ಮಂಜೇಶ್ವರ: 2019-20ನೇ ಸಾಲಿನ ಹತ್ತನೇ ತರಗತಿ ಪರೀಕ್ಷೆಯಲ್ಲಿ ಕುಂಜತ್ತೂರು ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯು ಉತ್ತಮ ಫಲಿತಾಂಶ ವನ್ನು ದಾಖಲಿಸಿದೆ. ಪರೀಕ್ಷೆಗೆ ಕುಳಿತ 78 ಮಂದಿ ವಿದ್ಯಾರ್ಥಿಗಳಲ್ಲಿ 75 ಮಂದಿ ಉತ್ತೀರ್ಣರಾಗಿರುವರು. ಐದು ಮಂದಿ ವಿದ್ಯಾರ್ಥಿಗಳು ಎಲ್ಲಾ ವಿಷಯಗಳಲ್ಲೂ ಎ ಪ್ಲಸ್ ಗಳಿಸಿದ್ದಾರೆ. ಅರ್ಶಿ, ಹರ್ಷಿತಾ, ದುಲೈಕಾಬಿ, ಕದೀಜತ್ ಸಾಜಿದ, ತಫ್ಸೀರಾ ಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿನಿಯರಾಗಿದ್ದಾರೆ.ಶಾಲಾ ಶಿಕ್ಷಕ-ರಕ್ಷಕ ಸಂಘ, ಶಾಲಾಭಿವೃದ್ದಿ ಸಮಿತಿ, ಮಾತೃ ಮಂಡಳಿ, ,ಹಳೆ ವಿದ್ಯಾರ್ಥಿ ಸಂಘ, ಶಾಲಾ ಮುಖ್ಯೋಪಾಧ್ಯಾಯರು,ಅಧ್ಯಾಪಕ-ಅಧ್ಯಾಪಕೇತರ ವೃಂದ ಸಾಧಕರಿಗೆ ಹಾಗೂ ಉತ್ತಮ ಫಲಿತಾಂಶ ದಾಖಲಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಅಭಿನಂದನೆಗಳನ್ನು ಸಲ್ಲಿಸಿದೆ.
ಉತ್ತಮ ಸಾಧನೆ ತೋರಿದ ಕುಂಜತ್ತೂರು ಶಾಲೆ
0
ಜುಲೈ 02, 2020