 ವಾರದಲ್ಲಿ ಆಪ್ ಸಿದ್ಧವಾಯಿತು. ಝೆಡ್ ಶೇರ್ ಪ್ರತೀ ಸೆಕೆಂಡ್ ಗೆ 6 ರಿಂದ 10 ಎಂಬಿಪಿಎಸ್ ವರೆಗಿನ ವೇಗದಲ್ಲಿ ಫೈಲ್ ಶೇರ್ ಮಾಡುತ್ತದೆ. ಈ ಆಪ್ ನಲ್ಲಿ ಎಲ್ಲ ರೀತಿಯ ಅಂದರೆ, ಫೆÇೀಟೋ, ವಿಡಿಯೋ, ಪಿಡಿಎಫ್, ಆಪ್ ಗಳು ಸೇರಿದಂತೆ ಬಹುತೇಕ ಎಲ್ಲ ರೀತಿಯ ಫೈಲ್ ಗಳನ್ನು ಶೇರ್ ಮಾಡಬಹುದು ಎಂದು ಹೇಳಿದ್ದಾರೆ.